For the best experience, open
https://m.kannadavani.news
on your mobile browser.
Advertisement

Budget 2025: ಅಡಿಕೆ ಎಲೆ ಚುಕ್ಕೆ ರೋಗ, ಬಜೆಟ್‌ನಲ್ಲಿ ಮಹತ್ವದ ಪ್ರಸ್ತಾಪ, ಏನದು?

ಬೆಂಗಳೂರು :- ಎಲೆ ಚುಕ್ಕೆ ರೋಗದಿಂದ ಲಕ್ಷಾಂತರ ಅಡಿಕೆ ಬೆಳೆಗಾರರು (Arecanut) ಸಂಕಷ್ಟಕ್ಕೀಡಾಗಿದ್ದಾರೆ. ಸಂಕಷ್ಟಕ್ಕೀಡಾದ ಬೆಳೆಗಾರರು ಶಿವಮೊಗ್ಗ ದಲ್ಲಿ ಕೇಂದ್ರ ಕೃಷಿ ಸಚಿವರನ್ನು ಕರೆಯಿಸಿ ಈ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಇದಲ್ಲದೇ ರಾಜ್ಯ ಸರ್ಕಾರಕ್ಕೆ ಸಹ ಸಮಸ್ಯೆಯನ್ನು ಅರಿವಾಗುವಂತೆ ಮಾಹಿತಿ ನೀಡಿದ್ದರು
10:23 PM Mar 07, 2025 IST | ಶುಭಸಾಗರ್
budget 2025  ಅಡಿಕೆ ಎಲೆ ಚುಕ್ಕೆ ರೋಗ  ಬಜೆಟ್‌ನಲ್ಲಿ ಮಹತ್ವದ ಪ್ರಸ್ತಾಪ  ಏನದು

Budget 2025: ಅಡಿಕೆ ಎಲೆ ಚುಕ್ಕೆ ರೋಗ, ಬಜೆಟ್‌ನಲ್ಲಿ ಮಹತ್ವದ ಪ್ರಸ್ತಾಪ, ಏನದು?

ಪ್ರಕೃತಿ ಮೆಡಿಕಲ್ ,ಕಾರವಾರ.

ಬೆಂಗಳೂರು :- ಎಲೆ ಚುಕ್ಕೆ ರೋಗದಿಂದ ಲಕ್ಷಾಂತರ ಅಡಿಕೆ ಬೆಳೆಗಾರರು (Arecanut) ಸಂಕಷ್ಟಕ್ಕೀಡಾಗಿದ್ದಾರೆ.

Advertisement

ಸಂಕಷ್ಟಕ್ಕೀಡಾದ ಬೆಳೆಗಾರರು ಶಿವಮೊಗ್ಗ ದಲ್ಲಿ ಕೇಂದ್ರ ಕೃಷಿ ಸಚಿವರನ್ನು ಕರೆಯಿಸಿ ಈ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ್ದರು. ಇದಲ್ಲದೇ ರಾಜ್ಯ ಸರ್ಕಾರಕ್ಕೆ ಸಹ ಸಮಸ್ಯೆಯನ್ನು ಅರಿವಾಗುವಂತೆ ಮಾಹಿತಿ ನೀಡಿದ್ದರು.

ಈ ಹಿನ್ನೆಲೆ ಸಸ್ಯ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ ಬಜೆಟ್‌ನಲ್ಲಿ ಎಲೆ ಚುಕ್ಕೆ ರೋಗದ ಕುರಿತು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ:-Karnataka Budget 2025 -ಉತ್ತರ ಕನ್ನಡಕ್ಕೆ ಸಿಕ್ಕಿದ್ದೇನು?

ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆಗೆ ತುತ್ತಾಗಿ 2 ಲಕ್ಷಕ್ಕಿಂತಲು ಹೆಚ್ಚು ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ರೋಗ ನಿಯಂತ್ರಿಸಿ ಸಸ್ಯ ಸಂರಕ್ಷಣೆಗೆ 62 ಕೋಟಿ ರೂ. ಒದಗಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ತೋಟಗಾರಿಕೆ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ 52 ಸಾವಿರ ಫಲಾನುಭವಿಗಳಿಗೆ 426 ಕೋಟಿ ರೂ. ಸಹಾಯಧನ ಒದಗಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ತಿಳಿಸಿದ್ದು ಅಡಿಕೆ ಬೆಳೆಗಾರರಿಗೆ ಒಂದಿಷ್ಟು ಬಲ ಬಂದಂತಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ