ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Uttara kannda : ಭೂಕಂಪನ ಕಾರಣ ಏನು? ವರದಿ ಯಲ್ಲಿ ವಿವರ ಬಿಚ್ಚಿಟ್ಟ ಸಂಶೋಧಕರು.

Uttara kannda 09 December 2024:- ಡಿಸೆಂಬರ್ 01 ರಂದು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ Western Ghat )ಭಾಗವಾದ ಕುಮಟಾ ದ ದೇವಿಮನೆ ಘಟ್ಟ,ಯಾಣ, ಸಿದ್ದಾಪುರ ,ಶಿರಸಿ, ಯಲ್ಲಾಪುರ ಭಾಗದಲ್ಲಿ ಭೂ ಕಂಪನದ ಅನುಭವವಾಗಿತ್ತು.
07:34 PM Dec 09, 2024 IST | ಶುಭಸಾಗರ್

Uttara kannda 09 December 2024:- ಡಿಸೆಂಬರ್ 01 ರಂದು ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟ (Western Ghat) ಭಾಗವಾದ ಕುಮಟಾ ದ ದೇವಿಮನೆ ಘಟ್ಟ,ಯಾಣ, ಸಿದ್ದಾಪುರ ,ಶಿರಸಿ, ಯಲ್ಲಾಪುರ ಭಾಗದಲ್ಲಿ ಭೂ ಕಂಪನದ ಅನುಭವವಾಗಿತ್ತು.

Advertisement

ಆದರೇ ಜಿಲ್ಲಾಡಳಿತ ಭೂ ಕಂಪನದ ( earthquake) ವರದಿಯನ್ನು ತಳ್ಳಿಹಾಕಿತ್ತು. ನಂತರ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಭೂ ವಿಜ್ಞಾನಿ ಜಗದೀಶ್ ನೇತ್ರತ್ವದ ಇಬ್ಬರ ತಂಡ ಜಿಲ್ಲೆಗೆ ಭೇಟಿ ನೀಡಿ ಯಾಣ ಸೇರಿದಂತೆ ಭೂ ಕಂಪನವಾದ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿ ಈ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದೆ.

ವರದಿಯಲ್ಲಿ ಏನಿದೆ?

ಈ ವರದಿ ಪ್ರಕಾರ ಭೂ ಕಂಪನವಾಗಿದೆ ಎಂಬುದನ್ನು ತೃಷ್ಟೀಕರಿಸಿದೆ.ಡಿಸೆಂಬರ್ 1 ರ ಬೆಳಗ್ಗೆ 11-59 ಕ್ಕೆ ಯಾಣ ದಿಂದ 12 ಕಿಲೋಮೀಟರ್ ದೂರದ ಪೂರ್ವ -ಉತ್ತರ ದಿಕ್ಕಿನಲ್ಲಿ ಭೂಮಿ ಕಂಪನವಾಗಿದೆ.

5 ಕಿಲೋಮೀಟರ್ ಆಳ ಪ್ರದೇಶದಲ್ಲಿ 3.5 ತೀವ್ರ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದನ್ನು ದೃಢಪಡಿಸಿದ್ದಾರೆ.

Advertisement

ಆದರೇ ಭೂಮಿ ಕಂಪನದಿಂದ ಭೂಮಿ ರಚನೆಯಲ್ಲಿ ಯಾವುದೇ ಬಿರುಕು ಮೂಡಿಲ್ಲ,ಯಾವುದೇ ಗಣಿಗಾರಿಕೆ ,ಸ್ಪೋಟದಿಂದ ಭೂ ಕಂಪನ ನಡೆದಿಲ್ಲ ಎಂದು ತಿಳಿಸಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರ, ಭೂ ವಿಜ್ಞಾನ ಸಚಿವಾಲಯ, ಭಾರತ ಸರ್ಕಾರವು ಭೂಕಂಪವನ್ನು ವರದಿ ಮಾಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರ (KSNDMC) ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಂಡವು ಪೀಡಿತ ಗ್ರಾಮಗಳಲ್ಲಿ ಕ್ಷೇತ್ರ ಪರಿಶೀಲನೆ ನಡೆಸಿದೆ.

ತಜ್ಞರ ತಂಡವು ದೇವಿಮನೆ, ರಾಗಿಹೊಸಳ್ಳಿ ಮತ್ತು ಬಂಡಲ ಗ್ರಾಮಗಳಲ್ಲಿ ಅತ್ಯಂತ ಸೌಮ್ಯವಾದ ಕಂಪನಗಳನ್ನು ಮತ್ತು ರಚನೆಗಳಲ್ಲಿ ಯಾವುದೇ ಬಿರುಕುಗಳನ್ನು ಗಮನಿಸಲಾಗಿಲ್ಲ.

ಸ್ಥಳೀಯ ಸಮುದಾಯವು ಕೇವಲ 2-3 ಸೆಕೆಂಡುಗಳ ಕಾಲ ಕಂಪನವನ್ನು ಅನುಭವಿಸಿದೆ ಎಂದು ವರದಿ ಮಾಡಿದೆ.

ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಯಾವುದೇ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿಲ್ಲ.ಕಂಪನಗಳು ಭಾರೀ ಮಳೆಯಿಂದ ಉಂಟಾಗುವ ಅಡಚಣೆಗಳಿಂದ ಉಂಟಾಗಬಹುದು ಎಂದು ತಂಡವು ಊಹಿಸಿದೆ.

ಇದು ಭೂಮಿಯ ಹೊರಪದರದ ಆಳವಿಲ್ಲದ ಪದರಗಳಲ್ಲಿ ಮರುಹೊಂದಾಣಿಕೆ ಅಥವಾ ಸ್ಥಳಾಂತರಗಳಿಗೆ ಕಾರಣವಾಗುತ್ತದೆ ಇದರಿಂದ ಸಂಭವಿಸುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ:-Rain ನಿಂದ ಸಂಗ್ರಹವಾದ ನೀರಿನಿಂದ ಪಶ್ಚಿಮ ಘಟ್ಟದಲ್ಲಿ ಬದಲಾವಣೆ! ಭೂ ಕಂಪನದ ಹಿಂದಿನ ರಹಸ್ಯ ಏನು?

ತಜ್ಞರ ತಂಡವು ಸ್ಥಳೀಯ ಸಮುದಾಯಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದು, ಈ ಕಂಪನಗಳು ಮೇಲಿನ ಹೊರಪದರದಲ್ಲಿನ ಸ್ಥಳೀಯ ಹಾಗೂ ಜಾಗತಿಕವಾಗಿ ಹೊಂದಾಣಿಕೆಗಳ ಸಾಮಾನ್ಯ ನೈಸರ್ಗಿಕ ಕ್ರಿಯೆಯ ಭಾಗವಾಗಿದೆ ಎಂದು ಅಭಿಪ್ರಾಹಿಸಿದೆ.

ಹೀಗಾಗಿ ಯಾರೂ ಭಯ ಪಡುವ ಅವಷ್ಯಕತೆ ಇಲ್ಲ ಎಂದು ವರದಿ ಹೇಳಿದೆ.

ವರದಿ ಪ್ರತಿ:-

 

Advertisement
Tags :
EarthquakeKarnatakareportUttara kanndaWestern GhatYanaಭೂಕಂಪ
Advertisement
Next Article
Advertisement