ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Ankola| ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ |ಬಿರುಕು ಬಿಟ್ಟ ಹಲವು ಮನೆಗಳು 

ಕಾರವಾರದ ಕದಂಬ ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ ಸಂಭವಿಸಿ ಅಂಕೋಲದ ಅಲಗೇರಿ ಗ್ರಾಮದ ಮನೆಗಳಲ್ಲಿ ಬಿರುಕು ಕಂಡುಬಂದಿದೆ. ಸ್ಪೋಟದ ಕಾರಣದ ಕುರಿತು ನೌಕಾದಳ ಮಾಹಿತಿ ನೀಡಿಲ್ಲ.
01:34 PM Dec 12, 2025 IST | ಶುಭಸಾಗರ್
ಕಾರವಾರದ ಕದಂಬ ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ ಸಂಭವಿಸಿ ಅಂಕೋಲದ ಅಲಗೇರಿ ಗ್ರಾಮದ ಮನೆಗಳಲ್ಲಿ ಬಿರುಕು ಕಂಡುಬಂದಿದೆ. ಸ್ಪೋಟದ ಕಾರಣದ ಕುರಿತು ನೌಕಾದಳ ಮಾಹಿತಿ ನೀಡಿಲ್ಲ.

Ankola| ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ |ಬಿರುಕು ಬಿಟ್ಟ ಹಲವು ಮನೆಗಳು

Advertisement

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಸೇರಿದ ಸಶಸ್ತ್ರ ಸಂಗ್ರಹಾಲಯದಲ್ಲಿ ಸ್ಪೋಟ ಕಾಣಿಸಿಕೊಂಡಿದೆ. ಇದರ ಸ್ಪೋಟಕ್ಕೆ ವಜ್ರಕೋಶ ಘಟಕದ ಪಕ್ಕದಲ್ಲೇ ಇರುವ ಅಂಕೋಲದ (ankola)ಅಲಗೇರಿ ಗ್ರಾಮದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

Ankola| ಅಂಕೋಲದಲ್ಲಿ ಬೈಕ್ ನಿಂದ ಪೆಟ್ರೋಲ್ ಕದ್ದ ಕಳ್ಳರು | ವಿಡಿಯೋ ವೈರಲ್ 

ವಜ್ರಕೋಶದಲ್ಲಿ ಕಾಮಗಾರಿಗಾಗಿ ಸ್ಪೋಟಿಸಲಾಗಿದೆಯಾ ಅಥವಾ ಅಚಾತುರ್ಯದಿಂದ ಸ್ಪೋಟ ಗೊಂಡಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೌಕಾದಳ ಹೊರಹಾಕಿಲ್ಲ.

Advertisement

ಇನ್ನು ಅಂಕೋಲದ ಹಟ್ಟಿಕೇರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲೇ ವಜ್ರಕೋಶವು  2015 ರಲ್ಲಿ ನೌಕಾ ನೆಲೆಯ ಮದ್ದುಗುಂಡುಗಳ ಸಂಗ್ರಹಾಲಯವಾಗಿ ನಿರ್ಮಾಣ ಗೊಂಡಿದೆ.

ಬಿರುಕು ಬಿಟ್ಟ ಸ್ಥಳ ತೋರಿಸುತ್ತಿರುವ ಮಹಿಳೆ

ಇದು ಗುಡ್ಡದ ನಡುವೆ ಹಲವು ಸುರಂಗ ಮಾರ್ಗ ಹೊಂದಿದ್ದು ಮದ್ದುಗುಂಡುಗಳನ್ನು ಸಂಗ್ರಹಿಸಿಡಲಾಗಿದೆ. ಈ ಭಾಗದಲ್ಲಿ ಇದೀಗ ಸ್ಪೋಟ ಕಾಣಿಸಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Ankola| ಕೇಣಿ ಬಂದರು ವಿರೋಧಿ ಹೋರಾಟ| ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಹೇಳಿದ್ದೇನು?

ಇನ್ನು ಇಲ್ಲಿ ಕಾಮಗಾರಿ ಮಾಡಲಾಗುತ್ತಿದೆ,ಕಲ್ಲುಗಳನ್ನು ಸ್ಪೋಟಿಸಿರಬಹುದು ಎಂದು ಹೇಳಲಾಗುತ್ತಿದೆ.ಆದರೇ ಈ ಬಗ್ಗೆ ನೌಕಾದಳದ ವಜ್ರಕೋಶ್ ನ ಅಧಿಕಾರಿಗಳು ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

 

Advertisement
Tags :
Alageri VillageAmmunition DepotAnkolaAnkola Latest UpdatesBreaking News KarnatakaCivilian Impact NewsDefence News IndiaExplosionIndian NavyKadamba naval baseKarwarKarwar newsNaval ArmoryNH66Uttara Kannada
Advertisement
Next Article
Advertisement