For the best experience, open
https://m.kannadavani.news
on your mobile browser.
Advertisement

Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ

ಕಾರವಾರ :- ವಿಧಾನ ಸೌಧ ದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಜಿ PDO ನನ್ನು ಬೆಂಗಳೂರು ಪೊಲೀಸರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
11:58 AM Feb 19, 2025 IST | ಶುಭಸಾಗರ್
yallapura   ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ pdo ಬಂಧನ
Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ

Yallapura : ಕೋಟಿ ವಂಚನೆ ಮಾಡಿ ದುಬೈಗೆ ಪರಾರಿಯಾಗಿದ್ದ ಮಾಜಿ PDO ಬಂಧನ

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ :- ವಿಧಾನ ಸೌಧ ದಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ ಮಾಡಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಜಿ PDO ನನ್ನು ಬೆಂಗಳೂರು ಪೊಲೀಸರು ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ  ಬಂಧಿಸಿದ್ದಾರೆ.ಯಲ್ಲಾಪುರದಲ್ಲಿ PDO ಆಗಿದ್ದ ಯೋಗೇಂದ್ರ ಬಂಧಿತ ಮಾಜಿ ಪಿ.ಡಿ.ಓ .

ಇದನ್ನೂ ಓದಿ:-Yallapura: KSRTC ಬಸ್ ಅಪಘಾತ 17 ಕ್ಕೂ ಹೆಚ್ಚು ಜನರಿಗೆ ಗಾಯ

ತನ್ನ ಸಂಬಂಧಿಗಳು ವಿಧಾನಸೌಧದಲ್ಲಿ ಕೆಲಸ ಮಾಡುತಿದ್ದಾರೆ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಅಮೇಶ ತೋರಿಸಿ ಕೋಟಿ ಕೋಟಿ ವಂಚಿಸಿದ್ದ. ಈ ಹಿಂದೆ ಯಲ್ಲಾಪುರದಲ್ಲಿ PDO ಆಗಿ ಕಾರ್ಯನಿರ್ವಹಿಸುತಿದ್ದ ಈತನನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು.

Astrology advertisement
Astrology advertisement

ಯೋಗಿಂದ್ರ ಸಾಪ್ಟವೇರ್ ಇಂಜಿನಿಯರ್, ವೈದ್ಯರು,ಉದ್ಯಮಿಗಳನ್ನು ಟಾರ್ಗೆಟ್ ಮಾಡುತಿದ್ದ ಈತ ಕೆಲಸ ಕೊಡಿಸುವ ಆಸೆ ತೋರಿಸಿ ತನ್ನ ಕೆಡ್ಡಾಗೆ ಬೀಳಿಸಿಕೊಳ್ಳುತಿದ್ದ. ಇದಲ್ಲದೆ ಶಾಸಕರು,ಸಚಿವರು,ಸಂಸದರು ತುಂಬಾ ಆಪ್ತರು, ಏನುಬೇಕಾದರೂ ಕೆಲಸ ಮಾಡಿಸಿಕೊಡುವುದಾಗಿ ನಂಬಿಸುತಿದ್ದ.

ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಓರ್ವ ವ್ಯಕ್ತಿಗೆ ವಿಧಾನಸೌಧ ದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆತನಿಂದ 17 ಲಕ್ಷ ತೆಗೆದುಕೊಂಡು ವಂಚಿಸಿದ್ದ .

ಇದನ್ನೂ ಓದಿ:-Yallapur ನೀರಿನ ಟ್ಯಾಂಕ್ ನಲ್ಲಿ ಕೊಳತ ಹಾವು- ನೀರು ಕುಡಿದ ಗ್ರಾಮದ ಜಮ ಅಸ್ವಸ್ಥ

ಯಲಹಂಕ ಟೌನ್ ವ್ಯಾಪ್ತಿಯ ವೈದ್ಯ ದಂಪತಿಗಳನ್ನು ಪರಿಚಯ ಮಾಡಿಕೊಂಡು ವಿದೇಶದಿಂದ ಚಿನ್ನವನ್ನು ಕಡಿಮೆ ಬೆಲೆಗೆ ತರಸಿ ಕೊಡುವುದಾಗಿ ನಂಬಿಸಿ ಒಂದುಕೋಟಿ 21 ಲಕ್ಷ ಹಣ ತೆಗೆದುಕೊಂಡು ವಂಚನೆ ಮಾಡಿದ್ದನು.

ಇದಲ್ಲದೇ ವಿ.ವಿ ಪುರದಲ್ಲಿ ಉದ್ಯಮಿಯೊಬ್ಬರಿಗೆ ಹೂಡಿಕೆ ಮಾಡಿ ಹಣ ಡಬ್ಬಲ್ ಮಾಡುವುದಾಗಿ ಹೇಳಿ ಒಂದುಕೋಟಿ ಇಪ್ಪತ್ತೈದು ಲಕ್ಷ ಹಣ ಪಡೆದು ವಂಚನೆ ಮಾಡಿದ್ದಾನೆ.

ಯಾವಾಗ ಮಾಜಿ ಪಿ.ಡಿ.ಓ ಅಸಲಿಯತ್ತು ಗೊತ್ತಾಗುತಿದ್ದಂತೆ ವಂಚನೆಗೊಳಗಾದವರು ದೂರು ದಾಖಲಿಸಿದ್ದರು. ದೂರು ದಾಖಲಾಗುತಿದ್ದಂತೆ ಈತನ ಜಾಡು ಹಿಡಿದು ಹೊರಟ ಪೊಲೀಸರ ಕಣ್ಣು ತಪ್ಪಿಸಿ ದುಬೈಗೆ ಹಾರಿಹೋಗಿದ್ದನು. ಈತನ ಚಲನ ವಲನದ ಬಗ್ಗೆ ಕಣ್ಣಿಟ್ಟಿದ್ದ ಪೊಲೀಸರು ಈತ ದುಬೈ ನಿಂದ ಬೆಂಗಳೂರಿಗೆ ಬರುತಿದ್ದಂತೆ ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಈತನನ್ನು ಬಂಧಿಸಿದ್ದಾರೆ.

ಈತನ ವಿರುದ್ಧ ಬೆಂಗಳೂರಿನಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು ರಾಜ್ಯದ ಹಲವು ಕಡೆ ಈತ ಕೋಟಿ ಕೋಟಿ ವಂಚನೆ ಮಾಡಿದ್ದು ಇದೀಗ ತನಿಖೆ ನಂತರ ಮತ್ತಷ್ಟು ಪ್ರಕರಣ ಹೊರಬರಬೇಕಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ