Yallapura 'ಬಿಜೆಪಿ ಪಕ್ಷ ತೊರೆಯುವ ಕುರಿತು ಶಾಸಕ ಹೆಬ್ಬಾರ್ ಎರಡು ಕಾಲು ಮುಂದೆ! ಯಲ್ಲಾಪುರದಲ್ಲಿ ಹೇಳಿದ್ದೇನು ?


Yallapura news 29 October 2024:- ಬಿಜೆಪಿಯಿಂದ 8 ಶಾಸಕರು ಕಾಂಗ್ರೆಸ್ (congress) ಸೇರ್ಪಡೆಯಾಗುವ ಬಗ್ಗೆ ಎಸ್.ಟಿ.ಸೋಮಶೇಖರ್ ಹೇಳಿಕೆ ಬೆನ್ನಲ್ಲೇ ಇದೀಗ ಬಿಜೆಪಿ (Bjp) ಯಿಂದ ಮಾನಸಿಕವಾಗಿ ವಿಮುಖರಾಗಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿನ್ನಮತೀಯ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿದ್ದಾರೆ.
ಇಂದು ಸಂಜೆ ಮುಂಡಗೋಡು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಎಸ್.ಟಿ. ಸೋಮಶೇಖರ್ ಮಾತು ಸತ್ಯ ಇರಬಹುದು,
ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು.ಹಾಗಾಗಿ ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ.
ಈ ಬಗ್ಗೆ ಮಾತನಾಡಲು ಸೋಮಶೇಖರ್ ಅವರಿಗೆ ಪೋನ್ ಕರೆ ಮಾಡಿದ್ದೆ, ಆದ್ರೆ ಕರೆಗೆ ಸಿಕ್ಕಿಲ್ಲ.
ನಾನು ಬಿಜೆಪಿಯಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ,ಎರಡು ಕಾಲು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ನಿಮ್ಮ ವಿವೇಚನೆಗೆ ಸೇರಿದ್ದು.
ನಮ್ಮ ನಿರ್ಣಯ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ತೆಗೆದುಕೊಳ್ಳುತ್ತೇನೆ.ಇದು ರಾಜಕಿಯ ಕ್ಷೇತ್ರ, ಯಾವ ಸಂದರ್ಭ, ಯಾವ ನಿರ್ಣಯ ಕೈಗೊಳ್ಳಬೇಕು ಎಂಬುದು ನಮಗೆ ಗೊತ್ತು.
ಉಪಚುನಾವಣೆಗೆ ಕಾಲ ಪಕ್ವವಾಗಿಲ್ಲ, ನಾನು ಯಾವ ಪಕ್ಷದ ಚುನಾವಣೆ ಪ್ರಚಾರಕ್ಕೂ ಹೋಗಿಲ್ಲ,ಬೊಮ್ಮಾಯಿ ಅವರು ನನಗೆ ಆತ್ಮೀಯರಾಗಿದ್ದು, ಪ್ರಚಾರಕ್ಕೆ ಕರೆದರೆ ಆಲೋಚನೆ ಮಾಡಿ ನಿರ್ಣಯಿಸುತ್ತೇನೆ ಎಂದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಡಾ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು ,ಮುಡಾ ಪ್ರಕರಣ ನ್ಯಾಯಾಂಗ ತನಿಖೆಯಲ್ಲಿದ್ದು, ಸತ್ಯಾಸತ್ಯತೆ ಗೊತ್ತಾಗುತ್ತದೆ.ಈ ಪ್ರಕರಣದ ಬಗ್ಗೆ ನಾವು ಮಾತನಾಡುವುದಿಲ್ಲ.
ಇದನ್ನೂ ಓದಿ:-Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.
ಸಿದ್ಧರಾಮಯ್ಯ (siddaramaiha) ಅವರು ಸಾರ್ವಜನಿಕ ಜೀವನದಲ್ಲಿ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ.ಅವರು ಯಾವತ್ತೂ ಇಂತಹ ಆರೋಪಗಳಿಗೆ ಒಳಗಾಗಿಲ್ಲ,ಸಿದ್ಧರಾಮಯ್ಯ ಮೇಲಿರುವ ಆರೋಪ ನ್ಯಾಯಾಂಗ ತನಿಖೆಯಿಂದ ಗೊತ್ತಾಗುತ್ತೆ.
ಇದನ್ನೂ ಓದಿ:-Yallapura |ಭಟ್ಟರ ಮನೆಯ ಮೂರು ಲಕ್ಷಕ್ಕೂ ಹೆಚ್ಚು ಮೌಲ್ಯದ ಅಡಿಕೆ ಕದ್ದ ಕಳ್ಳ ಜೈಲಿಗೆ
ಸಿಎಂ ಅವರು ಒಬ್ಬರೇ ತೆಗೆದುಕೊಂಡಿದ್ದಾರಾ.. ?
ಬೇರೆ ಬೇರೆ ರಾಜಕೀಯ ಮುಖಂಡರು ತೆಗೆದುಕೊಂಡಿದ್ದಾರಾ ಎಂಬುದು ಗೊತ್ತಾಗಲಿದೆ ಎಂದರು.
ಬೇಲಿ ಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕ ಸತೀಶ ಸೈಲ್ ಅವರಿಗೆ ಶಿಕ್ಷೆ ಪ್ರಕಣ ಆದೇಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ನ್ಯಾಯಾಂಗದ ನಿರ್ಣಯವನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ.
ಇದನ್ನೂ ಓದಿ:-Yallapura |ಜನಪ್ರತಿನಿಧಿಗಳ ನಿರ್ಲಕ್ಷ ಮಕ್ಕಳಿಗಾಗಿ ಮಣ್ಣು ಹೊತ್ತ ಶಿಕ್ಷಕಿ.
ನ್ಯಾಯಾಲಯದ ಬಗ್ಗೆ ಮಾತನಾಡುವಂತಹ ಅಧಿಕಾರವು ನಮಗಿಲ್ಲ,ನ್ಯಾಯಾಲಯದ ತೀರ್ಪಿಗೆ ನಾವು ಗೌರವ ಕೊಡಲೇಬೇಕು. ಆದರೆ, ಅದಕ್ಕಿಂತಲೂ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವ ಅವಕಾಶವಿದೆ.
ಸೈಲ್ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.