ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapur|ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿ ಹತ್ಯೆ

Yallapur: Husband kills wife by setting her on fire over suspicion of character in Bomadikoppa, Kiravatti. Case registered at Yallapur Police Station.
10:35 PM Oct 11, 2025 IST | ಶುಭಸಾಗರ್
Yallapur: Husband kills wife by setting her on fire over suspicion of character in Bomadikoppa, Kiravatti. Case registered at Yallapur Police Station.

Yallapurಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಪತ್ನಿ ಹತ್ಯೆ

Advertisement

ಕಾರವಾರ(2025 October- 11)  :- ಪತ್ನಿಯ ಶೀಲ ಶಂಕಿಸಿ ಗಂಡನೇ ಪತ್ನಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ(yallapur) ತಾಲೂಕಿನ ಕಿರವತ್ತಿಯ ಬೊಂಬಡಿಕೊಪ್ಪದಲ್ಲಿ ನಡೆದಿದೆ.

ಜನ್ನಿ ಗಂಡನಿಂದ ಹತ್ಯೆಗೊಳಗಾದವಳಾಗಿದ್ದು ,ಬಾಬು ಖಾತ್ರೋಟ ಹತ್ಯೆ ಮಾಡಿದ ಆರೋಪಿ.

ಘಟನೆ ಏನು?

ಯಲ್ಲಾಪುರದ(yallapur) ಕಿರವತ್ತಿ ಬೊಂಬಡಿಕೊಪ್ಪದಲ್ಲಿ ಜನ್ನಿ ಬಾಬು ಖಾತ್ರೋಟ ಅವರು ವಾಸವಾಗಿದ್ದರು. ಅದೇ ಊರಿನ ಬಾಬು ಎಕ್ಕು ಖಾತ್ರೋಡ ಅವರನ್ನು ಜನ್ನಿ ಅವರು ವರಿಸಿದ್ದರು. ಈ ದಂಪತಿ ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಬಾಬು ಅವರಿಗೆ ಪತ್ನಿ ಮೇಲೆ ನಂಬಿಕೆಯಿರಲಿಲ್ಲ. ಹೀಗಾಗಿ ಮದುವೆ ಆದ ದಿನದಿಂದಲೂ ಬಾಬು ಅವರು ಜನ್ನಿ ಅವರನ್ನು ಪೀಡಿಸುತ್ತಿದ್ದರು. ಪತ್ನಿ ಶೀಲದ ಬಗ್ಗೆ ಅವರು ಪದೇ ಪದೇ ಅನುಮಾನವ್ಯಕ್ತಪಡಿಸಿ ಕಾಡಿಸುತ್ತಿದ್ದರು.

Advertisement

ಅಕ್ಟೊಬರ್ 3ರಂದು ಬಾಬು ಖಾತ್ರೋಟ ಅವರು ಪತ್ನಿ ಬಳಿ ಜಗಳವಾಡಿದ್ದಾರೆ. ಆ ವೇಳೆ ಮತ್ತೆ ಪತ್ನಿಯ ಶೀಲದ ಬಗ್ಗೆ  ಅನುಮಾನಿಸಿ ಮಾತನಾಡಿದ್ದನು. ಕೆಟ್ಟದಾಗಿ ಬೈದು ನಿಂದಿಸಿದಗದನು.

Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ 

ಪತ್ನಿಗೆ ನೀ ಮೊದಲಿನಿಂದ ಬೇರೆಯವರ ಜೊತೆಯಿದ್ದ ವಿಷಯ ಗೊತ್ತಿದೆ ಎಂದು ಕೂಗಾಡಿದ್ದಾನೆ ಪತ್ನಿ ಸಹ ನನ್ನನ್ನು ಏಕೆ ಬೈಯುವೆ?' ಎಂದು ಜನ್ನಿ ಖಾತ್ರೋಟ ಮರುಪ್ರಶ್ನೆ ಹಾಕಿದ್ದಾರೆ.ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿದ್ದು ,ಏಕಾಏಕ ಸಿಟ್ಟಿನಲ್ಲಿ  ಬಾಬು ಖಾತ್ರೋಟ ಬೈಕಿಗೆ ಹಾಕಲು ತಂದಿದ್ದ ಪೆಟ್ರೋಲ್ ಕ್ಯಾನ್ ತೆರೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಬೆಂಕಿಯ ಉರಿಗೆ ಪಕ್ಕದಲ್ಲೇ ಇದ್ದ ತವರುಮನೆಗೆ ಓಡಿಹೋದ ಜನ್ನಿಯನ್ನು ತವರುಮನೆಯವರು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದರು. ಬಹುತೇಕ ದೇಹದಲ್ಲಿ ಸುಟ್ಟಗಾಯಗಳಾಗಿದ್ದ ಈಕೆಯನ್ನು ಹುಬ್ಬಳ್ಳಿ ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು.ಇನ್ನು ಚಿಕಿತ್ಸೆ ಪಡೆದು ತವರುಮನೆಗೆ ಬಂದಿದ್ದ ಚನ್ನಿ ಅಲ್ಲಿಯೇ ಚಿಕಿತ್ಸೆ ಪಡೆಯುತಿದ್ದು ಈವೇಳೆ ಸಾವು ಕಂಡಿದ್ದಾರೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕೃತಿ ಮೆಡಿಕಲ್ ,ಕಾರವಾರ.

 

Advertisement
Tags :
domestic violenceKannada Breaking NewsKarnataka crime newsKarwar newsNorth Karnataka newsPetrol AttackUttara Kannadawife murderYallapurYallapur Crime
Advertisement
Next Article
Advertisement