Karnataka ಮರಣಗಳ ಪರಿಹಾರದಲ್ಲೂ ತಾರತಮ್ಯ ಮಾಡಿದ ಕೇಂದ್ರ,ರಾಜ್ಯ ಸರ್ಕಾರ !
ಜನವರಿ 22 ರಾಜ್ಯದ ಪಾಲಿಗೆ ಕರಾಳ ಬುಧವಾರವಾಗಿ ಮಾರ್ಪಟ್ಟಿತ್ತು. ಉತ್ತರ ಕನ್ನಡ ಜಿಲ್ಲೆಯ ಒಂದೇ ಘಟನೆಯಲ್ಲಿ 10 ಸಾವು, ರಾಯಚೂರಿನ ಒಂದೇ ಘಟನೆಯಲ್ಲಿ 4 ಸಾವು ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ 25 ಸಾವುಗಳು ಸಂಭವಿಸಿವೆ. ಆದ್ರೆ ಇಷ್ಟೊಂದು ಸಾವುಗಳು ಒಂದೇ ದಿನ ಸಂಭವಿಸಿದ್ರೂ ಕೂಡ ಕೆಲವೇ ಮೃತರಿಗೆ ಪರಿಹಾರ ನೀಡಿಕೆಗೆ ಸಾರ್ವಜನಿಕ ವಲಯಗಳಿಂದ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ:-Yallapura ಲಾರಿ ಅಪಘಾತ ದುರಂತ ಆಗಿದ್ದೇನು? ಗ್ರೌಂಡ್ ರಿಪೋರ್ಟ್ ಇಲ್ಲಿದೆ.
ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಂಭವಿಸಿದ ಭಾರೀ ಅಪಘಾತದಲ್ಲಿ ಲಾರಿ ಪಲ್ಟಿಯಾಗಿ 10 ಸಾವು ಸಂಭವಿಸಿದೆ. ಮೃತರೆಲ್ಲರೂ ಸವಣೂರಿನ ಮೂಲದವರಾಗಿದ್ದಾರೆ. ಸಂತೆಗಾಗಿ ಕುಮಟ ಕ್ಕೆ ತರಕಾರಿ ಸಾಗಣೆ ಮಾಡುವಾಗ ಘಟನೆ ನಡೆದಿದೆ.
ಸರಕು ಸಾಗಣೆ ವಾಹನದಲ್ಲಿ ಬರೋಬ್ಬರಿ 29 ಜನ ಹಾಗೂ ತರಕಾರಿಗಳ ಸಾಗಣೆ ಮಾಡುವಾಗ ನಡೆದ ಅಪಘಾತವಿದು. ಇದರಲ್ಲಿ ಮೃತರಾದ 10 ಜನರಿಗೂ ರಾಜ್ಯ ಸರ್ಕಾರ 3 ಲಕ್ಷ ರೂಪಾಯಿ ಪರಿಹಾರದ ಚೆಕ್ ಅನ್ನು ಮೃತರ ಶವ ಸಾಗಣೆಗೂ ಮುನ್ನವೇ ನೀಡಿದೆ. ಕೇಂದ್ರ ಸರ್ಕಾರ ಕೂಡ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಇನ್ನು ಗಾಯಾಳುಗಳಿಗೂ 50ಸಾವಿರ ಹಣ ನೀಡುವುದಾಗಿ ಕೇಂದ್ರಸರ್ಕಾರ ಹೇಳಿದೆ.
ಆದ್ರೆ ಇದೇ ರೀತಿಯ ಘಟನೆಗಳಿಂದ ರಾಜ್ಯದ ಹಲವೆಡೆ ಇನ್ನೂ 15 ಜನರ ಸಾವು ಸಂಭವಿಸಿದೆ. ಇದರಲ್ಲಿ ರಾಯಚೂರಿನಲ್ಲಿ ಟಿಟಿ ವಾಹನ ಪಲ್ಟಿಯಾಗಿ 4 ಜನ ಮೃತಪಟ್ಟಿದ್ದಾರೆ. ಅದೇ ರೀತಿ ಬೆಳಗಾವಿಯ ಸವದತ್ತಿ ಯಲ್ಲಮ್ಮನ ಜಾತ್ರೆಗೆ ಬಂದಿದ್ದ ಇಬ್ಬರು ಬಾಲಕರು ನವಿಲುತೀರ್ಥ ಡ್ಯಾಮ್ ನಲ್ಲಿ ನದಿಗೆ ಇಳಿದು ಸಾವನ್ನಪ್ಪಿದ್ದಾರೆ. ಇನ್ನೂ ರಾಜ್ಯದ ಹಲವೆಡೆ ಅಪಘಾತಗಳಲ್ಲಿ 9 ಜನ ಮೃತಪಟ್ಟಿದ್ದಾರೆ. ಆದ್ರೆ ಇದರಲ್ಲಿ ಮೃತಪಟ್ಟ 15 ಜನರಲ್ಲಿ ಯಾರಿಗೂ ಕೂಡ ಪರಿಹಾರ ಘೋಷಣೆಯಾಗಿಲ್ಲ.
ಇದನ್ನೂ ಓದಿ:-Yallapura ಬೆಳಗಾವಿಯಿಂದ ಗೋಕರ್ಣಕ್ಕೆ ತೆರಳುತಿದ್ದ ಕಾರು ಅಪಘಾತ -ಆರು ಜನರಿಗೆ ಗಾಯ.
ಇದಲ್ಲದೇ ಸಿದ್ದಾಪುರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜಾತ್ರೆಗೆ ಹೋಗಿದ್ದ ಯುವತಿ ಮೇಲೆ ಮದ್ಯಸೇವಿಸಿದ ವ್ಯಕ್ತಿ ಕಾರು ಚಲಾಯಿಸಿ ಸಾವಿಗೆ ಕಾರಣನಾಗಿದ್ದ.
ಇದೀಗ ಒಂದು ಕೋಮಿಗೆ ಮಾತ್ರ ಪರಿಹಾರ ಎನ್ನುವಂತೆ ರಾಜ್ಯ ,ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದುಕಣ್ಣಿಗೆ ಸುಣ್ಣ ಎನ್ನುವಂತೆ ಮಾಡಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.