Yallapur|ಗೆಳೆಯನ ಜನ್ಮದಿನದ ಸಂಭ್ರಮದಲ್ಲಿ ನೀರುಪಾಲಾದ ಯುವಕ| ಶೋಧ ಮುಂದುವರಿಕೆ
Yallapur|ಗೆಳೆಯನ ಜನ್ಮದಿನದ ಸಂಭ್ರಮದಲ್ಲಿ ನೀರುಪಾಲಾದ ಯುವಕ| ಶೋಧ ಮುಂದುವರಿಕೆ
Yallapur (oct. 08):- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಸಮೀಪದ ಕೆಳಾಸೆಯಲ್ಲಿ ಗೆಳೆಯನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ತೆರಳಿದ್ದ ಯುವಕನೋರ್ವ ನೀರುಪಾಲಾಗಿದ್ದಾನೆ.
Yallapur|ಯಲ್ಲಾಪುರದ ಬೀಗಾರ ಗ್ರಾಮದಲ್ಲಿ ಭೂ ಕುಸಿತ
ಯಲ್ಲಾಪುರದ ಸಬಗೇರಿ ನಿವಾಸಿ ಸಾಗರ್ ದೇವಾಡಿಗ ನೀರುಪಾಲಾಗಿ ನಾಪತ್ತೆಯಾದ ಯುವಕನಾಗಿದ್ದಾನೆ.
ನಿನ್ನೆ ಮಧ್ಯಾಹ್ನದ ವೇಳೆಗೆ, ಸಾಗರ್ ತನ್ನ ಮೂರ್ನಾಲ್ಕು ಸ್ನೇಹಿತರೊಂದಿಗೆ ಹುಟ್ಟುಹಬ್ಬದ ಸೆಲಬ್ರೇಷನ್ ಗಾಗಿ ಬೇಡ್ತಿ ಹಳ್ಳದ ಸಮೀಪವಿರುವ ಕೆಳಾಸೆ ಹೊಳೆಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ,ತೇಲಿ ಹೋಗಿರುವುದಾಗಿ ತಿಳಿದು ಬಂದಿದೆ.
Yallapur:ಯಲ್ಲಾಪುರ ಬೇಡ್ತಿ ನದಿಯ ಹಳ್ಳದಲ್ಲಿ ಕೊಚ್ಚಿಹೋದ ಸಹೋದರರು
ಮಾಹಿತಿ ಪಡೆದ ಯಲ್ಲಾಪುರ ಪೊಲೀಸರು ಸ್ಥಳಕ್ಕಾಗಮಿಸಿ ನಾಪತ್ತೆಯಾದ ಯುವಕನ ಶೋಧ ಕಾರ್ಯ ನಡೆಸಿದ್ದಾರೆ.ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರವಾಸಕ್ಕೆ ಬಂದು ನೀರಿನಲ್ಲಿ ಮುಳಗಿ ಸಾವು ಕಂಡ ಘಟನೆ ವರದಿಯಾಗುತ್ತಲೇ ಇದೆ. ಈ ಹಿಂದೆಯೇ ಅರಣ್ಯ ಇಲಾಖೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಯಾವುದೇ ಪರಿಣಾಮ ಮಾತ್ರ ಕಾಣದಿರುವುದು ದುರಂತ.