ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavar: ಪಾಕಿಸ್ತಾನಕ್ಕಿಲ ವೀಳ್ಯದೆಲೆ- ಶಾಶ್ವತ ನಿರ್ಬಂಧ ವಿಧಿಸಿದ ರೈತರು

ಕಾರವಾರ:- ಪೆಹಲ್ಗಾಮ್(pahalgav) ಉಗ್ರರ ನರಮೇಧ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವು ರೀತಿಯ ಕ್ರಮಗಳನ್ನು ಜರುಗಿಸಿದ್ದು ದೇಶದ ಯಾವುದೇ ವಸ್ತುಗಳನ್ನು ಪಾಕಿಸ್ತಾನಕ್ಕೆ ರಫ್ತುಮಾಡದಿರಲು ನಿರ್ಧರಿಸಿದೆ.
11:07 PM May 16, 2025 IST | ಶುಭಸಾಗರ್
ಕಾರವಾರ:- ಪೆಹಲ್ಗಾಮ್(pahalgav) ಉಗ್ರರ ನರಮೇಧ ಬೆನ್ನಲ್ಲೇ ಭಾರತ ಪಾಕಿಸ್ತಾನದ ವಿರುದ್ಧ ಹಲವು ರೀತಿಯ ಕ್ರಮಗಳನ್ನು ಜರುಗಿಸಿದ್ದು ದೇಶದ ಯಾವುದೇ ವಸ್ತುಗಳನ್ನು ಪಾಕಿಸ್ತಾನಕ್ಕೆ ರಫ್ತುಮಾಡದಿರಲು ನಿರ್ಧರಿಸಿದೆ.

Honnavar: ಪಾಕಿಸ್ತಾನಕ್ಕಿಲ ವೀಳ್ಯದೆಲೆ- ಶಾಶ್ವತ ನಿರ್ಬಂಧ ವಿಧಿಸಿದ ರೈತರು

Advertisement

ಪ್ರಕೃತಿ ಮೆಡಿಕಲ್ ,ಕಾರವಾರ.

ಕಾರವಾರ:- ಪೆಹಲ್ಗಾಮ್(pahalgav)  ಉಗ್ರರ ನರಮೇಧ ಬೆನ್ನಲ್ಲೇ  ಭಾರತ ಪಾಕಿಸ್ತಾನದ ವಿರುದ್ಧ ಹಲವು ರೀತಿಯ ಕ್ರಮಗಳನ್ನು ಜರುಗಿಸಿದ್ದು ದೇಶದ ಯಾವುದೇ ವಸ್ತುಗಳನ್ನು ಪಾಕಿಸ್ತಾನಕ್ಕೆ ರಫ್ತುಮಾಡದಿರಲು ನಿರ್ಧರಿಸಿದೆ.ಇದರ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರೈತರು ಪಾಕಿಸ್ತಾನಕ್ಕೆ ರಫ್ತಾಗುತಿದ್ದ ವೀಳ್ಯದೆಲೆಯನ್ನು  ಶಾಶ್ವತವಾಗಿ ಕಳುಹಿಸದಿರಲು ನಿರ್ಧರಿಸಿದೆ.

ಪಾಪಿ ಪಾಕಿಸ್ತಾನ(pakisthan) ಬೆಂಬಲಿತ ಉಗ್ರರಿಂದ ಪೆಹಲ್ಗಾಮ್ ನಲ್ಲಿ ನರಮೇಧವೇ ನಡೆದುಹೋಯ್ತು. ಕೇಂದ್ರ ಸರ್ಕಾರ ಆಪರೇಶನ್ ಸಿಂಧೂರ ಮೂಲಕ ತಕ್ಕ ಉತ್ತರವೇನೋ ಕೊಟ್ಟಿದೆ. ಜೊತೆಗೆ ಪಾಕಿಸ್ತಾನದ ವಾಣಿಜ್ಯ ವ್ಯವಹಾರ ಸಹ ಬಂದ್ ಮಾಡಿದೆ. ಆದರೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರಿಂದ ವೀಳ್ಯದೆಲೆಯನ್ನು ದೆಹಲಿ ವರ್ತಕರು ಕರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತಿದ್ದರು.

ಇದನ್ನೂ ಓದಿ:-Honnavar ದೋಣಿ ವಿಹಾರ- ಅಕ್ರಮ ವಾಣಿಜ್ಯ ಬಳಕೆ ಬೋಟ್ ವಶಕ್ಕೆ.

Advertisement

ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಆದ್ರೆ ಎಲ್ಲಿ ಕೇಂದ್ರ ಸರ್ಕಾರ ಭಾರತದ ವಸ್ತುಗಳು ಪಾಕಿಸ್ತಾನಕ್ಕೆ ಹೋಗದಂತೆ ನಿರ್ಬಂಧ ವಿಧಿಸಿತೋ ಪಾಕಿಸ್ತಾನದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೂ ಅದರ ಬಿಸಿ ತಾಗಿತು.

ಆದರೇ ಹೊನ್ನಾವರದಿಂದ ದೆಹಲಿಗೆ ಸರಬರಾಜಾಗುವ ವೀಳ್ಯದೆಲೆ ಅನ್ಯ ಮಾರ್ಗದಿಂದ ಪಾಕಿಸ್ತಾನಕ್ಕೆ ತೆರಳುತಿತ್ತು. ಪ್ರತಿ ದಿನ ಹೊನ್ನಾವರದಿಂದ 11 ಕ್ಕೂ ಹೆಚ್ಚು ಟನ್ ವೀಳ್ಯದೆಲೆ ದೆಹಲಿ ತಲುಪಿ ನಂತರ ಇತರೆ ಮಾರ್ಗ ದ ಮೂಲಕ ಪಾಕಿಸ್ತಾನ ತಲುಪುತ್ತಿತ್ತು. ಆದ್ರೆ ಇದೀಗ ಈ ವಿಷಯ ಮನಗಂಡ ಹೊನ್ನಾವರದ ರೈತರು ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸುವುದನ್ನೇ ನಿರ್ಬಂಧ ಮಾಡಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಹೋಗುತಿದ್ದ ವಿಳ್ಯದೆಲೆ ಇದೀಗ ದೇಶದ ಮಾರುಕಟ್ಟೆಯಲ್ಲಿ ಬಿಕರಿ ಆಗುತಿದ್ದು ದರ ಕುಸಿದರೂ ನಷ್ಟವನ್ನು ತಡೆದುಕೊಳ್ಳುತ್ತೇವೆ ಎಂಬ ಶಫತ ಮಾಡಿರುವ ರೈತರು ಶಾಶ್ವತವಾಗಿ ನಿರ್ಬಂಧ ವಿಧಿಸಿದ್ದಾರೆ.

ಇದನ್ನೂ ಓದಿ:-Kumta : ಬ್ಯಾಂಕ್ ನಲ್ಲಿ ಶಾರ್ಟ ಸರ್ಕ್ಯೂಟ್

ಹೊನ್ನಾವರದ ಶರಾವತಿ ನದಿ ತೀರ ಭಾಗದಲ್ಲಿ ಬೆಳೆಯುವ ವೀಳ್ಯದೆಲೆ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಹೆಸರು ಗಳಿಸಿದೆ. "ರಾಣಿ ವೀಳ್ಯದೆಲೆ" ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ವೀಳ್ಯದೆಲೆ ಹೆಚ್ಚು ಬಾಳಿಕೆ, ವಿಶೇಷ ಕಾರ ಮತ್ತು ಸ್ವಾದ ಹೊಂದಿದೆ.

ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿದೆ. ಮೊದಲು ಮುಂಬೈ ಮೂಲಕ ಪಾಕಿಸ್ತಾನಕ್ಕೆ ಈ ವೀಳ್ಯದೆಲೆ ರಫ್ತಾಗುತಿತ್ತು. ನಂತರ ದೆಹಲಿ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತಿತ್ತು. ಐತಿಹಾಸಿಕ ರಫ್ತು ವಹಿವಾಟು ಹೊಂದಿದ್ದ ಈ ವೀಳ್ಯದೆಲೆ ಪಾಕಿಸ್ತಾನಿಯರ ಅಚ್ಚುಮೆಚ್ಚು ಕೂಡ ಆಗಿತ್ತು. ಪ್ರತಿ ಎಕೆರೆಗೆ ಮೂರು ಲಕ್ಷ ಲಾಭವನ್ನು ಇಲ್ಲಿನ ರೈತರು ಗಳಿಸುತಿದ್ದರು. ಇದೀಗ ರೈತರ ಈ ನಿರ್ಧಾರದಿಂದ ಒಂದು ಎಲೆ ಮೂರು ರುಪಾಯಿಯಿಂದ ಮೂವತ್ತು ಪೈಸೆಗೆ ಇಳಿಮುಖವಾಗಿದೆ.

ಇದೀಗ ಕಲ್ಕತ್ತ,ಉತ್ತರ ಪ್ರದೇಶಕ್ಕೆ ಮಾತ್ರ ಈ ಎಲೆ ಸೀಮಿತವಾಗಿದೆ. ಹೀಗಿದ್ದರೂ ಹೊನ್ನಾವರದ ರೈತರು ಮಾತ್ರ ನಮಗೆ ನಷ್ಟವಾದರೂ ತೊಂದರೆ ಇಲ್ಲ, ಲಾಭಕೊಸ್ಕರ ವೀಳ್ಯದೆಲೆ ಕೊಟ್ಟು ಬಾಂಬ್ ಹಾಕಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು ಪಾಕಿಸ್ತಾನಕ್ಕೆ ರಪ್ತು ಮಾಡುವ ದಳ್ಳಾಳಿಗಳಿಗೆ ಶಾಶ್ವತ ನಿರ್ಬಂಧ ಹೇರುವ ಜೊತೆವೆ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಇದೀಗ ನಮ್ಮ ರಾಜ್ಯ ಸೇರಿದಂತೆ ಕೆಲವು ರಾಜ್ಯಕ್ಕೆ ಮಾತ್ರ ಈ ವೀಳ್ಯದೆಲೆ ಸರಬರಾಜು ಮಾಡುತಿದ್ದೇವೆ  ಎನ್ನುತ್ತಾರೆ ವೀಳ್ಯದೆಲೆ ಬೆಳೆಯುವ ಹೊನ್ನಾವರದ ರೈತ ಸತೀಶ್ ಭಟ್.

ಹೊನ್ನಾವರದ ರಾಣಿ ವೀಳ್ಯದೆಲೆ

 ಒಟ್ಟಿನಲ್ಲಿ ನಮ್ಮಿಂದ ಲಾಭ ಪಡೆದು ನಮ್ಮ ಮೇಲೆಯೇ ಶಲ್ ದಾಳಿ ಮಾಡುವ ಪಾಪಿ ಪಾಕಿಸ್ತಾನಕ್ಕೆ ಯೋಧರ ಜೊತೆ ರೈತರೂ ತಕ್ಕ ಉತ್ತರ ನೀಡುತಿದ್ದಾರೆ.

 

Advertisement
Tags :
Honnavarindia exportNewsPakisthanqureen betel leavesUttara kanndaರಾಣಿ ಎಲೆವೀಳ್ಯದೆಲೆ
Advertisement
Next Article
Advertisement