Weekly horoscope|ವಾರ ಭವಿಷ್ಯ,ಈ ವಾರ ಹೇಗಿದೆ ನಿಮ್ಮ ರಾಶಿ ಯೋಗ
Weekly horoscope|ವಾರ ಭವಿಷ್ಯ,ಈ ವಾರ ಹೇಗಿದೆ ನಿಮ್ಮ ರಾಶಿ ಯೋಗ
ಲೇಖನ :- ತಿರುಮಲ ಶರ್ಮ.ಬೆಂಗಳೂರು.
ಈ ವಾರದಲ್ಲಿ (weekly)ಚಂದ್ರನು ಕನ್ಯಾ ಮತ್ತು ತುಲಾ ರಾಶಿಗಳ ನಡುವೆ ಸಂಚರಿಸುತ್ತಿದ್ದಾನೆ. ತುಲಾ ರಾಶಿಯಲ್ಲಿ ಮೂರು ಗ್ರಹಗಳ ತ್ರಿಗ್ರಹ ಸಂಯೋಗದಿಂದಾಗಿ ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಒಳ್ಳೆಯ ಅವಕಾಶ ನಿರ್ಮಾಣವಾಗಿದೆ.
ವಿಶೇಷತೆ ಎಂದರೆ — ಆಯುಷ್ಮಾನ್ ಮತ್ತು ಐಶ್ವರ್ಯ ಯೋಗಗಳ ಬಲದಿಂದ ಕೆಲವು ರಾಶಿಯವರು ಅನಿರೀಕ್ಷಿತ ಹಣಾಗಮನ, ಹೊಸ ಅವಕಾಶಗಳು ಮತ್ತು ಕುಟುಂಬದಲ್ಲಿ ಹರ್ಷದ ಸಂದರ್ಭಗಳನ್ನು ಅನುಭವಿಸುವರು. ವಿಶೇಷವಾಗಿ ಮಕರ, ಕುಂಭ ಮತ್ತು ವೃಷಭ ರಾಶಿಯವರಿಗೆ ಶುಭಯೋಗಗಳು ಹೆಚ್ಚಿನ ಫಲಕಾರಿಯಾಗಲಿವೆ.
ಅಕ್ಟೋಬರ್ 19 ರಿಂದ 25, 2025 ರ ವಾರದ ರಾಶಿಫಲದ(rashi pala) ಜೊತೆಗೆ ಅದೃಷ್ಟ ಸಂಖ್ಯೆ ಮತ್ತು ಶುಭ ದಿನಗಳ ವಿವರಗಳು ಈ ಕೆಳಗಿನಂತಿವೆ
ಮೇಷ:-ವಾರದ ಆರಂಭದಲ್ಲಿ ಕಣ್ಣಿನ ತೊಂದರೆ ಹಾಗೂ ಕುಟುಂಬ ಕಲಹಗಳು ಸಾಧ್ಯ. ಆದರೆ ಮಧ್ಯಭಾಗದಿಂದ ಧಾರ್ಮಿಕ ಯೋಗ,(Darmika yoga) ಆರ್ಥಿಕ ಸಹಕಾರದಿಂದ ಸಂತೋಷ.ನಾಯಕತ್ವ ಗುಣ ವೃದ್ಧಿ, ಹಣದ ವ್ಯವಹಾರ ಏರಿಳಿತ ಇರಲಿದೆ.ಅ
ದೃಷ್ಟ ಸಂಖ್ಯೆ: 3
ಶುಭ ದಿನಗಳು: ಮಂಗಳವಾರ,ಗುರುವಾರ
ವೃಷಭ:-ನಿಮ್ಮ ಮೇಲೆ ಕೆಲವರು ಪ್ರಭಾವ ಬೀರುವ ಸಂಭವ. ವಾಣಿಜ್ಯ ಅಥವಾ ವ್ಯವಹಾರದಲ್ಲಿ ಎಚ್ಚರ ಅಗತ್ಯ. ಅತಿಯಾದ ಸಂವೇದನೆಗಳಿಂದ ದೂರವಿರಿ.ಕುಟುಂಬದ ಕಾಳಜಿ ವಹಿಸಿ.
ಅದೃಷ್ಟ ಸಂಖ್ಯೆ: 6
ಶುಭ ದಿನಗಳು: ಬುಧವಾರ, ಶುಕ್ರವಾರ
ಮಿಥುನ:-ಸಂಬಂಧಿಕರೊಂದಿಗೆ ಭೂ ವಿವಾದ ಅಥವಾ ಗಲಾಟೆ ಸಂಭವ. ಕೆಲಸದ ಒತ್ತಡದಿಂದ ಕುಟುಂಬಕ್ಕೆ ಕಡಿಮೆ ಸಮಯ ಸಿಗಬಹುದು.
ಅದೃಷ್ಟ ಸಂಖ್ಯೆ: 5
ಶುಭ ದಿನಗಳು: ಸೋಮವಾರ, ಗುರುವಾರ.
ಕಟಕ:-ಧಾರ್ಮಿಕ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚಳ. ಹಣಕಾಸು ಸ್ವಲ್ಪ ಕಠಿಣ ಆದರೆ ಹಳೆಯ ಕೆಲಸಗಳು ಫಲ ನೀಡಲಿವೆ.ಆರ್ಥಿಕ ಏರಿಳಿತ ಇರಲಿದೆ.
ಅದೃಷ್ಟ ಸಂಖ್ಯೆ: 2
ಶುಭ ದಿನಗಳು: ಭಾನುವಾರ, ಶುಕ್ರವಾರ
ಸಿಂಹ:-ಕೆಲಸದ ಬಿಕ್ಕಟ್ಟುಗಳು ಇರಬಹುದು ಆದರೆ ಹೊಸ ವಿಚಾರಗಳು ಯಶಸ್ಸು ತರುವುದು. ಸಹೋದ್ಯೋಗಿಗಳೊಂದಿಗೆ ಸಮನ್ವಯ ಅಗತ್ಯ.
ಅದೃಷ್ಟ ಸಂಖ್ಯೆ: 1
ಶುಭ ದಿನಗಳು: ಸೋಮವಾರ, ಗುರುವಾರ
ಕನ್ಯಾ:-ಪ್ರಯಾಣ ಮತ್ತು ಹೊಸ ಯೋಜನೆಗಳ ಸಮಯ. ಸಹೋದ್ಯೋಗಿಗಳ ಅಸಹಕಾರ ಕಾಡಬಹುದು, ಆದರೂ ಧೈರ್ಯದಿಂದ ಮುಂದುವರಿಯಿರಿ.ಕಲಾನಿಧಿ ಯೋಗದಿಂದ ಸೃಜನಾತ್ಮಕ ವೃತ್ತಿ, ಕಲೆ, ಮಾಧ್ಯಮ ಕ್ಷೇತ್ರದಲ್ಲಿ ಯಶಸ್ಸು. ವ್ಯಾಪಾರಿಗಳಿಗೆ ಉತ್ತಮ ಒಪ್ಪಂದಗಳು.
ಅದೃಷ್ಟ ಸಂಖ್ಯೆ: 5
ಶುಭ ದಿನಗಳು: ಬುಧವಾರ, ಶನಿವಾರ
ತುಲಾ:- ಮನಸ್ಸಿಗೆ ಅಶಾಂತಿ ಆಗಬಹುದು, ಆದರೆ ಧಾರ್ಮಿಕ ಓಡಾಟ ಶಾಂತಿ ತರುತ್ತದೆ. ಕುಟುಂಬದ ಸಂತೋಷ ಮುಖ್ಯವಾಗಲಿದೆ.
ಅದೃಷ್ಟ ಸಂಖ್ಯೆ: 7
ಶುಭ ದಿನಗಳು: ಸೋಮವಾರ, ಶುಕ್ರವಾರ
ವೃಶ್ಚಿಕ :- ವೃಶ್ಚಿಕರಾಶಿಯವರಿಗೆ ಈ ವಾರ ಕೃಷಿ ಹಾಗೂ ಆರ್ಥಿಕ ಕಾರ್ಯಗಳಲ್ಲಿ ಪ್ರಯತ್ನ ಹೆಚ್ಚಿರಬೇಕು. ಕೆಲವು ಕಾರ್ಯಗಳು ಸವಾಲಿನದ್ದಾಗಿರಬಹುದು. ಸಂಗಾತಿಯಾದವರು ಕೆಲವು ಅನುಮಾನಗಳನ್ನು ತೋರಬಹುದು. ಆದರೂ ಸಂಯಮ ಮತ್ತು ಶಾಂತಿಯಿಂದ ಮುನ್ನಡೆಯುವ ಸಮಯ.
ಅದೃಷ್ಟ ಸಂಖ್ಯೆ: 27,
ಅದೃಷ್ಟ ದಿನ:ಮಂಗಳವಾರ, ಗುರುವಾರ
ಧನು:- ದಾಂಪತ್ಯ ಹಾಗೂ ಕುಟುಂಬ ಜೀವನದಲ್ಲಿ ಶಾಂತಿ ಇರಲಿ. ದೂರ ಪ್ರಯಾಣ ಹಾಗೂ ಅಚಾತುರ್ಯ ಖರ್ಚು ಉಂಟಾಗಬಹುದು.
ಅದೃಷ್ಟ ಸಂಖ್ಯೆ: 3
ಶುಭ ದಿನಗಳು: ಸೋಮವಾರ, ಗುರುವಾರ
ಮಕರ :- ಸಾಲದಿಂದ ಹಣದ ಅಸ್ತಿರತೆ, ಉದ್ಯಮಗಳಲ್ಲಿ ಜಯ, ಧನಯೋಗ, ಹಿಂದೆ ಇದ್ದ ಸಾಲಗಳು ತೀರುವ ಸಮಯ ಇದು. ವ್ಯಾಪಾರ ವ್ಯವಹಾರ, ಉದ್ಯಮ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಮನೆಯಲ್ಲಿ ಹಬ್ಬದ ಕಳೆ ದುಪ್ಪಟ್ಟಾಗುವುದು. ನಿಮ್ಮ ಆಸೆಗಳು ಈಡೇರುವ ಸಮಯ ಇದಾಗಿದೆ. ಆದರೆ ಕೆಲ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು ಜಾಗ್ರತೆ.
ಅದೃಷ್ಟ ಸಂಖ್ಯೆ:- 8, 9
ಅದೃಷ್ಟ ವಾರ: ಶನಿವಾರ ಮತ್ತು ಸೋಮವಾರ
Karwar|ಕದಂಬ ನೌಕಾ ನೆಲೆಯ ಬಳಿ ಚಿರತೆ ಪ್ರತ್ಯಕ್ಷ |ವಿಡಿಯೋ ನೋಡಿ
ಕುಂಭ:- ಹಣಕಾಸಿನಲ್ಲಿ ಚಿಂತೆ, ಆದರೆ ಧಾರ್ಮಿಕ ಕಾರ್ಯಗಳಿಂದ ಲಾಭ. ಆಹಾರದ ವಿಷಯದಲ್ಲಿ ಎಚ್ಚರಿಕೆ ಅಗತ್ಯ,ಬುಧನ ಶಕ್ತಿ ಹೆಚ್ಚಳದಿಂದ ಕೆಲಸದಲ್ಲಿ ಮಾನ್ಯತೆ. ನೂತನ ಅವಕಾಶಗಳು ಮತ್ತು ಸಂಬಂಧಿಕರಿಂದ ಸಹಾಯ.
ಅದೃಷ್ಟ ಸಂಖ್ಯೆ: 4
ಶುಭ ದಿನಗಳು: ಗುರುವಾರ, ಭಾನುವಾರ
ಮೀನ:- ವೃತ್ತಿಯಲ್ಲಿ ದೃಢತೆ ಅಗತ್ಯ. ಮನಸ್ಸಿನ ದಣಿವು ಕಡಿಮೆ ಮಾಡುವಂತೆ ಪ್ರಯತ್ನಿಸಿ. ಹಿರಿಯರಿಂದ ಪ್ರೇರಣೆ ದೊರೆಯುತ್ತದೆ.
ಅದೃಷ್ಟ ಸಂಖ್ಯೆ: 2
ಶುಭ ದಿನಗಳು: ಮಂಗಳವಾರ, ಶುಕ್ರವಾರ