For the best experience, open
https://m.kannadavani.news
on your mobile browser.
Advertisement

Yallapura: ಅಪಹರಣಗಾರರ ಜೊತೆ ಫೈರಿಂಗ್ ಫೈಟ್ ಮೂರುಜನ ಪೊಲೀಸರ ಮೇಲೆ ಹಲ್ಲೆ ಆರೋಪಿಗಳಿಗೆ ಗುಂಡೇಟು ! ನಡೆದಿದ್ದೇನು?

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ (yallapura )ಡೋಗಿನಾಳ ದಲ್ಲಿ ಇಬ್ಬರು ಅಪಹರಣಗಾರರ ಮೇಲೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ನಡೆದಿದೆ.
10:12 AM Jan 11, 2025 IST | ಶುಭಸಾಗರ್
yallapura  ಅಪಹರಣಗಾರರ ಜೊತೆ ಫೈರಿಂಗ್ ಫೈಟ್ ಮೂರುಜನ ಪೊಲೀಸರ ಮೇಲೆ ಹಲ್ಲೆ ಆರೋಪಿಗಳಿಗೆ ಗುಂಡೇಟು   ನಡೆದಿದ್ದೇನು
Kidnapping case: Accused shot, three police officers injured.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ (yallapura )ಡೋಗಿನಾಳ ದಲ್ಲಿ ಇಬ್ಬರು ಅಪಹರಣಗಾರರ ಮೇಲೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ನಡೆದಿದೆ.

Advertisement

ಜನವರಿ 9ರ ರಾತ್ರಿ ಮುಂಡಗೋಡಿನ (mundgod) ಜಮೀರ್ ಎಂಬಾತನನ್ನು ಅಪಹರಣಮಾಡಿ 35 ಲಕ್ಷ ಬೇಡಿಕೆ ಇಟ್ಟಿದ್ದ ಅಪಹರಣಕಾರರು 18 ಲಕ್ಷ ಹಣ ಪಡೆದು ಅಪಹರಣಗೊಳಗಾದ ಮುಂಡಗೋಡಿನ ಜಮೀರ್ ನನ್ನು ಹಾವೇರಿ ಜಿಲ್ಲೆಯ ಗದಗ ರಿಂಗ್ ರೋಡ್ ನಲ್ಲಿ ಬಿಟ್ಟು ಪರಾರಿಯಾಗಿದ್ದರು‌.

Uttara Kannada district police attacked by kidnappers.
Uttara Kannada district police attacked by kidnappers.

ನಂತರ ಮೂರು ಜನ ಅಪಹರಣಗಾರರನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದರು. ಇಬ್ಬರು ತಪ್ಪಿಸಿಕೊಂಡು ಹೋದಾಗ ಯಲ್ಲಾಪುರ ತಾಲೂಕಿನ ಹಳಿಯಾಳ ಮಾರ್ಗದ ಡೋಗಿನಾಳದಲ್ಲಿ ಪೊಲೀಸರು ತಡೆದಿದ್ದು ಈವೇಳೆ ಪೊಲೀಸರ ಮೇಲೆ ಇಬ್ಬರು ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಈವೇಳೆ ಮೂವರು ಪೊಲೀಸರಿಗೆ ಗಾಯವಾಗಿದ್ದು , ಇಬ್ಬರು ಆರೋಪಿಗಳಿಗೆ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Mundgod police seize the car used in the kidnapping.
Mundgod police seize the car used in the kidnapping.

ಗುಂಡೇಟಿಗೆ ಒಳಗಾದ ಆರೋಪಿಗಳಾದ ಧಾರವಾಡ ಮೂಲದ ರಹೀಮ್ ಅಲ್ಲಾಹುದ್ದೀನ್ ಹಾಗೂ ಧಾರವಾಡದ ಅಜಯ ಎಂದಾಗಿದ್ದು , ಮುಂಡಗೋಡು ಪಿ.ಐ ರಂಗನಾಥ ನೀಲಮ್ಮನವರ್, ಪಿ.ಎಸ್.ಐ ಪರಶುರಾಮ್ ,ಯಲ್ಲಾಪುರ ಪಿ.ಸಿ ಶಫಿ ಶೇಖ್ ಆರೋಪಿಗಳಿಂದ ಹಲ್ಲೆಗೊಳಗಾಗಿದ್ದಾರೆ‌. ಹಲ್ಲೆಗೊಳಗಾದ ಪೊಲೀಸರು ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ,ಗುಂಡೇಟು ತಿಂದ ಆರೋಪಿಗಳಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:-Mundgod : ಉದ್ಯಮಿ ಅಪಹರಣ ಪ್ರಕರಣ ,ಐದು ಜನರ ಬಂಧನ

ಐದು ಜನ ಅಪಹರಣಗಾರರ ಬಂಧನ

ಉತ್ತರ ಕನ್ನಡ ಜಿಲ್ಲಾ ಪೊಲೀಸರು (police) ಅಪಹರಣಗಾರರ ಬೆನ್ನುಹತ್ತಿ ಐದು ಜನರನ್ನು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದು ಕೃತ್ಯಕ್ಕೆ ಬಳಸಿದ ವಾಹನವನ್ನು ಸಹ ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಾದ ಧಾರವಾಡ ಮೂಲದ ಸಾಗರ್ ನಾಗರಾಜ್ ಕಲಾಲ್ (27 ),ಬಿಜಾಪುರ ಮೂಲದ ದಾದಾ ಪೀರ್ ಅಲ್ಲಬಕ್ಷ , ಧಾರವಾಡದ
ಅಜಯ ಫಕೀರಪ್ಪ ಮಡ್ಲಿ( 25), ಹಸನ್ ಮೈನುದ್ದೀನ್ ಕಿಲ್ಲೆದರ ( 29), ರಹೀಂ ಜಾಫರ್ ಸಾಬ್ ರಜ್ಜೇಬಲಿ (27 ) ಎಂದಾಗಿದ್ದಾರೆ.

ಇನ್ನು ಯಾವ ಕಾರಣಕ್ಕೆ ಅಪಹರಣ ಮಾಡಲಾಗಿತ್ತು ಸೇರಿದಂತೆ ಪ್ರಮುಖ ಮಾಹಿತಿಗಳು ತನಿಖೆ ನಂತರ ತಿಳಿದು ಬರಬೇಕಿದೆ.

Advertisement
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ