Karnataka| ಕುರ್ಚಿಗಾಗಿ ಏಳೆಂಟು ಜನರ ಪೈಪೋಟಿ,ಶಾಸಕ,ಮಂತ್ರಿಗಳೂ ರೇಸ್ ನಲ್ಲಿ! ವಿಜಯೇಂದ್ರ ಏನಂದ್ರು ಗೊತ್ತಾ?
Karnataka| ಕುರ್ಚಿಗಾಗಿ ಏಳೆಂಟು ಜನರ ಪೈಪೋಟಿ,ಶಾಸಕ,ಮಂತ್ರಿಗಳೂ ರೇಸ್ ನಲ್ಲಿ! ವಿಜಯೇಂದ್ರ ಏನಂದ್ರು ಗೊತ್ತಾ?
ಕಾರವಾರ:- ರಾಜ್ಯದ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ. ಆಡಳಿತ ಪಕ್ಷದಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.ಇಂದು ಶಿರಸಿಯಲ್ಲಿ (sirsi) ಮಾಧ್ಯಮಗಳ ಜೊತೆ ಮಾತನಾಡಿದ ಅವರು ಹಿರಿಯ ಶಾಸಕರು ಹಾಗೂ ಮಂತ್ರಿಗಳು ಹೇಗಾದ್ರೂ ಮಾಡಿ ಮುಖ್ಯಮಂತ್ರಿ ಆಗ್ಬೇಕು ಎಂದು ಪೈಪೋಟಿಗೆ ಇಳಿದಿದ್ದಾರೆ.
ಇದರಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು.ಇನ್ನು ಬರುವ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ, ರೈತರ ಬಗ್ಗೆ ಚರ್ಚೆ ಮಾಡುತ್ತೇವೆ
ದೊಡ್ಡ ಷಡ್ಯಂತ್ರ, ಕುತಂತ್ರ ರಾಜ್ಯ ಸರ್ಕಾರದಿಂದ ನಡೆಯುತ್ತಿದೆ,ಕೇಂದ್ರದ ಯೋಜನೆಗಳ ಅನುಷ್ಠಾನ ಮಾಡುತ್ತಿಲ್ಲ,ಪ್ರೋಗ್ರೆಸ್ ರಿಪೋರ್ಟ್ ನೀಡದೆ ಕೇಂದ್ರದ ಅನುದಾನ ಬರುತ್ತಿಲ್ಲ ಎನ್ನುತ್ತಿದ್ದಾರೆ.
Ankola| ಹಟ್ಟಿಕೇರಿ ಟೋಲ್ ಬಳಿ ಅಕ್ರಮ ಗೋವಾ ಮದ್ಯ ಜಪ್ತಿ|ಮಾಲು ಸಮೇತ ಆರೋಪಿ ಅಂದರ್
ಇವೆಲ್ಲವುಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.ಇನ್ನು ಬಿಜೆಪಿ(bjp) ರಾಜ್ಯಾಧ್ಯಕ್ಷರ ವಿರುದ್ಧ ಯತ್ನಾಳ್ ಸಭೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು ಅವರಿಗೆ ಸಂಪೂರ್ಣ ಸ್ವತಂತ್ರರಿದ್ದಾರೆ ,ಅವರು ಸಭೆ ಮಾಡುವ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ,ಏನು ತೀರ್ಮಾನ ಮಾಡಬೇಕೋ ಅದನ್ನ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ಯತ್ನಾಳ್ ಪಕ್ಷಕ್ಕೆ ವಾಪಸ್ ಬರೋದ್ರ ಬಗ್ಗೆ ನನಗೆ ಮಾಹಿತಿ ಇಲ್ಲ.ರಾಜ್ಯಮಟ್ಟದಲ್ಲಿ ನನ್ನ ಜೊತೆ ಆ ಕುರಿತ ಚರ್ಚೆಗಳು ನಡೆದಿಲ್ಲ ಎಂದರು.