Winter Health : ಚಳಿಗಾಲದ ಗಂಟಲು ನೋವಿಗೆ ಇಲ್ಲಿದೆ ಪರಿಹಾರ.
Winter Health : ಇದೀಗ ಚಳಿಗಾಲ ಪ್ರಾರಂಭವಾಗಿದೆ. ಚಳಿಗಾಲ (winter) ಪ್ರಾರಂಭವಾದ ತಕ್ಷಣ ಜನರ ದೇಹದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯ (Health) ಕೆಡೋದು ಸಾಮಾನ್ಯ . ಅದರಲ್ಲೂ ಗಂಟಲು ಸಮಸ್ಯೆ ಹೆಚ್ಚಾಗಿ ಕಾಣಿಸುತ್ತದೆ.
ಹೀಗಾಗಿ ಚಳಿಗಾಲದಲ್ಲಿ ನಾವು ಗಂಟಲು ನೋವು ಬಾರದಂತೆ ಏನೆಲ್ಲಾ ಜಾಗೃತೆ ವಹಿಸಬೇಕು ಎಂಬ ಮಾಹಿತಿ ಇಲ್ಲಿದೆ.
ಚಳಿಗಾಲದ ಗಂಟಲು ಕೆರತಕ್ಕೆ ಹೀಗೆ ಮಾಡಿ:-
ಚಳಿಗಾಲದಲ್ಲಿ ಬಹುತೇಕ ಜನರಲ್ಲಿ ಗಂಟಲು ಕೆರತ ಪ್ರಾರಂಭವಾಗುತ್ತದೆ. ಹೀಗಾಗಿ ಈ ಗಂಟಲು ನೋವು ತಡೆಯಲು ಮನೆಯಲ್ಲೇ ಮದ್ದನ್ನು ಮಾಡಬಹುದು.
ಹೌದು ದೇಹದ ಅಸಮತೋಲನದಿಂದ ಗಂಟಲು ನೋವು ಸಹಜ ಹೀಗಾಗಿ ನೀವು ದಿನನಿತ್ಯ ಬಳಸುವ ಆಹಾರ ಕ್ರಮಗಳಲ್ಲಿ ಸಹ ಬದಲಾವಣೆ ತರುವುದು ಮುಖ್ಯ.
ಬೆಚ್ಚಗಿನ ಆಹಾರ ಸೇವಿಸಿ:- ಚಳಿಗಾಲದಲ್ಲಿ ಬಿಸಿ ಹಾಗೂ ಬೇಯಿಸಿದ ಆಹಾರ ಸೇವನೆ ಅಭ್ಯಾಸ ಮಾಡಿ. ಸೂಪ್‌ನಂತಹ ಆಹಾರ ಚಳಿಗಾಲಕ್ಕೆ ಬೆಸ್ಟ್.
ಶುಂಠಿ, ಅರಿಸಿನ, ಕಾಳುಮೆಣಸು ಹಾಗೂ ಚಕ್ಕೆ ಇವುಗಳನ್ನು ಸೇರಿಸಿ ತಯಾರಿಸಿದ ಆಹಾರಗಳು ಹಾಗೂ ಪಾನೀಯಗಳನ್ನು ಬಳಸಿ ಇದರಿಂದ
ಉರಿಯೂತ ಗಂಟಲು ಕೆರತ ತೆಗೆಯುವ ಗುಣ ಈ ಆಹಾರದಲ್ಲಿದೆ.
ಶುಂಠಿ, ತುಳಸಿ, ಬಜೆಯಂತಹ ಗಿಡಮೂಲಕೆಗಳಿಂದ ತಯಾರಿಸಿದ ಚಹಾ ಅಥವಾ ಕಷಾಯ ಕುಡಿಯುವುದು ಉತ್ತಮ. ಇದು ಗಂಟಲು ಕೆರೆತವನ್ನು ನಿವಾರಿಸುವ ಜೊತೆಗೆ ಉರಿಯೂತ ನಿವಾರಣೆಗೂ ಸಹಾಯ ಮಾಡುತ್ತದೆ.
ಉಪ್ಪು ನೀರಿನಿಂದ ಬಾಯಿಮುಕ್ಕಳಿಸಿ
ಉಗುರು ಬೆಚ್ಚಗಿನ ನೀರಿಗೆ ದಿನಕ್ಕೆ ಮೂರುಬಾರಿ ಉಪ್ಪು ಸೇರಿಸಿ ಗಂಟಲು ಹಾಗೂ ಬಾಯಿ ಮುಕ್ಕಳಿಸುವುದರಿಂದ ಗಂಟಲು ಕೆರೆತಕ್ಕೆ ಪರಿಹಾರ ದೊರೆಯುತ್ತದೆ.
ಅರಿಶಿನ ಹಾಲು: ಒಂದು ಲೋಟ ಹಾಲಿಗೆ ಚಿಟಿಕೆ ಅರಿಸಿನ ಬೆರೆಸಿ ಕುಡಿಯುವುದು ಗಂಟಲು ನೋವಿಗೆ ಪರಿಹಾರ ಒದಗಿಸುತ್ತದೆ .ಇದು ನಂಜು ನಿವಾರಕವೂ ಹೌದು.
ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿದ ನೀರು ಕುಡಿಯುವುದರಿಂದಲೂ ಗಂಟಲು ಕೆರೆತದ ಸಮಸ್ಯೆ ನಿವಾರಣೆಯಾಗುತ್ತದೆ ದಿನಕ್ಕೆ ಒಂದುಬಾರಿ ಮಾಡಿ .
ರಾತ್ರಿ ವಮಲಗುವಾಗ ಬಿಸಿ ನೀರಿನಲ್ಲಿ ಬಟ್ಟೆ ಅದ್ದಿ ಅದನ್ನು ಹಿಂಡಿ ಅಲ್ಪ ಬಿಸಿ ಇರುವಾಗ ಸ್ವಲ್ಪ ಸಮಯ ಗಂಟಲು ಭಾಗದಲ್ಲಿ ಇಟ್ಟರೆ ನೋವು ಕಡಿಮೆಯಾಗುತ್ತದೆ.
ಇದನ್ನೂ ಓದಿ:-Arecanut medicines ಅಡಿಕೆ ಕ್ಯಾನ್ಸರ್ ಕಾರಕ ಎನ್ನುವವರಿಗೆ ಇಲ್ಲಿದೆ ಅದರ ಔಷಧೀಯ ಗುಣ
ದಿನದಲ್ಲಿ ಒಂದುಬಾರಿ ತುಳಸಿ, ಕಾಳಮೆಣಸು ,ಅಲ್ಪ ಉಪ್ಪು, ನಿಂಬೆ ಬೆರಸಿ ಕುದಿಸಿ ಅದರ ನೀರು ಕುಡಿಯುವುದರಿಂದ ಗಂಟಲ ಆರೋಗ್ಯ ಕಾಪಾಡಿಕೊಳ್ಳಬಹುದು.
ಮೂರಕ್ಕಿಂತ ಹೆಚ್ಚು ದಿನ ಗಂಟಲು ನೋವು ಇದ್ದರೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.