For the best experience, open
https://m.kannadavani.news
on your mobile browser.
Advertisement

Yallapur :ವಿದ್ಯಾರ್ಥಿ ಹತ್ಯೆ ಮಾಡಲು ಮಚ್ಚು ಬೀಸಿದ್ದ ರೌಡಿ ಶೀಟರ್ ಕಾಲಿಗೆ ಗುಂಡೇಟು! 

ಕಾರವಾರ :- 16 ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು ಹಾಕಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅಣ್ಣಗೇರಿ ಬಳಿ ಘಟನೆ ನಡೆದಿದ್ದು ಜೋಯಿಡಾ ತಾಲೂಕಿನ ರಾಮನಗರದ ರೌಡಿ ಶೀಟರ್ ಪ್ರವೀಣ್ ಸುದೀರ್ ಕಾಲಿಗೆ ಗುಂಡೇಟು ನೀಡಲಾಗಿದೆ.
10:08 PM Jul 14, 2025 IST | ಶುಭಸಾಗರ್
ಕಾರವಾರ :- 16 ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು ಹಾಕಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅಣ್ಣಗೇರಿ ಬಳಿ ಘಟನೆ ನಡೆದಿದ್ದು ಜೋಯಿಡಾ ತಾಲೂಕಿನ ರಾಮನಗರದ ರೌಡಿ ಶೀಟರ್ ಪ್ರವೀಣ್ ಸುದೀರ್ ಕಾಲಿಗೆ ಗುಂಡೇಟು ನೀಡಲಾಗಿದೆ.
yallapur  ವಿದ್ಯಾರ್ಥಿ ಹತ್ಯೆ ಮಾಡಲು ಮಚ್ಚು ಬೀಸಿದ್ದ ರೌಡಿ ಶೀಟರ್ ಕಾಲಿಗೆ ಗುಂಡೇಟು  

Yallapur :ವಿದ್ಯಾರ್ಥಿ ಹತ್ಯೆ ಮಾಡಲು ಮಚ್ಚು ಬೀಸಿದ್ದ ರೌಡಿ ಶೀಟರ್ ಕಾಲಿಗೆ ಗುಂಡೇಟು! 

Advertisement

ಕಾರವಾರ :- 16 ಪ್ರಕರಣದಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ (police) ಗುಂಡೇಟು ಹಾಕಿದ್ದಾರೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಅಣ್ಣಗೇರಿ ಬಳಿ ಘಟನೆ ನಡೆದಿದ್ದು ಜೋಯಿಡಾ ತಾಲೂಕಿನ ರಾಮನಗರದ ರೌಡಿ ಶೀಟರ್ ಪ್ರವೀಣ್ ಸುದೀರ್ ಕಾಲಿಗೆ ಗುಂಡೇಟು ನೀಡಲಾಗಿದೆ.

ಅಟ್ರಾಸಿಟಿ,ರಾಬ್ರಿ ,ಮಹಿಳೆಯರ ಮಕ್ಕಳ ದೌರ್ಜನ್ಯ, ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸೇರಿದಂತೆ 16 ಪ್ರಕರಣದ ಆರೋಪಿಯಾಗಿದ್ದ ಪ್ರವೀಣ್ ಸುದೀರ್ ಗುಂಡಾ ಆಕ್ಟ್ ನಡಿ ಸಹ ಆರೋಪಿಯಾಗಿದ್ದ.ಇದಲ್ಲದೇ

ಸಾಕ್ಷೀದಾರರನ್ನು ಹೆದರಿಸುತಿದ್ದ ಈತ ಪ್ರಕರಣವನ್ನು ಹಿಂಪಡೆಯುವಂತೆ ಮಾಡುತಿದ್ದ . ಈತನ ಮಗನು ಸಹ ಈತನ ಹಾದಿ ತುಳಿದಿದ್ದನು.ವಾರೆಂಟ್ ಜಾರಿ ಮಾಡಲು ಹೋದ ಪೊಲೀಸರಿಗೆ  ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದ ಪ್ರವೀಣ್ ಸುದೀರ್ ಮೂರು ತಿಂಗಳಿಂದ ತಲೆಮರಿಸಿಕೊಂಡಿದ್ದು ಯಲ್ಲಾಪುರ ಭಾಗದಲ್ಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ Psi ಮಹಾಂತೇಶ್ ನಾಯ್ಕ ,ಸಿಬ್ಬಂದಿಗಳಾದ ಜಾಫರ್  ಅಸ್ಲಂ ,ಮಲ್ಲಿಕಾರ್ಜುನ್ ಹೊಸಮನಿ ತಂಡ ಆತನ ಬಂಧನಕ್ಕೆ ತೆರಳಿದ್ದರು.

ಇದನ್ನೂ ಓದಿ :- Yallapur:ಪ್ರಪಾತದ ಬಳಿ ಬಸ್ ಪಲ್ಟಿ -ಪ್ರಾಣಾಪಾಯದಿಂದ ಬಚಾವ್ ಆದ 25 ಪ್ರಯಾಣಿಕರು 

ಪಿ.ಎಸ್.ಐ ಮಹಾಂತೇಶ್ ,ಪಿ.ಸಿ ಜಾಫರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಚಾಕು ಇರಿಯಲು ಪ್ರಯತ್ನ ಮಾಡಿದಾಗ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ Psi ಮಹಂತೇಶ್ ರಿಂದ ಆತನ  ಬಲಗಾಲಿಗೆ ಫೈರ್  ಮಾಡಿದ್ದಾರೆ.

ಹಲ್ಲೆಗೊಳಗಾದ ಪೊಲೀಸರು

ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸರು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಶಾಲೆ ವಿದ್ಯಾರ್ಥಿಗೆ ಮಚ್ಚಿನಿಂದ ಹತ್ಯೆ ಮಾಡಲು ಹೋಗಿದ್ದ ಆರೋಪಿ!

 ಶಾಲಾ ಮಕ್ಕಳ ನಡುವೆ ನಡೆದ ಗಲಾಟೆ ವಿಚಾರವಾಗಿ ಬಾಲಕನ ಮೇಲೆ ರೌಡಿ ಶೀಟರ್ ಪ್ರವೀಣ್ ಸುದೀರ್ ಕತ್ತಿ ಬೀಸಿ ಕೊಲ್ಲೋದಾಗಿ ಬೆದರಿಕೆ ಹಾಕಿದ್ದು.

 ಜೊಯಿಡಾ(joida) ತಾಲೂಕಿನ ರಾಮನಗರದಲ್ಲಿ ಕೆಲವು ದಿನದ ಹಿಂದೆ ಈ ಘಟನೆ ನಡೆದಿದೆ.ರಾಮನಗರ ರಾಮಲಿಂಗಗಲ್ಲಿ ನಿವಾಸಿ ರೌಡಿಶೀಟರ್  ಪ್ರವೀಣ್  ಸುಧೀರ್ ಎಂಬಾತನೇ ಶಾಲಾ ವಿದ್ಯಾರ್ಥಿಗೆ ಕತ್ತಿ ತೋರಿಸಿ ಜೀವ ಬೆದರಿಕೆ ಹಾಕಿದ ವ್ಯಕ್ಯಿಯಾಗಿದ್ದಾನೆ.ಗೋಪಾಲ ಗಣಪತಿ ಗಾವಡೆ ಪುತ್ರ ಶಾಲಾ ವಿದ್ಯಾರ್ಥಿ ಸಾಯೀಶ ಎಂಬಾತನೇ ರೌಡಿ ಶೀಟರ್ ನಿಂದ ಹಲ್ಲೆಗೊಳಗಾಗಿ ದಮ್ಕಿ ಹಾಕಿಸಿಕೊಂಡ ಶಾಲಾ ವಿದ್ಯಾರ್ಥಿಯಾಗಿದ್ದಾನೆ.

 ಶಾಲಾ ವಿದ್ಯಾರ್ಥಿ  ಸಾಯೀಶ ಹಾಗೂ ಆರೋಪಿ ಪ್ರಶಾಂತ್ ಸುಧೀರ್ ಪುತ್ರ ಸುಜಲ್ ಲೋಂಡಾ ಶಾಲೆಯ ಸಹಪಾಟಿಗಳಾಗಿದ್ದರು.ಕ್ಲಾಸ್‌ಮೇಟ್‌ಗಳ ಬ್ಯಾಗ್‌ ಒಳಗೆ ಗುಟುಕಾ, ಸಿಗರೇಟ್ ತುಂಡು ಹಾಕಿ, ಕೈಯಲ್ಲಿ ಹಿಡಿದುಕೊಳ್ಳಲು ಹೇಳಿ ಫೋಟೊ ತೆಗೆದುಕೊಳ್ತಿದ್ದ ಆರೋಪಿಯ ಪುತ್ರ ಸುಜಲ್ ,ತನ್ನದೇ ತರಗತಿಯ ಪ್ರತೋಜ್ ಎಂಬಾತನನ್ನು ಬ್ಲ್ಯಾಕ್‌ಮೇಲ್ ಮಾಡಿ 4,200ರೂ. ಪಡೆದಿದ್ದನು.ಪ್ರತೋಜ್ ಹಾಗೂ ಆತನ ತಂದೆ ಪ್ರಕಾಶ್ ಬಬಲೇಶ್ವರ್ ಶಾಲೆಗೆ ತೆರಳಿ ಮುಖ್ಯೋಪಾಧ್ಯಾಯರಿಗೆ ಈ ಕುರಿತು ದೂರು ನೀಡಿದ್ದರು.ಅಂದಿನಿಂದ ಮುಖ್ಯೋಪಾಧ್ಯಾಯರ ಮಾತಿಗೆ ಸ್ಪಂದಿಸದೇ ಆರೋಪಿ‌‌ ಪುತ್ರ ಸುಜಲ್ ಶಾಲೆ ಬಿಟ್ಟಿದ್ದನು. ಇನ್ನು ತಾನು ತೆಗೆದ ಫೋಟೊ ವೈರಲ್ ಮಾಡ್ತೇನೆಂದು ಪ್ರತೋಜ್‌ಗೆ ಕರೆ ಮಾಡಿ 60,000ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪಿಯ ಪುತ್ರ ಸುಜಲ್ ಆಗಾಗ ಬೆದರಿಕೆ ಹಾಕುತಿದ್ದನು.ಇದಾದ ಬಳಿಕ ಇನ್ನೊಬ್ಬರ ಹೆಸರಿನಲ್ಲಿದ್ದ ಫ್ರೀ ಫೈಯರ್ ಗೇಮ್ ಐಡಿ ಬದಲಾಯಿಸಿದ್ದಕ್ಕೆ ಆರೋಪಿ ಪುತ್ರ ಸುಜಲ್ ಹಾಗೂ ಸಾಯೀಶ್ ನಡುವೆ ಭಿನ್ನಭಿಪ್ರಾಯ ಕಾಣಿಸಿತ್ತು.

ಇದನ್ನು ಕೇಳಲು ಸುಜಲ್ ಮನೆಯ ಬಳಿ ಸಾಯೀಶ್ ಹಾಗೂ ಯುವರಾಜ ನಂಬಿಯಾರ್ ತೆರಳಿದ್ದರು.

ಈ ವೇಳೆ ಸ್ಥಳದಲ್ಲಿದ್ದ ಪುಡಿ ರೌಡಿ ಪ್ರಶಾಂತ್ ಸುಧೀರ್, ಸಾಯೀಶ್ ಹಾಗೂ ಪ್ರತೋಜ್ ಸೇರಿ ತನ್ನ ಪುತ್ರನ ವಿರುದ್ಧ ಶಾಲೆಯಲ್ಲಿ ದೂರು ನೀಡಿದ್ದೀರಿ,ನನ್ನ ಮಗನ ವಿರುದ್ಧ ಸುಳ್ಳು ಹೇಳ್ತೀರಾ ಎಂದು ಅವಾಚ್ಯವಾಗಿ ನಿಂದಿಸಿ ಬಾಲಕ ಸಾಯೀಶ್ ಮೇಲೆ ಕತ್ತಿ ಬೀಸಿ ಹಲ್ಲೆಗೆ ಮುಂದಾಗಿದ್ದನು.ಈ ವೇಳೆ ಬಾಲಕ ತಪ್ಪಿಸಿಕೊಂಡಿದ್ದುನು.

ತಮಗೆ ತೊಂದರೆ ನೀಡುತ್ತಿರುವ  ಬಗ್ಗೆ ಸಾಯೀಶ್, ಪ್ರತೋಜ್ ಹಾಗೂ ರುತ್ವಿಕ್ ಎಂಬ ವಿದ್ಯಾರ್ಥಿಗಳು  ರಾಮನಗರ ಠಾಣೆಗೆ ದೂರು ನೀಡಿದ್ದರು.ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೇ ಆರೋಪಿ ಪ್ರಶಾಂತ್ ಸುಧೀರ್ ಹಾಗೂ ಆತನ ಪುತ್ರ ಸುಜಲ್ ಪರಾರಿಯಾಗಿದ್ದು ಇದೀಗ ಆರೋಪಿಗಳನ್ನು ರಾಮನಗರ ಠಾಣೆ ಪೊಲೀಸರು ಕಾಲಿಗೆ ಗುಂಡು  ಹೊಡೆದು ಬಂಧಿಸಿದ್ದಾರೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ