For the best experience, open
https://m.kannadavani.news
on your mobile browser.
Advertisement

Weekly Astrology-ವಾರ ಭವಿಷ್ಯ 2024 | ಸೋಮವಾರ ದಿಂದ ಭಾನುವಾರದ ವರೆಗೆ.

02:42 AM Aug 12, 2024 IST | ಶುಭಸಾಗರ್
weekly astrology ವಾರ ಭವಿಷ್ಯ 2024   ಸೋಮವಾರ ದಿಂದ ಭಾನುವಾರದ ವರೆಗೆ

ಮೇಷ (Aries) ರಾಶಿ ಫಲ

ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ ,ಅನಿರೀಕ್ಷಿತ ಲಾಭ ವಿದ್ದು ,ವ್ಯಾಪಾರಿಗಳಿಗೆ ಉತ್ತಮದಾಯಕವಾಗಿದೆ, ವಾರದ ಮಧ್ಯ ಭಾಗದಲ್ಲಿ ಆರ್ಥಿಕ ಏರಿಳಿತ ಇರುವುದು. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಉತ್ಸುಕ ಸ್ನೇಹಿತರು ಒಟ್ಟಿಗೆ ಸಂತೋಷದ ಸಮಯವನ್ನು ಕಳೆಯುತ್ತಾರೆ. ಅಲ್ಪ ಲಾಭವನ್ನು ಪಡೆಯುತ್ತೀರಿ. ಹೊಸ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಹೊಸ ಚಟುವಟಿಕೆಗಳನ್ನು ಪ್ರಾರಂಭಿಸುತ್ತೀರಿ. ಅನಿರೀಕ್ಷಿತ ಆಹ್ವಾನಗಳು ಅಚ್ಚರಿ ಮೂಡಿಸುತ್ತವೆ. ರಾಜಕೀಯದಲ್ಲಿ ಆಸಕ್ತಿ ಇರಲಿದ್ದು ಈಗ ಉತ್ತಮ ಅವಕಾಶ ಸಿಗದು, ಸಂಸಾರಿಕ ಜೀವನ ಈ ವಾರ ಚನ್ನಾಗಿ ಇರಲಿದೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಹಿರಿಯರಿಂದ ಅಲ್ಪ ತೊಂದರೆ ಇದ್ದು ಶುಭ ಫಲಗಳು ಈ ವಾರ ಕಾಣಲಿದ್ದೀರಿ.

Advertisement

ವೃಷಭ( Taurus) ರಾಶಿಯವರ ವಾರ ಭವಿಷ್ಯ.(Weekly Horoscope)

ಈ ವಾರ ವ್ಯವಹಾರದಲ್ಲಿ ಏರಿಳಿತ ಇರಲಿದೆ. ಹಣದ ಉಳಿತಾಯದ ಬಗ್ಗೆ ಹೆಚ್ಚು ಗಮನ ನೀಡಿ, ಕರ್ಚು ಅಧಿಕ ಇರಲಿದೆ. ವೃತ್ತಿಪರ ವ್ಯವಹಾರದಲ್ಲಿ ಬದಲಾವಣೆಗಳಿವೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಹೊಸ ವಸ್ತುಗಳು ಮತ್ತು ಬಟ್ಟೆಗಳನ್ನು ಖರೀದಿಸುತ್ತೀರಿ.ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ .ಆರೋಗ್ಯ ಮಧ್ಯಮವಿದ್ದು ಕುಟುಂಬದಲ್ಲಿ ಜ್ವರ ,ದೇಹಾಯಾಸದ ರೋಗಗಳು ಕಾಣುವುದು.

ಮಿಥುನ (Gemini) ರಾಶಿಯ ವಾರ ಭವಿಷ್ಯ

ಈ ವಾರ ಕರ್ಚು ಅಧಿಕ, ವ್ಯಾಪಾರದಲ್ಲಿ ಏರಿಳಿತ,
ಪ್ರಮುಖ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಶುಭ ಸುದ್ದಿ ಕೇಳುವಿರಿ ,ಔಧ್ಯೋಗಿಕ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ಆರೋಗ್ಯದ ನಗ್ಗೆ ಕಾಳಜಿ ವಹಿಸಿ, ಬಂಧುಗಳೊಂದಿಗೆ ಒಟ್ಟಿಗೆ ಸಂತೋಷದಿಂದ ಕಳೆಯುತ್ತಾರೆ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ.ರಾಜಕಾರಣಿಗಳಿಗೆ ಶುಭ ಇರದು, ಕುಟುಂಬದಲ್ಲಿ ನೆಮ್ಮದಿ ಸಿಗಲಿದೆ.

ಕಟಕ ( Cencer )ರಾಶಿಯ ವಾರ ಭವಿಷ್ಯ.

ಈ ವಾರ ಹಣಕಾಸು ಹೂಡಿಕೆ ನಷ್ಟ ತರುವುದು. ಚಿನ್ನ ,ಬೆಳ್ಳಿ ಕರೀದಿ ಯಲ್ಲಿ ಲಾಭ ಇರುವುದು.ವಾರದಲ್ಲಿ ಹಣಕಾಸಿನ ( Finance) ಏರಿಳಿತ ಕಾಣುವಿರಿ.ಸಂಬಂಧಿಕರಿಂದ ದೂರದ ಸ್ಥಳಗಳಿಂದ ಆಹ್ವಾನಗಳು ಬರುತ್ತವೆ. ತಾಂತ್ರಿಕ ಶಿಕ್ಷಣದಲ್ಲಿ ಆಸಕ್ತಿ ಇರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತೀರಿ. ನಿಮ್ಮ ಮಾತುಗಳು ಸಂಬಂಧಿಕರಲ್ಲಿ ಮೌಲ್ಯವನ್ನು ಹೆಚ್ಚಿಸುತ್ತವೆ. ಸುಬ್ರಹ್ಮಣ್ಯ ದೇವರನ್ನು ಧ್ಯಾನ ದಿಂದ ಇಷ್ಟಾರ್ಥ ಸಿದ್ದಿಸಲಿದೆ. ಸರ್ಕಾರಿ ನೌಕರರಿಗೆ ಲಾಭ ಇರದು, ವೈದ್ಯಕೀಯ ವೃತ್ತಿಯವರಿಗೆ ಲಾಭ ಇರುವುದು.

ಸಿಂಹ(Leo) ರಾಶಿಯ ವಾರ ಭವಿಷ್ಯ

ಈ ವಾರ ಹಣಕಾಸಿನ ಮುಗ್ಗಟ್ಟು ಇರುವುದು, ಎಚ್ಚರಿಕೆಯಿಂದ ವ್ಯವಹರಿಸಿ‌ .ವ್ಯಾಪಾರಿಗಳಿಗೆ ಏರಿಳಿತವಿದ್ದು ,ನೌಕರರಿಗೆ ಕರ್ಚು ಅಧಿಕ ಆಗಲಿದೆ.
ಬ್ಯಾಂಕ್ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಅಪರಿಚಿತರಿಗೆ ಹೆಚ್ಚಿನ ಮಾಹಿತಿ ನೀಡಬೇಡಿ. ಹೊಸ ಉದ್ಯಮಗಳು ಪ್ರಾರಂಭವಾಗುತ್ತವೆ, ಕೃಷಿಕರಿಗೆ ಲಾಭ ಇರದು. ಕೌಟುಂಬಿಕ ನೆಮ್ಮದಿ ಅಷ್ಟಕ್ಕಷ್ಟೆ. ಮಿಶ್ರ ಫಲ ಇದ್ದು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಆರೋಗ್ಯ ಮಧ್ಯಮ ಇರಲಿದ್ದು ರಾಶಿ ಆಧಾರದಿಂದ ವಾಯು ಸಮಸ್ಯೆ ಕಾಡಲಿದೆ.

ಕನ್ಯಾರಾಶಿ(Virgo)ರಾಶಿಯ ವಾರ ಭವಿಷ್ಯ

ಈ ವಾರ ಲಾಭ ನಷ್ಟಗಳೆರಡೂ ಸಮವಾಗಿರಲಿದೆ, ಕುಟುಂಬ ಸೌಖ್ಯ ,ಯತ್ನ ಕಾರ್ಯ ವಿಳಂಬ, ಹೊಸ ಯೋಜನೆ ಕೈ ಹಿಡಿಯಲಿದೆ.ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕೈಗೊಂಡ ಕಾರ್ಯಕ್ರಮಗಳು ಸುಗಮವಾಗಿ ಸಾಗಲಿವೆ. ಹೊಸ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯಲಿವೆ. ಹೂಡಿಕೆಯಿಂದ ಸಾಕಷ್ಟು ಲಾಭ ಸಿಗಲಿದೆ. ಕೈಗೊಂಡ ಕಾರ್ಯ ಸಫಲವಾಗಲಿದೆ.ನಿಯೋಜಿತ ಕೆಲಸಗಳು ಸರಾಗವಾಗಿ ಆಗಲಿದೆ.ಯತ್ನಕಾರ್ಯ ನಿಧಾನವಾಗಿ ಯಶಸ್ಸು ಕಾಣಲಿದೆ.ಕುಟುಂಬ ಸೌಖ್ಯ, ಆರೋಗ್ಯ ದಲ್ಲಿ ಆಗಾಗ ಬದಲಾವಣೆ ಕಾಣಿಸಲಿದೆ.

ತುಲಾ ( LIbra) ರಾಶಿಯವರ ವಾರ ಭವಿಷ್ಯ.

ವೃಶ್ಚಿಕ (Scorpio) ರಾಶಿ ವಾರ ಭವಿಷ್ಯ.

ಈ ವಾರ ಸರ್ಕಾರಿ ಕೆಲಸಗಾರರಿಗೆ ಶುಭವಿದೆ, ಯತ್ನ ಕಾರ್ಯ ದಲ್ಲಿ ಲಾಭ ನಿರೀಕ್ಷಿಸಬಹುದು,ವ್ಯಾಪಾರಿಗಳಿಗೆ ಶುಭ,ಆಭರಣ ವ್ಯಾಪಾರಿಗಳಿಗೆ ಕೆಲಸ ಹೆಚ್ಚಾಗಲಿದೆ.ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಕೈಗೊಂಡ ಕಾರ್ಯಕ್ರಮಗಳು ಸುಗಮವಾಗಿ ಸಾಗಲಿವೆ. ಹೊಸ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯಲಿವೆ. ಹೂಡಿಕೆಗಳು ಸಾಕಷ್ಟು ಲಾಭವನ್ನು ತರುತ್ತವೆ. ಮಾರಾಟದಲ್ಲಿ ಲಾಭ ಸಿಗುತ್ತದೆ. ಸನ್ಮಾನ ಸಮಾರಂಭಗಳಲ್ಲಿ ಭಾಗವಹಿಸುತ್ತೀರಿ. ಮಕ್ಕಳಿಗೆ ವಿಶೇಷ ಗಮನ ನೀಡಿ,ಕುಟುಂಬ ದಲ್ಲಿ ಮಧ್ಯಮ ಸುಖ ಇರುವುದು.

ಧನು ( Sagittarius)ರಾಶಿಯ ವಾರ ಭವಿಷ್ಯ

ಈ ವಾರ ಆದಾಯ ,ಕರ್ಚು ಸಮ ಇರಲಿದೆ. ಸ್ನೇಹಿತರಿಗೆ ಸಾಲ ನೀಡಿದಲ್ಲಿ ಮರಳಿ ಬರಲು ಕಷ್ಟವಾದೀತು.ವ್ಯಾಪಾರ ವೃದ್ಧಿ ,ಸ್ತ್ರೀ ಸುಖ ವಿದೆ. ಮಹಿಳೆಯರಿಗೆ ಅಧಿಕ ಕರ್ಚು ಇರಲಿದೆ, ಹೊಸ ಯೋಜನೆಯಲ್ಲಿ ಲಾಭ ಮಧ್ಯಮ ಇರುವುದು. ಸಹೋದರರ ಕಲಹ ಇರುವುದು. ನಿಮ್ಮ ಪ್ರತಿಭೆಗೆ ವಿದೇಶಿ ಅವಕಾಶಗಳು ಕೂಡಿ ಬರುತ್ತವೆ.ಮಧ್ಯಮ ಪ್ರಗತಿ ಇದ್ದು ಕುಟುಂಬ ಸೌಖ್ಯ ಇರುವುದು,ವಾರಾಂತ್ಯದಲ್ಲಿ ಅಲ್ಪ ತೊಂದರೆ ಇರುವುದು.

ಮಕರ ( Capricorn)ರಾಶಿ ವಾರ ಭವಿಷ್ಯ

ಈ ವಾರ ಮಧ್ಯಮ ಪ್ರಗತಿ, ಕೃಷಿಕರಿಗೆ ಹಣವ್ಯಯ, ಮಹಿಳೆಯರಿಗೆ ಲಾಭ ಇರುವುದು.ವೃತ್ತಿಪರ ವ್ಯವಹಾರಗಳಲ್ಲಿ ಅನಿರೀಕ್ಷಿತ ಬದಲಾವಣೆಗಳಿವೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಸಮಯ ಕಳೆಯುವಿರಿ. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಕುಟುಂಬದಲ್ಲಿ ಹೆಚ್ಚಿನ ಒತ್ತಡವಿದೆ. ಯತ್ನ ಕಾರ್ಯ ಸಿದ್ದಿ, ವ್ಯಾಪಾರಿಗಳಿಗೆ ಒತ್ತಡ, ಮಕ್ಕಳಿಗೆ ಆರೋಗ್ಯ ಸಮಸ್ಯೆ, ವೃದ್ಧರಿಗೆ ದೇಹಾಯಾಸ ,ದೇಹದಲ್ಲಿ ನೋವು ಕಾಣಿಸುವುದು.

ಕುಂಭ (Aquarius)ರಾಶಿ ವಾರ ಭವಿಷ್ಯ.

ಈ ವಾರ ಆರ್ಥಿಕ ಸ್ಥಿರತೆ ಸಮಸ್ಯೆ ಕಾಡುವುದು,
ವಿದೇಶಿ ಅವಕಾಶಗಳು ಕೂಡಿ ಬರುತ್ತವೆ. ಆಸೆಗಳು ಬಹಳ ಕಷ್ಟದಿಂದ ಈಡೇರುತ್ತವೆ. ಜವಾಬ್ದಾರಿಗಳು ಹೆಚ್ಚಾಗುತ್ತವೆ ಮತ್ತು ಸಮರ್ಥವಾಗಿ ನಿರ್ವಹಿಸಲು ಶ್ರಮ ಪಡುವಿರಿ,ಮಹಿಳೆಯರಿಗೆ ನಿಂದನೆ, ಕೆಲಸ ಒತ್ತಡ,ಜವಬ್ದಾರಿ ಹೆಚ್ಚು, ಶಿಕ್ಷಕರಿಗೆ ಹೆಚ್ಚಿನ ಕೆಲಸ
ಆತ್ಮೀಯ ಸ್ನೇಹಿತರೊಂದಿಗೆ ಜಗಳಗಳು ಉಂಟಾಗಬಹುದು, ತಾಳ್ಮೆಯಿಂದಿರಿ. ಮಾನಸಿಕ ವೇದನೆ ಇರುವುದು, ಪ್ರಯಾಣ ಲಾಭದಾಯಕವಾಗಿರುತ್ತದೆ.

ಮೀನ (Pisces)ರಾಶಿ ವಾರ ಭವಿಷ್ಯ.

ಈ ವಾರ ಹೂಡಿಕೆಯಿಂದ ನಷ್ಟ ಇರುವುದು, ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಲಾಭ ಇರದು, ಷೇರು ವಹಿವಾಟು ನಷ್ಟ ತರುವುದು.ಕುಟುಂಬದಲ್ಲಿನ ವಿವಾದಗಳು ಬಗೆಹರಿಯಲಿವೆ. ಒಳಗೆ ಮತ್ತು ಹೊರಗೆ ನಿಮ್ಮದೇ ಮೇಲುಗೈ ಕಾಣುವುದು . ಗುತ್ತಿಗೆದಾರರಿಗೆ ಪರವಾನಗಿ, ಟೆಂಡರ್‌ಗಳು ಸಿಗುತ್ತವೆ. ಮಹಿಳೆಯರಿಗೆ ಕೆಲಸ ಸಿಗುತ್ತದೆ. ಹೊಸ ಸಂಪರ್ಕಗಳ ಮೂಲಕ ಹೊಸ ವಿಷಯಗಳನ್ನು ಕಲಿಯುತ್ತೀರಿ. ಮಹಿಳೆಯರಿಗೆ ಮಧ್ಯಮ ಫಲ ಇದ್ದು ,ಪ್ರೀತಿ ,ಪ್ರೇಮದಲ್ಲಿ ಬಿದ್ದವರಿಗೆ ತೊಂದರೆ ನಿರಾಸೆ ಸಿಗಲಿದೆ.

ಓದುಗರೇ ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ಇವುಗಳ ಮಿಮರ್ಷೆಗೆ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕಾಗುತ್ತದೆ. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಕನ್ನಡವಾಣಿ.ನ್ಯೂಸ್ ಪುಷ್ಟೀಕರಿಸುವುದಿಲ್ಲ.ನಿಮ್ಮ ಸ್ವಂತ ವಿವೇಚನೆ ಬಳಸಿ ಕಾರ್ಯಪ್ರವೃತ್ತರಾಗಿ.

ಇದನ್ನೂ ಓದಿ:-Uttrakannada Rain| ಮಳೆಯಿಂದ ಎಲ್ಲೆಲ್ಲಿ ಹಾನಿ ವಿವರ ನೋಡಿ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ