Dandeli :ಮನೆಯಲ್ಲಿ 14 ಕೋಟಿ ನಕಲಿ ನೋಟು ಪತ್ತೆ ! ಏನಿದು ಘಟನೆ?
Dandeli :ಮನೆಯಲ್ಲಿ 14 ಕೋಟಿ ನಕಲಿ ನೋಟು ಪತ್ತೆ ! ಏನಿದು ಘಟನೆ?
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli)ಗಾಂಧಿನಗರದ ಅರ್ಷದ್ ಖಾನ್ ಎಂಬಾತನ ಮನೆಯಲ್ಲಿ 500 ರೂ ನೋಟಿನ 14 ಕೋಟಿ ನಕಲಿ ನೋಟು ಪತ್ತೆಯಾಗಿದೆ.
ಸ್ಥಳೀಯರೊಬ್ಬರು ಮಾಹಿತಿ ನೀಡಿದ ಹಿನ್ನಲೆಯಲ್ಲಿ ದಾಂಡೇಲಿ ಪೊಲೀಸರು ಅರ್ಷದ್ ಖಾನ್ ಎಂಬಾತನ ಮನೆಗೆ ತೆರಳಿ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:-Dandeli: ಜೀವ ಪಣಕ್ಕಿಟ್ಟು ನದಿಯಲ್ಲಿ ಕಾರ್ಯಾಚರಣೆ ಎರಡು ದಿನದ ನಂತರ ವಿದ್ಯುತ್ ಪೂರೈಕೆ ಮಾಡಿದ ಹೆಸ್ಕಾಂ ಸಿಬ್ಬಂದಿ
ಪೊಲೀಸರು ಪರಿಶೀಲನೆ ನಡೆಸಿದಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಬರಹ ಇಲ್ಲದ, ಗವರ್ನರ್ ಸಹಿ ಇಲ್ಲದ ನೋಟು ಇದಾಗಿದ್ದು ,ಮೂವಿ ಶೂಟಿಂಗ್ ಪರ್ಪಸ್ ಓನ್ಲಿ ಎಂದು ನೋಟಿನ ಮೇಲೆ ಬರೆದಿದೆ.
ಇನ್ನು ನೋಟಿನ ಸಂಖ್ಯೆಯಲ್ಲಿ ಸೊನ್ನೆ ಅಷ್ಟೇ ನಮೂದುಮಾಡಲಾಗಿದ್ದು ಯಾವ ಉದ್ದೇಶಕ್ಕಾಗಿ ಈ ನೋಟುಗಳನ್ನು ಬಳಸಲಾಗಿದೆ ಎಂದು ತನಿಖೆ ಕೈಗೊಳ್ಳಲಾಗಿದೆ. ಆದರೇ ಮನೆಯ ಮಾಲೀಕ ಅರ್ಷದ್ ಖಾನ್ ಕಳೆದ ಒಂದು ತಿಂಗಳಿಂದ ಆಗಮಿಸಿಲ್ಲ. ಹೀಗಾಗಿ ಇದು ಯಾವುದಕ್ಕೆ ಬಳಕೆ ಮಾಡಲು ತರಲಾಗಿದೆ ಎಂಬ ಬಗ್ಗೆ ಅನುಮಾನ ಹೆಚ್ಚಿಸಿದೆ.

ಪೊಲೀಸರ ಮಾಹಿತಿಯಂತೆ ಈ ನೋಟನ್ನು ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದೆ ಎನ್ನಲಾಗುತಿದ್ದು ತನಿಖೆ ನಂತರ ಹೆಚ್ಚಿನ ವಿವರ ಹೊರಬರಲಿದೆ ಎಂದಿದ್ದಾರೆ.
ಸದ್ಯ ಪ್ರಕರಣ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.