Yallapura ಲಾರಿ ಅಪಘಾತ ದುರಂತ ಆಗಿದ್ದೇನು? ಗ್ರೌಂಡ್ ರಿಪೋರ್ಟ್ ಇಲ್ಲಿದೆ.
Yallapura news:-ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapura) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರದಲ್ಲಿ (gullapura )ಹಾವೇರಿ (haveri) ಜಿಲ್ಲೆಯ ಸವಣೂರಿನಿಂದ ಕುಮಟಾದಲ್ಲಿ ನಡೆಯುವ ಸಂತೆಗಾಗಿ ತರಕಾರಿ,ಹಣ್ಣುಗಳನ್ನು ಲಾರಿಯಲ್ಲಿ ತುಂಬಿ ಕೊಂಡೊಯ್ಯಲಾಗುತಿತ್ತು.
ಮುಂಜಾನೆ ನಸುಕಿನ ವೇಳೆ ಲಾರಿಯು ಹೆದ್ದಾರಿಯಲ್ಲಿ ಮುಂಭಾಗದಲ್ಲಿ ಬರುತಿದ್ದ ವಾಹನವನ್ನು ತಪ್ಪಿಸುವಾಗ ರಸ್ತೆಯ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರಿಂದ ಲಾರಿ ಪಲ್ಟಿಯಾಗಿದ್ದು ಲಾರಿಯಲ್ಲಿದ್ದ 29 ಜನರು ಲಾರಿಯ ಅಡಿಯಲ್ಲಿ ಸಿಲುಕಿದ್ದಾರೆ.
ಇದನ್ನೂ ಓದಿ:-Yallapura :ಲಾರಿ ಪಲ್ಟಿ 9 ಜನ ಸಾವು16 ಕ್ಕೂ ಹೆಚ್ಚು ಜನರಿಗೆ ಗಾಯ
ಇನ್ನು ಘಟನೆ ನಡೆದು ಒಂದು ತಾಸಾದರೂ ಪೊಲೀಸರಿಗೆ ಮಾಹಿತಿ ತಿಳಿದಿರಲಿಲ್ಲ. ನಂತರ ಮಾಹಿತಿ ತಿಳಿದಿದ್ದು ಲಾರಿಯನ್ನು ಎತ್ತುತಿದ್ದಂತೆ ಒಳಭಾಗದಲ್ಲಿ ಜನರಿರುವುದು ಗೊತ್ತಾಗಿದೆ. ಅಷ್ಟರಲ್ಲಾಗಲೇ ಒಂಬತ್ತು ಜನರು ಲಾರಿಯಡಿ ಸಿಲುಕಿ ಉಸಿರುಗಟ್ಟಿ ಸಾವಾಗಿದೆ. ತಕ್ಷಣ ಗಾಡಿಯಲ್ಲಿದ್ದ ಎಲ್ಲರನ್ನೂ ಯಲ್ಲಾಪುರ ಆಸ್ಪತ್ರೆಗೆ ದಾಖಲುಮಾಡಿ ಚಿಕಿತ್ಸೆ ನೀಡಲಾಗಿದ್ದು ಗಂಭೀರ ಗಾಯಗೊಂಡ ಜನರನ್ನು ಹುಬ್ಬಳ್ಳಿ ಕಿಮ್ಸ್ ಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:-Yallapur ನೀರಿನ ಟ್ಯಾಂಕ್ ನಲ್ಲಿ ಕೊಳತ ಹಾವು- ನೀರು ಕುಡಿದ ಗ್ರಾಮದ ಜಮ ಅಸ್ವಸ್ಥ
ಇನ್ನು ಮಾರ್ಗಮಧ್ಯೆ ಓರ್ವ ಸಾವುಕಂಡಿದ್ದಾನೆ. ಸಾವಿನ ಸಂಖ್ಯೆ 10 ಕ್ಕೆ ಏರಿಕೆ ಕಂಡಿದೆ. ಸದ್ಯ ಗಾಯಗೊಂಡ ಎಲ್ಲರೂ ಸುರಕ್ಷಿತವಾಗಿದ್ದು , ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಾಲ್ವರು ಸಹ ಗುಣಮುಖರಾಗಿ ಊರಿಗೆ ತೆರಳಿದ್ದಾರೆ.
ಇನ್ನು ಮಾಹಿತಿ ತಿಳಿದ ತಕ್ಷಣ ಸಮಯಕ್ಕೆ ಸರಿಯಾಗಿ ಪೊಲೀಸರು ,ವೈದ್ಯರು ಹಾಗೂ ವಾಹನ ಮೇಲೆತ್ತಲು ಕ್ರೇನ್ ಸಿಬ್ಬಂದಿ ಬರದಿದ್ದರೇ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಕಾಣುತಿತ್ತು.
ಸಾವುಕಂಡ ಜನರೆಷ್ಟು ಗಾಯಗೊಂಡವರೆಷ್ಟು?.
ಮೃತಪಟ್ಟವರು:
1. ಫಯಾಜ್ ತಂದೆ ಇಮಾಮ್‌ಸಾಬ್ ಜಮಖಂಡಿ 45-ವರ್ಷ
2. ವಾಸಿಮ್ ತಂದೆ ಮುಲ್ಲಾ ಮುಡಿಗೇರಿ 25- ವರ
3. ಇಜಜ್ ತಂದೆ ಮಸ್‌ತಾಕ್ ಮುಲ್ಲಾ 20 ವರ್ಷ
4. ಸಾದುಕ್ ತಂದೆ ಬಾಷಾ ಪರಾಸ್ 30 ವರ್ಷ
5. ಗುಲಾಮ್ ಹುಸೇನ್ ತಂದೆ ಗುಡುಸಾಬ್ ಜವಳಿ
6. ಇಮ್‌ತಿಯಾಜ್ ತಂದೆ ಮೊಹಮ್ಮದ್ ಜಾಪರ್ ಮುಡಗೇರಿ 40 ವರ್ಷ
7. ಅಲ್ಪಾಜ್ ತಂದೆ ಜಾಪರ ಮಂಡಕಿ 25 ವರ್ಷ
8. ಜಿಲಾನಿ ತಂದೆ ಅಬ್ದುಲ್ ಗಪಾರ್ ಜಕಾತಿ 20 ವರ್ಷ
9. ಅಸ್ಲಾಂ ತಂದೆ ಬಾಬು ಬೇಣ್ಣಿ 24 ವರ್ಷ ಎಲ್ಲರೂ ಸವಣೂರು
10. ಜಲಾಲ್ ತಾರಾ 30 ವರ್ಷ ಸವಣೂರು. (ಹುಬ್ಬಳಿ ಕೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ)
ಹುಬ್ಬಳಿ ಕೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು.
1. ಅಶ್ರಪ್ ತಂದೆ ನಬಿ ಸಾಬ್ ಲಾರಿ ಡ್ರೈವರ್ 18 ವರ್ಷ
2. ಖ್ವಾಜಾ ತಂದೆ ಮೊಹಮ್ಮದ್ ಗೌಸ್ ಕಿಸಮತಗಾರ್ 22 ವರ್ಷ
3. ಮೊಹಮ್ಮದ್ ಸಾದಿಕ ತಂದೆ ಖ್ವಾಜಾಮೀರ್ ಬತ್ತೇರಿ 25 ವರ್ಷ
4. ಖ್ವಾಜಾ ಮೈನು ತಂದೆ ಬಷೀರ್ ಅಹಮ್ಮದ್ ಕಾಲೆಕಾಲನ್ನವರ್ 24 ವರ್ಷ
5. ನಿಜಾಮ್ 30 ವರ್ಷ
6. ಮದ್ಲಾನ್ ಸಾಬ್ 24 ವರ್ಷ
7. ಜಾಪರ್ ತಂದೆ ಮುಕ್ತಿಯಾರ್ ಪ್ರಾಸ್ 22 ವರ್ಷ
ಯಲ್ಲಾಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು.
1. ಮಲ್ಲಿಕ ರೆಹಾನ್ ತಂದೆ ಮೊಹಮ್ಮದ್ ರಫೀಕ್ ಅಕ್ಕಿ 21 ವರ್ಷ
2. ಅಪ್ತಾಬ್ ತಂದೆ ಭಷೀರ್ ಅಹಮಮದ್ ಮಂಚಕಿ 23 ವರ್ಷ
3. ಗೌಸ್ ಮೈದ್ದೀನ್ ತಂದೆ ಅಬ್ದುಲ್ ಗಣಿ ಬೊಮ್ಮನಹಳ್ಳಿ 30 ವರ್ಷ
4. ಇರ್ಪಾನ್ ತಂದೆ ಮುಕ್ಷುಲ್ ಗುಡಿಗೇರಿ 17 ವರರ್ಷ
5. ನೂರ ಅಹಮ್ಮದ್ ತಂದೆ ಮೊಹಮ್ಮದ್ ಜಾಪರ್ ಜಮಕಂಡಿ 30 ವರ್ಷ
6. ಅಪ್ಸರ್ ಕಾಂಜಾಡ್ 34 ವರ್ಷ
7. ಸುಭಾಷ ಗೌಡರ್ 17 ವರ್ಷ
8. ಖಾದ್ರಿ ತಂದೆ ಗೂಡು ಸಾಬ್ ಜವಳಿ 26 ವರ್ಷ
9. ಸಾಬೀರ್ ಅಹಮ್ಮದ ಬಾಬಾ ಹುಸೇನ್ ಗವಾರಿ 38 ವರ್ಷ
10. ಮರ್ದಾನ್ ಸಾಬ್ ತಂದೆ ಕಮಲ್ ಬಾಷಾ ತಾರಾಡಿಗ 22 ವರ್ಷ
11. ರಪಾಯಿ ತಂದೆ ಬಾಕರ್ ಚೌರ 21 ವರ್ಷ
12. ಮೊಹಮ್ಮದ್ ಗೌಸ ತಂದೆ ಗಪಾರ್ ಅಕ್ತರ್ 22 ವರ್ಷ
ಮೃತರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯದಿಂದ ಪರಿಹಾರ ಹಣ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಗುಳ್ಳಾಪುರ ಭಾಗದಲ್ಲಿ ಇಂದು ಮುಂಜಾನೆ ಸಂಭವಿಸಿದ ಲಾರಿ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ಪರಿಹಾರ ಘೋಷಣೆ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ಮೃತ ಕುಟುಂಬಕ್ಕೆ ತಲಾ ಎರಡು ಲಕ್ಷ ,ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ಹಣ ಘೋಷಿಸಿದೆ.
ಇಂದು ಯಲ್ಲಾಪುರದಲ್ಲಿ ಶಿಗ್ಗಾವಿ ಶಾಸಕ ಯಾಸಿರ್ ಖಾನ್ ರವರಿಗೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ರವರು ಜಿಲ್ಲಾಧಿಕಾರಿ ಸಹಿ ಮಾಡಿದ ರಾಜ್ಯಸರ್ಕಾರದಿಂದ ನೀಡಿದ ಪರಿಹಾರ ಹಣದ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು. ಒಟ್ಟು 10 ಮೃತ ಜನರಿಗೆ ತಲಾ ಮೂರು ಲಕ್ಷ ದಂತೆ 30 ಲಕ್ಷ ಪರಿಹಾರ ನೀಡಲಾಗುತಿದ್ದು ,ವೈದ್ಯರ ವರದಿ ಬಂದ ನಂತರ ಮೃತ ಕುಟುಂಬಕ್ಕೆ ಈ ಪರಿಹಾರ ಹಣ ದೊರೆಯಲಿದೆ.