Ankola| ಪ್ರವಾಸಕ್ಕೆ ಬಂದು ನೀರಿನಲ್ಲಿ ತೇಲಿಹೋದ ಯುವಕನ ಶವ ಪತ್ತೆ
ಅಂಕೋಲಾ ತಾಲೂಕಿನ ಕೈಗಡಿ ಬ್ರಿಡ್ಜ್ ಬಳಿ ಪ್ರವಾಸಕ್ಕೆ ಬಂದ ಯುವಕ ನೀರುಪಾಲಾದ ಘಟನೆ. ಸಬಗೇರಿ ಮೂಲದ ಸಾಗರ್ ದೇವಾಡಿಗ ಶವ ಪತ್ತೆ. ಶೋಧಕಾರ್ಯದಲ್ಲಿ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಪ್ರಕರಣ ಅಂಕೋಲ ಠಾಣೆಯಲ್ಲಿ ದಾಖಲಾಗಿದೆ.

Advertisement
ಪ್ರಕೃತಿ ಮೆಡಿಕಲ್ ,ಕಾರವಾರ.
ಕಾರವಾರ :- ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೈಗಡಿ ಬ್ರಿಡ್ಜ್ ಬಳಿ ನಡೆದಿದೆ.ನಿನ್ನೆ ದಿನ ಕೈಗಡಿ ಬ್ರಿಜ್ ಸಮೀಪ ಪ್ರವಾಸಕ್ಕೆ ಬಂದಿದ್ದ ಆರು ಯುವಕರ ತಂಡ ನೀರಿನಲ್ಲಿ ಇಳಿದಾಗ ಅಂಕೋಲ ತಾಲೂಕಿನ ಸಬಗೇರಿಯ ಸಾಗರ್ ದೇವಾಡಿಗ ನೀರಿನಲ್ಲಿ ಮುಳಗಿ ತೇಲಿಹೋಗಿದ್ದನು.
ಈತನ ಶೋಧಕಾರ್ಯಕ್ಕೆ ಪೊಲೀಸರು, ಅರಣ್ಯ ಇಲಾಖೆ,ಅಗ್ನಿಶಾಮಕ ದಳ ಅವಿರತ ಪ್ರಯತ್ನ ನಡೆಸಿದ್ದರು. ಇಂದು ಕಾಣೆಯಾದ ಅಣತಿ ದೂರದಲ್ಲಿಯೇ ಈತನ ಶವವನ್ನುಕಾರ್ಯಾಚರಣೆಯಲ್ಲಿ ಭಾಗಿಯಾದ ಕೈಗಡಿ ನಿವಾಸಿಗಳಾದ ಗಣಪ ಸಿದ್ದಿ ,ರಾಮ ಸಿದ್ದಿ,ವೆಂಕಸಿದ್ದಿ ಹಾಗೂ ನಾರಾಯಣ ಸಿದ್ದಿ ಎಂಬುವವರು ಪತ್ತೆ ಮಾಡಿ ಶವವನ್ನು ಹೊರತಂದಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.