Ankola| ಅಚವೆ ಬಳಿ ಬಸ್ ಪಲ್ಟಿ 49 ಪ್ರಯಾಣಿಕರಿಗೆ ಗಾಯ
Ankola| ಅಚವೆ ಬಳಿ ಬಸ್ ಪಲ್ಟಿ 49 ಪ್ರಯಾಣಿಕರಿಗೆ ಗಾಯ

And for orders more than 2499 rs 15% discount ( for Deepavali)We also take birthday parties and family get together etc also
ಕಾರವಾರ(october 18) :- ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಬಸ್ ನಲ್ಲಿ ಇದ್ದ 49 ಜನ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ(ankola) ತಾಲೂಕಿನ ಅಚವೆ ಬಳಿಯ ವಡ್ಡಿ ಘಾಟ್ ನಲ್ಲಿ ನಡೆದಿದೆ.

ಬಳ್ಳಾರಿಯಿಂದ ಕುಮಟಾ ಕಡೆ ಪ್ರಯಾಣಿಸುತಿದ್ದ ಕೆಎಸ್ ಆರ್.ಟಿಸಿ ಬಸ್ , ವಡ್ಡಿ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿದ್ದು ಕಂದಕಕ್ಕೆ ಉರುಳಿದೆ.

ಚಾಲಕ ,ನಿರ್ವಾಹಕ ಸೇರಿ49 ಪ್ರಯಾಣಿಕರಿಗೆ ಗಾಯವಾಗಿದ್ದು ,ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಬಚಾವ್ ಆಗಿದ್ದಾರೆ.
ಶಿರಸಿ ಯಿಂದ ದೇವಿಮನೆ ಮೂಲಕ ತೆರಳುವ ರಸ್ತೆ ದುರಸ್ತಿಯಲ್ಲಿ ಇದ್ದು ,ಈ ಕಾರಣ ಕುಮಟಾ ಮೂಲಕ ಅಚವೆ -ಯಾಣ ಮೂಲಕ ತೆರಳುದಿದ್ದ ಬಸ್ ರಸ್ತೆ ತಿರುವಿನಲ್ಲಿ ಪಲ್ಟಿಯಾಗಿ ಈ ಘಟನೆ ನಡೆದಿದೆ.

ಸ್ಥಳಕ್ಕೆ ಅಂಕೋಲ ಠಾಣೆ ಪೊಲೀಸರ ಆಗಮಿಸಿ ಗಾಯಾಳುಗಳನ್ನು ಅಂಕೋಲ ,ಹಾಗೂ ಕುಮಟಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
