ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Breaking news |ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ದೃವ ಪತನ, 3 ಸಾವು

ಗುಜರಾತ್ /ಗಾಂಧಿನಗರ:- ಭಾರತೀಯ ಕೋಸ್ಟ್ ಗಾರ್ಡ್‌ನ ಎಎಲ್‌ಹೆಚ್ ಧ್ರುವ್ ಹೆಲಿಕಾಪ್ಟರ್ (Coast Guard ALH Dhruv Helicopter) ಗುಜರಾತ್‌ನ (Gujarat) ಪೋರಬಂದರ್‌ನಲ್ಲಿ ತರಬೇತಿಯ ವೇಳೆ ಪತನಗೊಂಡು, ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
02:17 PM Jan 05, 2025 IST | ಶುಭಸಾಗರ್
Coast Guard Helicopter Crashes in Gujarat, 3 Dead

ಗುಜರಾತ್ /ಗಾಂಧಿನಗರ:- ಭಾರತೀಯ ಕೋಸ್ಟ್ ಗಾರ್ಡ್‌ನ ಎಎಲ್‌ಹೆಚ್ ಧ್ರುವ್ ಹೆಲಿಕಾಪ್ಟರ್ (Coast Guard ALH Dhruv Helicopter) ಗುಜರಾತ್‌ನ (Gujarat) ಪೋರಬಂದರ್‌ನಲ್ಲಿ ತರಬೇತಿಯ ವೇಳೆ ಪತನಗೊಂಡು, ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

Advertisement

ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಅದರಲ್ಲಿ ಇಬ್ಬರು ಪೈಲಟ್‌ಗಳು ಸೇರಿ ಮೂವರು ಇದ್ದರು. ಭಾರತೀಯ ಕೋಸ್ಟ್ ಗಾರ್ಡ್ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು , ಮೃತರಾದವರ ಮಾಹಿತಿ ತಿಳಿದು ಬರಬೇಕಿದೆ.

ಇದನ್ನೂ ಓದಿ:&Sagar ಭಾಗದಲ್ಲಿ ಆನೆಗಳು ಪ್ರತ್ಯಕ್ಷ ! ವಿಡಿಯೋ ನೋಡಿ

ಭಾರತೀಯ ಕೋಸ್ಟ್ ಗಾರ್ಡ್ ದೇಶದ ಸಮುದ್ರ ಭಾಗದಲ್ಲಿ ಶೋಧ ಮತ್ತು ರಕ್ಷಣೆ ಕಾರ್ಯನಿರ್ವಹಿಸುವ ಪಡೆಯಾಗಿದೆ.

Advertisement

ಎರಡು ವರ್ಷಗಳ ಹಿಂದೆ, ಎಎಲ್‌ಎಚ್ ಧ್ರುವ್ ಹೆಲಿಕಾಪ್ಟರ್‌ಗಳಲ್ಲಿ ಕೆಲವು ವೈಫಲ್ಯಗಳನ್ನು ಗುರುತಿಸಲಾಗಿತ್ತು,ಇದರ ವಿನ್ಯಾಸದ ಬಗ್ಗೆ ಕೂಡ ಇಷ್ಯುಗಳು ಇದ್ದವು. ಇದನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆ ಬಳಸುತ್ತವೆ.

ಇದನ್ನೂ ಓದಿ:-Karnataka ಹೊಸ ಪ್ರಬೇಧದ ಪರಾವಲಂಬಿ ಕಣಜ ಪತ್ತೆ

2023 ರಲ್ಲಿ ಹೆಲಿಕಾಪ್ಟರ್ ನ ಇಂಜಿನ್ ನ ಕೆಲವು ಭಾಗದಲ್ಲಿ ಸಮಸ್ಯೆಗಳನ್ನು ಗುರುತಿಸಲಾಗಿತ್ತು. ಟ್ರಯಲ್ ರನ್ ಮಾಡಲಾಗುತಿತ್ತು.ಸುರಕ್ಷತಾ ಪರಿಶೀಲನೆ ಪೂರ್ಣಗೊಂಡ ಮೇಲೆ, ಈ ಹೆಲಿಕಾಪ್ಟರ್‌ಗಳು ಮತ್ತೆ ಕಾರ್ಯನಿರ್ವಹಣೆಗೆ ಬಳಸಲಾಗಿದೆ.

ಭಾರತೀಯ ನೌಕಾಪಡೆ, ವಾಯುಪಡೆ, ಸೇನೆ ಮತ್ತು ಕೋಸ್ಟ್ ಗಾರ್ಡ್ ಒಟ್ಟು 325ಕ್ಕೂ ಹೆಚ್ಚು ಎಎಲ್‌ಎಚ್ ಧ್ರುವ್ ಹೆಲಿಕಾಪ್ಟರ್‌ಗಳನ್ನು ಹೊಂದಿದ್ದು, 2023ರ ಅಪಘಾತಗಳ ನಂತರ, ಇವೆಲ್ಲವೂ ತಾಂತ್ರಿಕ ತಪಾಸಣೆಗೊಳಪಟ್ಟಿದ್ದರೂ ಮತ್ತೆ ಬಳಕೆ ಮಾಡಲಾಗಿದ್ದು ಇದೀಗ ಈ ಹೆಲಿಕಾಪ್ಟರ್ ಪಥನ ಯಾವ ಕಾರಣದಿಂದ ಆಗಿದೆ ಎಂಬ ಬಗ್ಗೆ ತನಿಖೆ ನಂತರ ತಿಳಿದು ಬರಲಿದೆ.

Advertisement
Tags :
ALH Dhruv Crash Indian Coast GuardALH Dhruv Safety IssuesCoast Guard Helicopter CrashGujarat Helicopter AccidentHelicopter CrasPorbandar Helicopter Crash
Advertisement
Next Article
Advertisement