Bhatkal:ಆಸ್ತಿಗಾಗಿ ಮಗಳ ಮನೆಯನ್ನ ನಾಶ ಮಾಡಿದ ತಂದೆ ಸಹೋದರ- ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ
Bhatkal:ಆಸ್ತಿಗಾಗಿ ಮಗಳ ಮನೆಯನ್ನ ನಾಶ ಮಾಡಿದ ತಂದೆ ಸಹೋದರ- ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ

ಕಾರವಾರ :- ಆಸ್ತಿಗಾಗಿ ಮಗಳ ಮನೆಯನ್ನೇ ನಾಶ ಮಾಡಿ ಅತ್ತೆ,ಮಾವ,ಮೈದುನ,ಮೈದುನನ ಹೆಂಡತಿ ಸೇರಿ
ನಾಲ್ವರನ್ನು ಕೊಲೆ ಮಾಡಿದ ಅಪ್ಪ ಮಗನಿಗೆ ಉತ್ತರ ಕನ್ನಡ (uttara kannda) ಜಿಲ್ಲಾ ನ್ಯಾಯಾಲಯ ಐತಿಹಾಸಿಕ ತೀರ್ಫು ನೀಡಿದೆ.
ಹತ್ಯೆ ಮಾಡಿದ ಅಪ್ಪ ನಿಗೆ ಜೀವಾವಧಿ ಶಿಕ್ಷೆ ನೀಡಿದರೇ ಮಗನಿಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಡಿ.ಎಸ್.ವಿಜಯಕುಮಾರ ದಿಂದ ಶಿಕ್ಷೆ ಪ್ರಕಟವಾಗಿದೆ.
ಇದನ್ನೂ ಓದಿ:-Bhatkal: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
2023 ರ ಫೆಬ್ರುವರಿ 24 ರಂದು ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆಯಾಗಿತ್ತು. ತನಿಖೆಗೆ ಇಳಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಆಸ್ತಿಗಾಗಿ ಶಂಭು ಭಟ್ ಸೊಸೆಯಾದ ವಿದ್ಯಾ ಭಟ್ ನ ತಂದೆಯಾದ ಶ್ರೀಧರ್ ಭಟ್ ಮತ್ತು ಆಕೆಯ ತಮ್ಮನಾದ ವಿನಯ ಭಟ್ ಕೊಲೆ ಮಾಡಿರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದರು.
ಶಂಭು ಭಟ್ಟರ ಹಿರಿಯ ಮಗ ಆನಾರೋಗ್ಯದಿಂದ ಸಾವನಪ್ಪಿದ ಬಳಿಕ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಕೊಟ್ಟಿದಕ್ಕೆ ತಕರಾರು ಮಾಡಿದ್ದ ಸೊಸೆ ವಿದ್ಯಾ ಭಟ್ ಗಲಾಟೆ ತೆಗೆದಿದ್ದಳು.
ಇದನ್ನೂ ಓದಿ:-Uttara kannda:ಕರಾವಳಿಯಲ್ಲಿ ಅಲರ್ಟ – ಪ್ರವಾಸಿಗರ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
ಈ ಆಸ್ತಿ ಕಲಹ ಮಾಡುತ್ತಿರುವ ಹಿಂದೆ ಆಕೆಯ ತಂದೆ ಮತ್ತು ತಮ್ಮನಿಂದ ಬೆಂಬಲ ವಿತ್ತು.2023 ರ ಫೆಬ್ರುವರಿ 24 ರಂದು ಶಂಭು ಭಟ್ , ಮಹಾದೇವಿ ಭಟ್, ರಾಘವೇಂದ್ರ ಭಟ್ ಹಾಗೂ ಕುಸುಮಾ ಭಟ್ ರನ್ನ ಮನೆಯಲ್ಲೇ ಭರ್ಭರವಾಗಿ ಕೊಲೆ ಮಾಡಲಾಗಿತ್ತು.
ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಆದರೆ ಕೊಲೆ ಘಟನೆಗೆ ಪ್ರಚೋದನೆ ನೀಡಿರುವ ಆರೋಪದಡಿ ಬಂಧಿತಳಾಗಿ ಜಾಮೀನಿನ ಮೇಲೆ ಈ ಹಿಂದೆ ಬಿಡುಗಡೆಯಾಗಿದ್ದ ವಿನಯ್ ಭಟ್‌ನ ಸಹೋದರಿ ವಿದ್ಯಾ ಭಟ್ಕಳ ಮೇಲೆ ಇರುವ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಕೆಯನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು.
ಇದನ್ನೂ ಓದಿ:-Lokayukta ride: ಆಧಾಯಕ್ಕಿಂತ ಅಧಿಕ ಆಸ್ತಿ ಅಂಕೋಲದ ಇಂಜಿನಿಯರ್ ಮನೆಯ ಮೇಲೆ ಲೋಕಾಯುಕ್ತ ದಾಳಿ!
ಒಟ್ಟು ನ್ಯಾಯಾಲಯದ ಮುಂದೆ 71 ಸಾಕ್ಷ್ಯಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಹಾಜರು ಪಡಿಸಿದ್ದು ,ನ್ಯಾಯಾಲಯದಲ್ಲಿ ದೂರುದಾರರ ಪರ ಸರ್ಕಾರಿ ಅಭಿಯೋಜಕರಾದ ತನುಜಾರವರು ವಾದ ಮಂಡಿಸಿದ್ದರು.
ತೀರ್ಪನ್ನು ಕಾದಿರಿದ್ದ ನ್ಯಾಯಾಲಯ ಪ್ರಮುಖ ಆರೋಪಿಗೆ ಗಲ್ಲು ಶಿಕ್ಷೆ ,ಎರಡನೇ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.