Breaking news|ಹೆಂಡತಿಯನ್ನು ಕೊಂದು ಬೆಡ್ ಅಡಿ ಬಚ್ಚಿಟ್ಟು ಪರಾರಿಯಾದ ಪತಿ!
Breaking news|ಹೆಂಡತಿಯನ್ನು ಕೊಂದು ಬೆಡ್ ಅಡಿ ಬಚ್ಚಿಟ್ಟು ಪರಾರಿಯಾದ ಪತಿ!
Belagavi (october 08l:- ಹೆಂಡತಿಯನ್ನು ಕೊಂದು ಹಾಸಿಗೆಯ ಕೆಳಗೆ ಹೆಣವನ್ನು ಅಡಗಿಸಿಟ್ಟು ಆರೋಪಿ ಪತಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಮಲದಿನ್ನಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿ ಪತಿ ಪರಾರಿಯಾಗಿರುವ ಮಾಹಿತಿ ಸಿಕ್ಕಿದ್ದು ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ಗಂಡ ಪರಾರಿಯಾಗಿದ್ದಾನೆ.
ಊರಿಗೆ ಹೋಗಿದ್ದ ಅತ್ತೆ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಮೂಡಲಗಿ ತಾಲೂಕಿನ ಕಮಲದಿನ್ನಿಯಲ್ಲಿ ಘಟನೆ ನಡೆದಿದ್ದು, ಸಾಕ್ಷಿ ಆಕಾಶ್ ಕಂಬಾರ(20) ಕೊಲೆಯಾದ ಮಹಿಳೆ.
Joida | ಬಂಗಾರದ ಆಸೆಗೆ ಶಿಕ್ಷಕಿ ಕೊಂದವನ ಬಂಧನ
ಆಕಾಶ್ ಕಂಬಾರ್ ಕೊಲೆ ಮಾಡಿ ಪರಾರಿಯಾಗಿರುವ ಪತಿ ಯಾಗಿದ್ದಾನೆ. ಸಾಕ್ಷಿ ಹಾಗೂ ಆಕಾಶ್ ಇಬ್ಬರು ಕಳೆದ 5 ತಿಂಗಳ ಹಿಂದೆ ಮದುವೆಯಾಗಿದ್ದರು, ಕೊಲೆಗೆ ಕಾರಣ ಏನು ಎಂಬುದು ತಿಳಿದು ಬರಬೇಕಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.