Bhatkal|ಅರಬ್ಬಿ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ- 25 ಮೀನುಗಾರರ ರಕ್ಷಣೆ
Bhatkal|ಅರಬ್ಬಿ ಸಮುದ್ರದಲ್ಲಿ ಪರ್ಷಿಯನ್ ಬೋಟ್ ಮುಳುಗಡೆ- 25 ಮೀನುಗಾರರ ರಕ್ಷಣೆ

ಕಾರವಾರ:- ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಷಿಯನ್ ಬೋಟ್ ಅಲೆಗಳ ಹೊಡೆತಕ್ಕೆ
ಮುಳುಗಡೆ ಯಾಗಿ ಅದರಲ್ಲಿದ್ದ 25 ಜನ ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (bhatkal)ತಾಲೂಕಿನ ನೇತ್ರಾಣಿ ನಡುಗಡ್ಡೆ ಬಳಿ ಇಂದು ನಡೆದಿದೆ.
ಇದನ್ನೂ ಓದಿ:-Bhatkal|ಮಗಳ ಅಶ್ಲೀಲ ವೀಡಿಯೋ ಹೊರಬಿಡುವ ಬೆದರಿಕೆ 20 ಲಕ್ಷ ಬೇಡಿಕೆಇಟ್ಟ ಮೂವರು ಯುವಕರ ಬಂಧನ
ಭಟ್ಕಳದ ಅಣ್ಣಪ್ಪ ಮೊಗೇರ್ ಎಂಬುವವರಿಗೆ ಸೇರಿದ ಮಹಾ ಮುರುಡೇಶ್ವರ ಹೆಸರಿನ ಪರ್ಷಿಯನ್ ಬೋಟ್ ಇದಾಗಿದ್ದು ಇಂದು ಮೀನುಗಾರಿಕೆಗೆ ಅರಬ್ಬಿ ಸಮುದ್ರದಲ್ಲಿ ಹೋಗುತ್ತಿರುವಾಗ ಅಲೆಗಳ ಅಬ್ಬರಕ್ಕೆ ಬೋಟ್ ಮುಳುಗಡೆಯಾಗಿದೆ.
ತಕ್ಷಣ ಕರಾವಳಿ ಕಾವಲುಪಡೆ ಕಂಟ್ರೋಲ್ ರೂಮ್ ಗೆ ಕರೆಮಾಡಿದ್ದು ಸ್ಥಳೀಯ ವೆಲ್ಲನ್ಕಿಣಿ ಮತ್ತು ಮಚ್ಚೆದುರ್ಗ ಎಂಬ ಎರಡು ಬೋಟ್ ಗಳು ಸಹಾಯಕ್ಕೆ ಆಗಮಿಸಿ 25 ಜನ ಮೀನುಗಾರರನ್ನು ರಕ್ಷಣೆ ಮಾಡಿದೆ. ಬೋಟ್ ಮುಳುಗಡೆಯಿಂದ ಅಂದಾಜು 80 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಘಟನೆ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ನೀಡಾಗಿದೆ.