Yallapura : ಹಳ್ಳದ ನೀರಿಗೆ ಕೆಮಿಕಲ್ ನೀರು ಬೆರೆಸಿ ಪರಾರಿಯಾದ ಆಗುಂತಕರು!
Yallapura news :- ಹಳ್ಳದಲ್ಲಿ ಹರಿಯುತ್ತಿರುವ ನೀರಿಗೆ(water)ಕೆಮಿಕಲ್ ಚೆಲ್ಲಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (yallapura) ತಾಲೂಕಿನ ಆರ್ಸಿಬೈಲ್ ಘಟ್ಟದ ಬಳಗಾರ್ ಕ್ರಾಸ್‌ನಲ್ಲಿ ಇಂದು ಸಂಜೆ ನಡೆದಿದೆ.
ಕೆಮಿಕಲ್ ( chemical) ಮಿಶ್ರಣದಿಂದ ಹಳ್ಳದ ನೀರಿನಲ್ಲಿ ನೊರೆಯಂತೆ ಹೆಪ್ಪುಗಟ್ಟಿದ್ದು, ಮೀನುಗಳ ಸಾವಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಟ್ಯಾಂಕರ್ ನಿಂದ ಪೈಪ್ ಮೂಲಕ ಈ ರಾಸಾಯನಿಕವನ್ನು ನೀರಿಗೆ ಚೆಲ್ಲಿರಬಹುದೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ:-Yallapur ನೀರಿನ ಟ್ಯಾಂಕ್ ನಲ್ಲಿ ಕೊಳತ ಹಾವು- ನೀರು ಕುಡಿದ ಗ್ರಾಮದ ಜಮ ಅಸ್ವಸ್ಥ
ಕೆಮಿಕಲ್ ನೀರಿಗೆ ಮಿಶ್ರಣವಾಗಿದ್ದರಿಂದ ಸ್ಥಳೀಯ ಜನರು ಆತಂಕಕ್ಕೆ ಈಡಾಗಿದ್ದು ಈ ಸಂಬಂಧ ಶಂಕರ ಹೆಗಡೆ ದೋಣಗಾರ ಎಂಬುವವರು ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:-Yallapura ಡಿಸೇಲ್ ಕಳ್ಳತನ ಮಾಡುತಿದ್ದ ಅಂತರ್ ರಾಜ್ಯ ಕಳ್ಳರ ಬಂಧನ
ಸ್ಥಳಕ್ಕೆ ಪಿಐ ರಮೇಶ ಹಾನಾಪುರ ತಂಡ, ಟಿ.ಎಚ್.ಓ. ಡಾ. ನರೇಂದ್ರ ಪವಾರ, ಆರೋಗ್ಯ ಸಿಬ್ಬಂದಿ ತಂಡ ಮತ್ತು ಪಿಡಿಓ ಭೇಟಿ ನೀಡಿ ಪರಿಶೀಲನೆ ಮಾಡಿದ್ದು ನೀರಿನ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು ,ವರದಿ ಬರುವ ವರೆಗೆ
ಯಾರೂ ಈ ನೀರನ್ನ ಉಪಯೋಗಿಸದಂತೆ, ಜಾನುವಾರುಗಳಿಗೆ ನೀಡದಂತೆ ಸೂಚನೆ ನೀಡಿದ್ದಾರೆ.