ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Deepavaliಯಲ್ಲಿ ಮನೆಯ ಮುಂದೆ ದೀಪ ಬೆಳಗಿಸುವುದು ಏಕೆ ಹಬ್ಬದ ಮಹತ್ವ ವೇನು?

ಒಂದು ಮಾಸದ ಕೊನೆಯಿಂದ ಇನ್ನೊಂದು ಮಾಸದ ಆರಂಭದ ತನಕ ಆಚರಿಸುವ ದೀರ್ಘಕಾಲದ ಮತ್ತು ನಾಡಿನ ಎಲ್ಲೆಡೆಗೆ ಆಚರಿಸುವ ದೀಪಾವಳಿಯು (Deepavali) ಹಬ್ಬಗಳ ರಾಜನೆಂದು ಖ್ಯಾತವಾಗಿದೆ.
10:43 PM Oct 31, 2024 IST | ಶುಭಸಾಗರ್
ಅತೀ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತಗಳ ಕರೀದಿಗೆ ಒಮ್ಮೆ ಭೇಟಿನೀಡಿ. ಫೋಟೋದ ಮೇಲೆ ಕ್ಲಿಕ್ ಮಾಡಿ ಮಾಹಿತಿ ತಿಳಿಯಿರಿ.
ಕಾರವಾರದಲ್ಲಿ ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ವಿಶೇಷ ರಿಯಾಯಿತಿ ಮಾರಾಟ ಒಮ್ಮೆ ಭೇಟಿಕೊಡಿ

ಲೇಖನ :- ಅನಂತ ಚಿಂತಾಮಣಿ ಜ್ಯೋತಿಷಿ. ಬಿಣಗಾ,ಕಾರವಾರ.

Advertisement

ಒಂದು ಮಾಸದ ಕೊನೆಯಿಂದ ಇನ್ನೊಂದು ಮಾಸದ ಆರಂಭದ ತನಕ ಆಚರಿಸುವ ದೀರ್ಘಕಾಲದ ಮತ್ತು ನಾಡಿನ ಎಲ್ಲೆಡೆಗೆ ಆಚರಿಸುವ ದೀಪಾವಳಿಯು (Deepavali) ಹಬ್ಬಗಳ ರಾಜನೆಂದು ಖ್ಯಾತವಾಗಿದೆ.

ಕಾರ್ತಿಕ ಮಾಸದ ಶುಕ್ಲಪಕ್ಷದ ಪ್ರತಿಪದೆಯು ಬಲಿಪಾಡ್ಯವಾಗಿದ್ದು, ಅಂದು ಬಲಿಚಕ್ರವರ್ತಿಯ ಪೂಜೆಯು ನಡೆಯುತ್ತದೆ. ಬಲಿಚಕ್ರವರ್ತಿಯು ಇಂದ್ರಪದವಿ ಏರಿದ್ದು, ವಿಷ್ಣುಭಕ್ತನಾಗಿದ್ದು ಇವನು ಮೂರು ಲೋಕಗಳಲ್ಲಿ ತನ್ನ ಸಾಮ್ರಾಜ್ಯವನ್ನು ಹೊಂದಿದ್ದನು.

ಇದನ್ನೂ ಓದಿ:-Uttarakannda News| ಸಮುದ್ರದಲ್ಲಿ ಹುಚ್ಚಾಟ ಮಾಡಿದ ಪ್ರವಾಸಿಗರಿಗೆ ಲಾಠಿ ಏಟು!video ನೋಡಿ.

Advertisement

ಬಲಿ ಸಾಮ್ರಾಟನ ಒಳ್ಳೆಯ ಗುಣಗಳನ್ನು ವಿಷ್ಣು ಮೆಚ್ಚಿಕೊಂಡಿದ್ದರೂ ಕೂಡ ಅವನ ಅತಿಯಾದ ವಿಶ್ವಾಸಕ್ಕೆ ಪ್ರಾಯಶ್ಚಿತ್ತವನ್ನು ನೀಡಬೇಕೆಂದು ನಿರ್ಧರಿಸಿ ಪ್ರತಿ ದಿನದಂತೆ ಬಲಿಂದ್ರನು ಯಾಗವನ್ನು ಕೊನೆಗೊಳಿಸಿದಾಗ ಭಗವಂತನು ವಾಮನ ರೂಪದಲ್ಲಿ ಆತನಲ್ಲಿಗೆ ಬಂದು ತನ್ನ ಚರಣದ ಮೂರು ಅಡಿ ನೆಲವನ್ನು ಯಾಚಿಸಿದಾಗ ಬಲಿಯು ನಸುನಗೆಯಿಂದ ಒಪ್ಪಿಗೆಯನ್ನು ಸೂಚಿಸಿದನು.

ಕೂಡಲೇ ವಾಮನನು ಭೂಮಿ, ಆಗಸಗಳನ್ನು ಬೆಳೆದು ಒಂದು ಚರಣದಿಂದ ನಭವನ್ನು , ಇನ್ನೊಂದರಿಂದ ಪೃಥ್ವಿಯನ್ನು ತುಂಬಿಸಿದನು. ಮೂರನೆಯ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಪ್ರಶ್ನಿಸಿದಾಗ ಬಲಿ ಸಾಮ್ರಾಟನು ಭಗವಂತನನ್ನು ಗುರುತಿಸಿ ನನ್ನ ತಲೆಯ ಮೇಲೆ ಇಡು ಎಂದು ತಲೆ ಬಗ್ಗಿಸಿ ಕುಳಿತುಕೊಂಡನು.

ವಾಮನನು ಅವನನ್ನು ಪಾತಾಳಕ್ಕೆ ಅಟ್ಟಿ, ಪಾತಾಳದ ಸ್ವಾಮಿತ್ವವನ್ನು ಆತನಿಗೆ ನೀಡಿದನು. ಮತ್ತು ತಾನು ಅವನ ಬಾಗಿಲಿನ ಕಾವಲುಗಾರನಾಗುವನೆಂದು ವಚನವನ್ನು ನೀಡಿದನು.

ಈ ವಾಮನನ ಅವತಾರ ದಿವಸವನ್ನು ಬಲಿಪ್ರತಿಪದೆ, ಎಂಬ ಹೆಸರಿನಲ್ಲಿ ಭೂಲೋಕದ ಜನರು ಆಚರಿಸುತ್ತಾರೆ ಎಂದು ವಿಷ್ಣುವು ಹೇಳಿದಾಗ ಬಲಿಚಕ್ರವರ್ತಿಯು “ಭಗವಂತ ಈ ಸಮಯದ ಸ್ಮರಣೆಗಾಗಿ ಪ್ರತಿವರ್ಷದಲ್ಲೂ ಮೂರು ಹಗಲು ಮತ್ತು ರಾತ್ರೆಗಳ ಪರ್ಯಂತ ಪ್ರಥ್ವಿಯಲ್ಲಿ ನನ್ನ ಅಧಿಕಾರವಿರಬೇಕು, ಮತ್ತು ದೀಪದ ಸಾಲುಗಳನ್ನು ಬೆಳಗುವದರಿಂದ ಲಕ್ಷ್ಮೀಯು ಅಲ್ಲಿ ವಾಸ್ತವ್ಯವನ್ನು ಮಾಡಬೇಕು” ಎಂಬ ವರವನ್ನು ವಾಮನನಿಂದ ಪಡೆದುಕೊಂಡನು.

ಅಂದು ಗೋಪೂಜೆಯು ನಡೆಯುತ್ತದೆ. ಶ್ರೀಕೃಷ್ಣನ ಮಾತಿನಂತೆ ನಂದಗೋಪಾದಿಗಳು ಇಂದ್ರ ಪೂಜೆಯನ್ನು ತಪ್ಪಿಸಿ ಗೋವರ್ಧನ ಗಿರಿಗೆ ಅರ್ಚನೆಯನ್ನು ಮಾಡಿದಾಗ ಕೋಪಗೊಂಡ ಇಂದ್ರನು ಸತತವಾಗಿ ಬಾರಿ ಮಳೆಯನ್ನು ಸುರಿಸಿದಾಗ ಎಲ್ಲೆಡೆಗೆ ಹಾಹಾಕಾರವಾಯಿತು.

ಆಗ ಶ್ರೀಕೃಷ್ಣನು ಕಿರಿಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದು ಗೋವುಗಳನ್ನು ಹಾಗೂ ಗೋಪಾಲರನ್ನು ಕಾಪಾಡಿದನು. ಹೀಗಾಗಿ ಗೋವರ್ಧನ ಸಹಿತ ಗೋಪೂಜೆಯು ಅಂದು ಮಾಡಲಾಗುತ್ತದೆ.

ಇದನ್ನೂ ಓದಿ:-CENTRAL GOVERNMENT | ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ-ವಿವರ ನೋಡಿ

ಶ್ರೀಕೃಷ್ಣನ ವಾಮಭಾಗದಿಂದ ಕರು ಸಹಿತ ಸುರಭಿ ಆಕಳು ನಿರ್ಮಾಣವಾಯಿತು. ಮತ್ತು ಸುಧಾಮನೆಂಬ ಗೊಲ್ಳನು ಸುರಭಿಯಿಂದ ಹಾಲನ್ನು ಕರೆದು ಗುಡಾಣದಲ್ಲಿ ಸೇರಿಸಿದನು.

ಈ ಹಾಲು ಮುಪ್ಪು ಮತ್ತು ಮರಣದ ನಾಶಕವಾಗಿದ್ದು, ಅಮೃತದಂತೆ ಇತ್ತು. ಇದನ್ನು ಶ್ರೀಕೃಷ್ಣ ಹಾಗೂ ಅವನ ಕುಟುಂಬದವರೆಲ್ಲರೂ ಸಾಕಷ್ಟು ಕುಣಿದರು. ಈ ಗುಡಾಣವು ಒಡೆದು ಶತಯೋಜನ ವಿಸ್ತೀರ್ಣದಲ್ಲಿ ಸರೋವರವಾಯಿತು. ಅದಿ ಕ್ಷೀರ ಸರೋವರವಾಗಿ ಮಾರ್ಪಟ್ಟಿತು. ರಾಧೆಯು ಇಲ್ಲಿ ಜಲಕೇಳಿಯನ್ನು ಮಾಡಿದ್ದಳು. ಸುರಭಿಯಿಂದ ಕೊಟ್ಯಾಂತರ ಗೋವುಗಳು ಹಾಗೂ ಕರುಗಳು ಪ್ರಕಟವಾದವು. ಆಗ ಶ್ರೀಕೃಷ್ಣನು ಪರಮ ವೈಭವದಿಂದ ಗೋಪೂಜೆಯನ್ನು ಮಾಡಿದನು. ಅಂದಿನಿಂದ ಕಾರ್ತಿಕಮಾಸದ ಶುಕ್ಲಪಕ್ಷದ ಪ್ರತಿಪದೆಯ ದಿವಸ ಗೋಪೂಜೆಯು ಆರಂಭಗೊಂಡಿತು.

ಇದನ್ನೂ ಓದಿ:-Deepavali ಗೆ ಖರ್ಚು ಹೆಚ್ಚಾಯ್ತಾ? ಕಾರವಾರದಲ್ಲಿ ಸಿಗುತ್ತೆ ಕಮ್ಮಿ ಬೆಲೆಗೆ ಗುಣಮಟ್ಟದ ವಸ್ತುಗಳು ವಿವರ ನೋಡಿ.

ಕಾರ್ತಿಕ ಶುದ್ಧ ಪ್ರತಿಪದೆಯು ವಿಕ್ರಮ ಸಂವತ್ಸರವನ್ನು ಪಾಲಿಸುವವರಿಗೆ ಯುಗಾದಿಯಾಗಿದ್ದು, ಹೊಸ ವರ್ಷದ ಪ್ರಾರಂಭವೆಂದುಹಬ್ಬ ಆಚರಿಸುತ್ತಾರೆ.

ಕಾರ್ತಿಕ ಶುದ್ಧ ಪ್ರತಿಪದೆಯ ದಿನ ಅಭ್ಯಂಗ ಸ್ನಾನ, ನೂತನ ವಸ್ತಾ ಧಾರಣೆ ದ್ಯೂತ ನಿರಾಜನ ವಿಧಿಯು ಇರುತ್ತದೆ.

ಕಾರ್ತಿಕ ಶುಕ್ಲ ದ್ವಿತಿಯೆಯು ಯಮದ್ವಿತಿಯೇಯಾಗಿದ್ದು ಅಂದು ಯಮಧರ್ಮರಾಜನು ಯಮುನೆಯ ಮನೆಗೆ ಹೋಗಿ ಬಟ್ಟೆ ಒಡವೆಯನ್ನು ನೀಡಿ ಅಲ್ಲಿ ಊಟ ಮಾಡಿದ್ದನು.

ಈ ದಿನದಂದು, ಯಮುನಾಸ್ನಾನ, ಅಪರಾಹ್ನ ಕಾಲದಲ್ಲಿ ಚಿತ್ರಗುಪ್ತ ಸಹಿತ ಯಮಪೂಜೆಯು ನಡೆಯುತ್ತದೆ. ಅಂದು ಗಂಡುಮಕ್ಕಳು ಸೋದರಿಯ ಮನೆಗೆ ಹೋಗುತ್ತಾರೆ. ತಂಗಿಯು ಸೋದರನಿಗೆ ರಂಗೋಲಿ ಇಟ್ಟ ಮಣೆಯ ಮೇಲೆ ಕೂಡ್ರಿಸಿ ತೈಲ ಲೇಪನ ಮಾಡಿ ಅಭ್ಯಂಗ ಸ್ನಾನವನ್ನು ಮಾಡಿಸಿ ಸಿಹಿ ಪಕ್ವಾನ್ನದ ಊಟವನ್ನು ಬಡಿಸಿ ಆರತಿಯನ್ನು ಬೆಳಗುತ್ತಾರೆ.

ಕಾರ್ತಿಕಶುಕ್ಲ ತೃತಿಯೇ ಭಗಿನಿತೃತಿಯೇ ಯಾಗಿದ್ದು ಅಂದು ಸೋದರಿಯರು ಸೋದರನ ಮನೆಗೆ ಹೋಗಿ ಸತ್ಕಾರವನ್ನು ಸ್ವೀಕರಿಸುತ್ತಾರೆ.

ಒಟ್ಟಿನಲ್ಲಿ ದೀಪಾವಳಿಯು ಕತ್ತಲೆಯಿಂದ ಬೆಳಕಿನತ್ತ ಒಯ್ಯುವ ಸಾಧನವಾಗಿದ್ದು ಸಕಲರಲ್ಲಿ ಸೌಹಾರ್ದತೆಯನ್ನು ವರ್ಧಿಸುವಲ್ಲಿ ಬಹುಮುಖ್ಯವಾದ ಪಾತ್ರವನ್ನು ವಹಿಸಿದೆ. ಎಂದರೆ ತಪ್ಪಾಗಲಾರದು.

ಲೇಖರ ಸಂಪರ್ಕ ವಿಳಾಸ: ಅನಂತ ಚಿಂತಾಮಣಿ ಜ್ಯೋತಿಷಿ,ಅಂಚೆ: ಬಿಣಗಾ 581307, ಕಾರವಾರ.
Advertisement
Tags :
DeepavaliDeepavali articleDeepavali significance of the festivalKanndanewsKarnatakaದೀಪಾವಳಿದೀಪಾವಳಿ ವಿಶೇಷಲೇಖನ
Advertisement
Next Article
Advertisement