sahakari sapthaha:ಸ್ಥಳೀಯ ಶಾಸಕರನ್ನ ಮರೆತ ಅಧಿಕಾರಿಗಳು-ಹೆಬ್ಬಾರ್ ರಾಜಕೀಯಕ್ಕೆ ಸಿಟ್ಟಾದ ಕಾಂಗ್ರೆಸಿಗರು!
ಕಾರವಾರ :- ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲು ಸಜ್ಜಾಗಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಇದೀಗ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಕ್ಷೇತ್ರದ ಕಾಂಗ್ರೆಸ್ ಶಾಸಕರು ಸಿಟ್ಟಾಗಿದ್ದಾರೆ.
ಕಾಂಗ್ರೆಸ್ ಸೇರುವ ಕುರಿತು ಶಾಸಕರಾದ ಆರ್.ವಿ ದೇಶಪಾಂಡೆ ,ಶಾಸಕ ಭೀಮಣ್ಣ ನಾಯ್ಕ ರವರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಇದೀಗ ಏಟಿಗೆ ಎದುರೇಟು ಎನ್ನುವಂತೆ ಜಿಲ್ಲಾ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ತನ್ನ ವಿರೋಧಿಗಳಿಗೆ ಇಂದು ಶಿರಸಿಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಆಮಂತ್ರಣ ಪತ್ರಿಕೆಯಲ್ಲಿ ಹಾಗೂ ಇಲಾಖೆ ಬ್ಯಾನರ್ ನಲ್ಲಿ ಶಾಸಕರ ಹೆಸರನ್ನೇ ಹಾಕದೇ ಶಿಷ್ಟಾಚಾರ ಉಲ್ಲಂಘನೆಗೆ ಮಾಡಿದ್ದು ಇದೀಗ ವಿವಾಧಕ್ಕೆ ಕಾರಣವಾಗಿದೆ.
70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಮಂತ್ರಣ ಪತ್ರಿಕೆ ಮತ್ತು ಬ್ಯಾನರ್ ನಲ್ಲಿ ಸ್ಥಳೀಯ ಶಾಸಕರ ಪೋಟೊ ಹಾಕದಿರುವ ಬಗ್ಗೆ ಕಾರ್ಯಕ್ರಮ ನಡೆಯುತಿದ್ಧ ಸ್ಥಳಕ್ಕೆ ಶಿರಸಿ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿ ಇಲಾಖೆ ಹಾಗೂ ಅಧ್ಯಕ್ಷರ ನಡುವಳಿಕೆಯನ್ನು ತೀವೃವಾಗಿ ಖಂಡಿಸಿದ್ದಾರೆ.
ಆಮಂತ್ರಣ ಪತ್ರಿಕೆ ಹಾಗೂ ಬ್ಯಾನರ್ ಹೊರಗೆ ಬಂದಂತೆ ಶಾಸಕ ಭೀಮಣ್ಣ ಟಿ ನಾಯ್ಕ ಭಾವಚಿತ್ರ ಇರದಿರುವದನ್ನು ಕಂಡು ಕೆಂಡ ಮಂಡಲರಾದ ಕಾಂಗ್ರೆಸ್ ಕಾರ್ಯಕರ್ತರು ಸರಕಾರದ ಶಿಷ್ಟಾಚಾರ ಪ್ರಕಾರ ಯಾವುದೇ ಸರಕಾರಿ ಕಾರ್ಯಕ್ರಮವಾದರೂ ಆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರಿಗೆ ಆಧ್ಯತೆ ನೀಡಬೇಕು.ಆದರೆ ಸಹಕಾರಿ ಇಲಾಖೆ ಇದನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಖಂಡಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಬಗ್ಗೆ ಇಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಜಗದೀಶ ಗೌಡರವರು ಕಾರ್ಯಕರ್ತರೊಂದಿಗೆ ಸಭೆ ನಡೆಸಿ ತಿರ್ಮಾನ ಕೈಗೊಂಡಿದ್ದಾರೆ.
ಇನ್ನು ಹಲವು ಗೊಂದಲಗಳಿಗೆ ಕಾರಣವಾಗಿದ್ದ ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಬೇಕಿದ್ದ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ , ಕಾರವಾರ ಶಾಸಕ ಸತೀಶ್ ಸೈಲ್ ,ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಗೈರಾಗಿದ್ದರು.