ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Yallapura ಬೆಳಗಾವಿಯಿಂದ ಗೋಕರ್ಣಕ್ಕೆ ತೆರಳುತಿದ್ದ ಕಾರು ಅಪಘಾತ -ಆರು ಜನರಿಗೆ ಗಾಯ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರದಲ್ಲಿ ಲಾರಿ ಪಲ್ಟಿಯಾಗಿ 10 ಜನರ ಸಾವಾದ ಬೆನ್ನಲ್ಲೇ ಇದೀಗ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರ ಅರೆಬೈಲ್ ಘಟ್ಟದಲ್ಲಿ ಲಾರಿಯೊಂದು ಫಾರ್ಚುನರ್ ಕಾರಿಗೆ ಅತೀ ವೇಗದಲ್ಲಿ ಬಂದು ಹಿಂಭಾಗದಿಂದ ಡಿಕ್ಕಿ ಪಡಿಸಿದೆ.
01:51 PM Jan 23, 2025 IST | ಶುಭಸಾಗರ್
Yallapura road accident near arebail NH 66

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ (yallapura )ಗುಳ್ಳಾಪುರದಲ್ಲಿ ಲಾರಿ ಪಲ್ಟಿಯಾಗಿ 10 ಜನರ ಸಾವಾದ ಬೆನ್ನಲ್ಲೇ ಇದೀಗ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರ ಅರೆಬೈಲ್ ಘಟ್ಟದಲ್ಲಿ ಲಾರಿಯೊಂದು ಫಾರ್ಚುನರ್ ಕಾರಿಗೆ ಅತೀ ವೇಗದಲ್ಲಿ ಬಂದು ಹಿಂಭಾಗದಿಂದ ಡಿಕ್ಕಿ ಪಡಿಸಿದೆ.

Advertisement

ಅಪಘಾತದ ತೀವ್ರತೆಗೆ ಫಾರ್ಚುನರ್ ಕಾರು ನಜ್ಜುಗುಜ್ಜಾಗಿದ್ದು ಕಾರಿನಲ್ಲಿ ಇದ್ದ ಪುಟ್ಟ ಮಗುವು ಸೇರಿ ಆರು ಜನರಿಗೆ ಗಂಭೀರ ಗಾಯವಾಗಿದ್ದು ,ಓರ್ವನ ಸ್ಥಿತಿ ಗಂಭೀರವಾಗಿದೆ.

ಘಟನೆ ನಡೆದಿದ್ದು ಹೇಗೆ.

ಬೆಳಗಾವಿಯಿಂದ ಗೋಕರ್ಣಕ್ಕೆ ತೆರಳುತಿದ್ದ ಫಾರ್ಚುನರ್ ಕಾರು ಅರೆಬೈಲ್ ಘಟ್ಟದಲ್ಲಿ ಚಾಲಿಸುತಿದ್ದ ಕಾರಿಗೆ ಹಿಂಭಾಗದಿಂದ
ಡಾಂಬರ್ ಟ್ಯಾಂಕರ್ ಡಿಕ್ಕಿಹೊಡೆದಿದೆ.

ಅಪಘಾತವಾದ ವೇಗಕ್ಕೆ ಪಾರ್ಚುನರ್ ಕಾರು ಮುಂಭಾಗದಲ್ಲಿ ಇದ್ದ ಕಂಟೈನರ್ ಗೆ ಡಿಕ್ಕಿಯಾಗಿ ನಜ್ಜುಗುಜ್ಜಾಗಿದೆ. ಅಪಘಾತ ಪಡಿಸಿ ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ.

Advertisement

ಗಾಯಗೊಂಡವರು ಎಲ್ಲಿಯವರು?

ಬೆಳಗಾವಿ ಮೂಲದ ಸಂಗಯ್ಯ ವೀರಭದ್ರ ಹೀರೇಮಠ್,ಸೊಪ್ನಿಲ್ ಹಿರೇಮಠ್ ,ವಿವೇಕಾನಂದ ಬಾಳಯ್ಯ ಹಿರೇಮಠ್, ಅನ್ನಪೂರ್ಣ ಹಿರೇಮಠ್. ಕಾರು ಚಾಲಕ ಬಸವರಾಜ್ ನಿಂಗಪ್ಪ ಕರ್ಣನ್ನನವರ್ ,ಒಂದು ವರ್ಷದ ಚಿಕ್ಕ ಮಗು ರಿಷಾ ಗಾಯಗೊಂಡವರಾಗಿದ್ದಾರೆ.

ಇದನ್ನೂ ಓದಿ:-Yallapura ಲಾರಿ ಅಪಘಾತ ದುರಂತ ಆಗಿದ್ದೇನು? ಗ್ರೌಂಡ್ ರಿಪೋರ್ಟ್ ಇಲ್ಲಿದೆ.

ಬೆಳಗಾವಿಯಿಂದ ಗೋಕರ್ಣ ಕ್ಕೆ ಫಾರ್ಚುನರ್ ಕಾರಿನಲ್ಲಿ ಹೊರಟಿದ್ದ ಕುಟುಂಬ ಅರೆಬೈಲ್ ಘಟ್ಟದಲ್ಲಿ ಹೋಗುತಿದ್ದ ವೇಳೆ ಓವರ್ ಟೇಕ್ ಮಾಡಿ ಬಂದ ಡಾಂಬರ್ ಲಾರಿಯು ಹಿಂಭಾಗದಿಂದ ಅಪಘಾತ ಪಡಿಸಿದ್ದು ಮುಂಭಾಗದಲ್ಲಿ ಇದ್ದ ಕಂಟೈನರ್ ಲಾರಿಗೆ ತಾಗಿ ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ (car)ಇದ್ದ ಓರ್ವನಿಗೆ ಮಾತ್ರ ಗಂಭೀರ ಗಾಯವಾಗಿದ್ದು ಉಳಿದವರು ಜೀವಾಪಾಯದಿಂದ ಆರಾಗಿದ್ದು ಚಿಕ್ಕಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ,ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
AccidentKannda newsKarnatakaRoadUttara kanndaYallapura news
Advertisement
Next Article
Advertisement