Ankola| ಆಡಳಿತ ನೇರವೇರಿಸದ ಬೇಡಿಕೆ, ಸ್ವಂತ ಹಣದಿಂದ ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ
Ankola| ಆಡಳಿತ ನೇರವೇರಿಸದ ಬೇಡಿಕೆ, ಸ್ವಂತ ಹಣದಿಂದ ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ
ಕಾರವಾರ :- ತಮ್ಮೂರಿಗೊಂದು ರುದ್ರ ಭೂಮಿ ಬೇಕು, ಮೃತರಾದವರನ್ನ ಸೂಡಲೂ ಜಾಗವಿಲ್ಲ. ಹೀಗಂತ ಅಂಕೋಲ (ankola) ತಾಲೂಕಿನ ಅವರ್ಸಾ, ಹಾರವಾಡ ಜನತೆಯು ಸರ್ಕಾರಕ್ಕೆ ಮನವಿ ಸಲ್ಲಿಸಿ ಸುಸ್ತಾಗಿದ್ದರು.
ಸರ್ಕಾರ ಸ್ಪಂದಿಸದಿದ್ದಾಗ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರೂಪಾಲಿ ನಾಯ್ಕ ಬಳಿ ಜನರು ತಮ್ಮೂರಿನ ಸಮಸ್ಯೆ ಹೇಳಿ ನೆರವು ನೀಡಲು ಕೋರಿದರು.
ಆಡಳಿತ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸದೆ ಇದ್ದಾಗ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ರೂಪಾಲಿ ಎಸ್.ನಾಯ್ಕ ವೈಯಕ್ತಿಕವಾಗಿ ತಮ್ಮ ಸ್ವಂತ ಹಣದಿಂದ ಅವರ್ಸಾ ಹಾಗೂ ಹಾರವಾಡ ಗ್ರಾಪಂ ವ್ಯಾಪ್ತಿಯಲ್ಲಿ ರುದ್ರಭೂಮಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ಎಸ್.ನಾಯ್ಕ, ಈ ಭಾಗದಲ್ಲಿ ರುದ್ರಭೂಮಿ ನಿರ್ಮಿಸಬೇಕು ಎನ್ನುವುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಲಿಲ್ಲ . ಯಾವುದೆ ವ್ಯವಸ್ಥೆಯನ್ನೂ ಮಾಡಿರಲಿಲ್ಲ. ಇದು ನನ್ನ ಗಮನಕ್ಕೆ ಬರುತ್ತಿದ್ದಂತೆ ವೈಯಕ್ತಿಕವಾಗಿ ನಿರ್ಮಾಣ ಮಾಡಿಕೊಡುವ ಸಂಕಲ್ಪ ಮಾಡಿ, ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಂಕೋಲಾ ಮಂಡಲದ ಮಾಜಿ ಅಧ್ಯಕ್ಷ ಸಂಜಯ ನಾಯ್ಕ, ಕಾರ್ಯದರ್ಶಿ ಶ್ರೀಧರ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ನಿಲೇಶ ನಾಯ್ಕ, ಹಾರವಾಡ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ ಠಾಕೇಕರ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಮಿಥುನ್ ನಾಯ್ಕ, ಶಿವಾ ನಾಯ್ಕ, ಮಾಹದೇವ ತಳೇಕರ, ರಾಜೇಶ್ ಈರಾ ನಾಯ್ಕ, ಶಾಂತೇಶ ನಾಯ್ಕ, ಸುಮತಿ ಕಾರ್ಯಕರ್ತರು ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.
Ankola|ಎಣ್ಣೆ ಸಾಗಿಸುತ್ತಿದ್ದ ಲಾರಿ ಪಲ್ಟಿ. ನೂರಾರು ಲೀಟರ್ ಅಡುಗೆ ಎಣ್ಣೆ ರಸ್ತೆ ಪಾಲ