For the best experience, open
https://m.kannadavani.news
on your mobile browser.
Advertisement

Yallapur:ಜಲಪಾತ ವೀಕ್ಷಣೆಗೆ ಹೋದವರು ಜಸ್ಟ್ ಮಿಸ್ ! ಮೂರು ಜನರ ರಕ್ಷಣೆ! ವಿಡಿಯೋ ನೋಡಿ

ಕಾರವಾರ :- ಮೋಜು ಮಸ್ತಿಗಾಗಿ ಜಲಪಾತ ವೀಕ್ಷಣೆಗೆ ಹೋಗಿ ಏಕಾ ಏಕಿ ನೀರು ಬಂದು ಜಲಪಾತ ಮಧ್ಯದಲ್ಲೇ ಸಿಲುಕಿಕೊಂಡ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಪಾಲ್ಸ್ ಬಳಿ ನಡೆದಿದೆ.
02:14 PM Jul 17, 2025 IST | ಶುಭಸಾಗರ್
ಕಾರವಾರ :- ಮೋಜು ಮಸ್ತಿಗಾಗಿ ಜಲಪಾತ ವೀಕ್ಷಣೆಗೆ ಹೋಗಿ ಏಕಾ ಏಕಿ ನೀರು ಬಂದು ಜಲಪಾತ ಮಧ್ಯದಲ್ಲೇ ಸಿಲುಕಿಕೊಂಡ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಪಾಲ್ಸ್ ಬಳಿ ನಡೆದಿದೆ.

Yallapur:ಜಲಪಾತ ವೀಕ್ಷಣೆಗೆ ಹೋದವರು ಜಸ್ಟ್ ಮಿಸ್ ! ಮೂರು ಜನರ ರಕ್ಷಣೆ! ವಿಡಿಯೋ ನೋಡಿ.

Advertisement

ಕಾರವಾರ :- ಮೋಜು ಮಸ್ತಿಗಾಗಿ ಜಲಪಾತ ವೀಕ್ಷಣೆಗೆ ಹೋಗಿ ಏಕಾ ಏಕಿ ನೀರು ಬಂದು ಜಲಪಾತ ಮಧ್ಯದಲ್ಲೇ ಸಿಲುಕಿಕೊಂಡ  ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟ ಭಾಗದ ಅರೆಬೈಲ್ ಪಾಲ್ಸ್ ಬಳಿ ನಡೆದಿದೆ.

ಹುಬ್ಬಳ್ಳಿಯಿಂದ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು ಹಾಗೂ ಕೆಲವು ಪ್ರವಾಸಿಗರು ಅರೆಬೈಲ್ ಘಟ್ಟದ ಕಾಡಿನ ಮಧ್ಯದಲ್ಲಿ ಇರುವ ಅರೆಬೈಲ್ ಪಾಲ್ಸ್  ಗೆ ತೆರಳಿದ್ದರು.

ಚಿಕ್ಕ ಹಳ್ಳ ದಾಟುತ್ತಿರುವಾಗ ಏಕಾ ಏಕಿ ಬಂದ ನೀರಿನಿಂದ ಹಳ್ಳದ ಮಧ್ಯದಲ್ಲೇ ಮೂರು ಜನ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ.ನೀರಿನ ಪ್ರಮಾಣ ಅಲ್ಪ ಇಳಿಕೆಯಾಗುತಿದ್ದಂತೆ ಹಳ್ಳದ ಮಧ್ಯದಲ್ಲಿ ಸಿಲುಕಿದ್ದ ಮೂರು ಜನ ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಈ ಘಟನೆ ಕಳೆದ ಭಾನುವಾರ ನಡೆದಿದ್ದ, ವಿಡಿಯೋ ವೈರಲ್ ಆಗುತಿದ್ದಂತೆ ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲೆಯಲ್ಲಿ ಹೆಚ್ಚು ಮಳೆಯಾದಾಗ ಕೆಲವು ಹಳ್ಳಗಳು ಜಲಪಾತ ದಂತೆ ದುಮ್ಮಿಕ್ಕುತ್ತವೆ ಇದನ್ನು ಕಣ್ತುಂಬಿಕೊಳ್ಳಲು ವೀಕೆಂಡ್ ನಲ್ಲಿ ಪ್ರವಾಸಿಗರು ಟ್ರಕ್ಲಿಂಗ್ ನೆಪದಲ್ಲಿ ಬರುತ್ತಾರೆ.

ಬಂದವರು ಹೀಗೆ ಸಣ್ಣ ಹಳ್ಳಗಳಲ್ಲಿ ತೆರಳುವುದರಿಂದ ಏಕಾ ಏಕಿ ನೀರುಬಂದು ಅನಾಹುತ ನಡೆಯುತ್ತದೆ. ಹೀಗಾಗಿ ಬರುವ ಪ್ರವಾಸಿಗರು ಜಾಗೃತಿಯಿಂದ ಇರಬೇಕಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ