Bagalkot : ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ ಪೊಲೀಸರು ಅಮಾನತು.
Bagalkot : ಸಮವಸ್ತ್ರದಲ್ಲಿ ಸ್ವಾಮೀಜಿ ಕಾಲಿಗೆ ನಮಸ್ಕರಿಸಿದ ಪೊಲೀಸರು ಅಮಾನತು.

ಬಾಗಲಕೋಟೆ :- ಬಾಗಲಕೋಟೆಯಲ್ಲಿ(Baglkot) ಸಮವಸ್ತ್ರಸಲ್ಲೇ ಸ್ವಾಮೀಜಿ ಕಾಲಿಗೆ ಎರಗಿದ ಪೊಲೀಸರನ್ನು(police) ಅಮಾನತು ಮಾಡಿ ಆದೇಶ ಮಾಡಲಾಗಿದೆ. ಬಾಗಲಕೋಟೆಯ ಸಿದ್ದನಕೊಳ್ಳ ಸ್ವಾಮೀಜಿ ಕಾಲಿಗೆ ಎರಗಿದ ಪೊಲೀಸರ ವಿಡಿಯೋ ವೈರಲ್ ಆಗಿತ್ತು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಪೊಲೀಸ್ ಠಾಣೆಯ ಪೊಲೀಸರು ಕಾರಿನಲ್ಲಿ ಹೊರಟಿದ್ದ ಸಿದ್ದನಕೊಳ್ಳ ಮಠದ ಶಿವಕುಮಾರ್ ಸ್ವಾಮೀಜಿಯ ಕಾಲಿಗೆ ಎರಗಿದ್ದರು. ಈ ಸಂದರ್ಭದಲ್ಲಿ ಆಶೀರ್ವಾದ ರೂಪದಲ್ಲಿ ಹಣ ವನ್ನು ಪೊಲೀಸರಿಗೆ ನೀಡಿದ್ದರು.
ಇದನ್ನೂ ಓದಿ:-Chitradurga| PSI ನಿಂದ BJP ಜಿಲ್ಲಾಧ್ಯಕ್ಷನ ಮೇಲೆ ಹಲ್ಲೆ -ನಡೆದುದ್ದೇನು?
ಸಿದ್ದನಕೊಳ್ಳ ಸ್ವಾಮೀಜಿ ಬೈದರೆ ಅದನ್ನ ಆಶೀರ್ವಾದ ಎಂದು ನಂಬುವ ಭಕ್ತರು ಇದ್ದಾರೆ.ಕಲಾ ಪೋಷಕ ಮಠ ಎಂದೇ ಖ್ಯಾತಿ ಪಡೆದ ಸಿದ್ದನಕೊಳ್ಳ ಮಠ ಇದಾಗಿದ್ದು
ತಮ್ಮ ಬಳಿ ಬರುವ ಭಕ್ತರಿಗೆ ಬೈದು ಬುದ್ದಿ ಹೇಳಿದ ರೀತಿಯಲ್ಲಿ ಆಶೀರ್ವಾದ ಮಾಡುವ ಸ್ವಾಮೀಜಿ ಕಾಲಿಗೆ ಎರಗಿದ ಪೊಲೀಸರಿಗೆ ಬೈದು ಹಣ ಕೊಟ್ಟು ಆಶೀರ್ವಾದ ಮಾಡಿದ್ದರು.
ಡ್ರೆಸ್ ಮೇಲೆ ನಮಸ್ಕಾರ ಮಾಡಬಾರದ ಲೇ,ಯಾವ ಜಗದ್ಗುರು ಇದ್ದರೂ ಮಾಡಬಾರದಲೇ ಹುಚ್ಚ ನನ್ ಮಕ್ಕಳ.ನಾನು ಅಂತಹ ಸ್ವಾಮಿ ಅಲ್ಲ.ಸೆಲ್ಯೂಟ್ ಹೊಡಿರಿ, ಆದ್ರೆ ನಮಸ್ಕಾರ ಮಾಡಬಾರದು.ತಗೋ ಆಶೀರ್ವಾದ ಎಂದು 200 ರೂಪಾಯಿ ನೋಟು ಕೊಟ್ಟಿದ್ದರು.ಇದನ್ನ ಕಳಿಬ್ಯಾಡ್ರಿ ತಗೆದು ಇಟ್ಕೋರಿ,
ನೀವು ಏನು ಅನಕೋತೀರಿ ಅದು ಅಕೈತಿ, ಆಶೀರ್ವಾದ ಮಾಡಿನಿ ನೋಡ ಎಂದ ಸ್ವಾಮೀಜಿ ಅಲ್ಲಿಂದ ಹೊರಟಿದ್ದರು.
ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ನೋಡಿದ ಬಾಗಲಕೋಟೆ ಎಸ್.ಪಿ ಎಲ್ಲಾ ಪೊಲೀಸರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ವಿಡಿಯೋ ನೋಡಿ:-