Kumta :ಕುಮಟಾದ ದೇವಿಮನೆ ಘಟ್ಟದಲ್ಲಿ ಭೂಕುಸಿತ -ಸಂಚಾರ ಬಂದ್ ಆಗುವ ಸಾಧ್ಯತೆ
Kumta :ಕುಮಟಾದ ದೇವಿಮನೆ ಘಟ್ಟದಲ್ಲಿ ಭೂಕುಸಿತ -ಸಂಚಾರ ಬಂದ್ ಆಗುವ ಸಾಧ್ಯತೆ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ (uttara kannada) ಅಬ್ಬರದ ಮಳೆ (rain) ಒಂದುಕಡೆಯಾದರೇ ಮತ್ತೊಂದುಕಡೆ ಭೂಕುಸಿತಗಳು ಆಗುತಿದ್ದು, ಇಂದು ಕುಮಟಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 766 (ಇ) ಯಲ್ಲಿನ ದೇವಿಮನೆ ಘಟ್ಟ ಭಾಗದಲ್ಲಿ ದೊಡ್ಡ ಪ್ರಮಾಣದ ಭೂಕುಸಿತವಾಗಿದೆ.
ಇದನ್ನೂ ಓದಿ:-Kumta:ದೊಡ್ಮನೆ ಘಟ್ಟದಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ: ಕುಮಟಾ-ಸಿದ್ದಾಪುರ ಮಾರ್ಗದ ಸಂಚಾರ ತಾತ್ಕಾಲಿಕ ಬಂದ್
ದೇವಿಮನೆ ಘಟ್ಟದ ಕ್ಷೇತ್ರ ಪಾಲೇಶ್ವರ ದೇವಸ್ಥಾನದ ಮೆಟ್ಟಿಲುಭಾಗದಿಂದ ಕುಸಿತವಾಗಿ(landslide) ಸುಮಾರು 50 ಅಡಿಗೂ ಹೆಚ್ಚು ದೂರು ಕುಸಿದಿದೆ. ಇನ್ನು ಕುಸಿತದ ತೀವ್ರತೆಗೆ ಹೆದ್ದಾರಿ ಭಾಗದ ಸಿಮೆಂಟ್ ರಸ್ತೆ ಸಹ ಕಿತ್ತು ಬಂದಿದ್ದು ಘಟ್ಟ ಭಾಗದಲ್ಲಿ ಹೆಚ್ಚಿನ ಮಳೆಯಾದರೇ ಮತ್ತೆ ಭೂ ಕುಸಿತವಾಗುವ ಆತಂಕ ತಂದೊಡ್ಡಿದ್ದು ಕುಮಟಾ-ಶಿರಸಿ ಸಂಪರ್ಕ ಕೊಂಡಿಯೇ ಬಂದ್ ಆಗುವ ಸಾಧ್ಯತೆಗಳಿವೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ನಿರಂತರ ಭೂಕುಸಿತವಾಗುತ್ತಲೇ ಇದ್ದು ಹೊಸದಾಗಿ ನಿರ್ಮಿಸಿದ ಸಿಮೆಂಟ್ ರಸ್ತೆ ಸಹ ಭೂ ಕುಸಿತದ ಮಣ್ಣಿನಿಂದ ಮುಚ್ಚಿಹೋಗಿದೆ.2024 ರ ಡಿಸೆಂಬರ್ 1 ರಂದು ಇದೇ ಭಾಗದಲ್ಲಿ ಮೂರು ಸೆಕೆಂಡ್ ನಷ್ಟು ಭೂಮಿ ಕಂಪಿಸಿದ್ದು ಭೂಕಂಪನದ ಅನುಭವವಾಗಿತ್ತು.
ಇದನ್ನೂ ಓದಿ:-Honnavar : ಮಂಗನ ಕಾಯಿಲೆಗೆ ವೃದ್ದ ಬಲಿ ಹೊನ್ನಾವರದಲ್ಲಿ ಎರಡಕ್ಕೇರಿದ ಸಾ***
ಇದರ ಬೆನ್ನಲ್ಲೇ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ ಭೂ ವಿಜ್ಞಾನಿಗಳಿಂದ ಇಲ್ಲಿನ ಸ್ಥಳ ಪರಿಶೀಲನೆ ನಡೆಸಿ ಮಣ್ಣಿನ ಪದರ ಸಡಿಲವಾಗಿರು ಕುರಿತು ಮಾಹಿತಿ ನೀಡಿತ್ತು.ಇನ್ನು ದೇವಿಮನೆ ಘಟ್ಟಭಾಗದಲ್ಲಿಯೇ ವಿಶ್ವ ಪ್ರಸಿದ್ಧ ಯಾಣ ಕ್ಷೇತ್ರವು ಸಹ ಇದ್ದು ಈ ಭಾಗದಲ್ಲಿ ಸಹ ಕಳೆದ ಎರಡು ವರ್ಷದ ಹಿಂದೆ ಭೂಕುಸಿವಾಗಿತ್ತು.
ಇದೀಗ ದೇವಿಮನೆ ಘಟ್ಟ ಭಾಗದಲ್ಲಿ ಭೂ ಕುಸಿವಾಗಿದ್ದು ಪಕ್ಕದಲ್ಲೇ ವಾಣಿಜ್ಯ ಮಳಿಗೆಗಳು ಸಹ ಇದ್ದು ಅಲ್ಲಿಯೂ ಕುಸಿತವಾಗುವ ಆತಂಕ ತಂದೊಡ್ಡಿದೆ.