Karwar : ಕೊನೆಗೂ ಎಚ್ಚೆತ್ತ ನಗರಸಭೆ, ಅರಣ್ಯ ಇಲಾಖೆ ಮರದ ಕೊಂಬೆ ಕಟಾವಿಗೆ ಅಸ್ತು-ಮೃತ ಕುಟುಂಬ ಕ್ಕೆ ಐದು ಲಕ್ಷ ಪರಿಹಾರ
Karwar : ಕೊನೆಗೂ ಎಚ್ಚೆತ್ತ ನಗರಸಭೆ, ಅರಣ್ಯ ಇಲಾಖೆ ಮರದ ಕೊಂಬೆ ಕಟಾವಿಗೆ ಅಸ್ತು-ಮೃತ ಕುಟುಂಬ ಕ್ಕೆ ಐದು ಲಕ್ಷ ಪರಿಹಾರ

ಕಾರವಾರ :- ಕಾರವಾರ (karwar) ನಗರದ ಪಿಕಳೆ ರಸ್ತೆ ಯಲ್ಲಿ ಭಾನುವಾರ ಕಾರಿನ ಮೇಲೆ ಮರ ಬಿದ್ದು ಮಹಿಳೆ ಮೃತಪಟ್ಟ ಪ್ರಕರಣ ಸಂಭಂದಿಸಿದಂತೆ ಮಹಿಳೆಯ ಕುಟುಂಬಕ್ಕೆ ಪ್ರಾಕೃತಿಕ ಪರಿಹಾರ ನಿಧಿಯಡಿ ರೂ.5 ಲಕ್ಷ ಪರಿಹಾರವನ್ನು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಸೋಮವಾರ ವಿತರಿಸಿದರು.
ಈ ಸಂದರ್ಭದಲ್ಲಿ ಕಾರವಾರ ತಹಶೀಲ್ದಾರ್ ನಿಶ್ಚಲ್ ನರೋನ್ಹಾ ಮತ್ತಿತರರು ಉಪಸ್ಥಿತರಿದ್ದರು.
ಭಾನುವಾರ ನಗರದ ಪಿಕಳೆ ರಸ್ತೆಯಲ್ಲಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಮಲ್ಲಾಪುರ ಗ್ರಾಮದ ಲಕ್ಷ್ಮಿ ನಾರಾಯಣ ಮಮ್ತೇಕರ್ ಎನ್ನುವ 55 ವರ್ಷ ಮಹಿಳೆ ಕಾರಿನೊಳಗೆ ಸಿಲುಕಿಕೊಂಡು ಮೃತಪಟ್ಟಿದ್ದರು.
ಇದನ್ನೂ ಓದಿ:-Karwar :ಕಾರಿನಮೇಲೆ ಬಿದ್ದ ಮರ ಮಲ್ಲಾಪುರದ ಮಹಿಳೆ ಸಾವು
ಕಾರವಾರದಲ್ಲಿ ನಿನ್ನೆ ಮಳೆಯ ಅಬ್ಬರಕ್ಕೆ ಮರ ಬಿದ್ದು ಮಹಿಳೆ ಸಾವುಕಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರಸಭೆ ಹಾಗೂ ಅರಣ್ಯ ಇಲಾಖೆ ಕೊನೆಗೂ ಎಚ್ಚೆತ್ತಿದ್ದು ಕಾರವಾರ ನಗರದಲ್ಲಿರುವ ಅಪಾಯಕಾರಿ 18 ಮರಗಳ ಕೊಂಬೆ ಕಟಾವಿಗೆ ನಿರ್ಧಾರ ಮಾಡಿದೆ.ಕಳೆದ ಎರಡು ತಿಂಗಳಿನಿಂದ ಕೊಂಬೆ ಕಟಾವು ಮಾಡದೆ ನಿರ್ಲಕ್ಷ್ಯ ವಹಿಸಿದ್ದ ನಗರಸಭೆ ಅನುದಾನದ ಕೊರತೆಯ ನೆಪವೊಡ್ಡಿತ್ತು. ಇದೀಗ ಒಂದು ವಾರದಲ್ಲಿ ನಗರದ ಅಪಾಯಕಾರಿ ಮರದ ಟೊಂಗೆ ಕಟಾವಿಗೆ ಮುಂದಾಗಿದೆ.
ಅಂಕೋಲಾ: ಕುಸಿದ ಶಾಲಾ ಆವರಣ ಗೋಡೆ ತೆರವಿಗೆ ನಿರ್ಲಕ್ಷ್ಯ
ಅಂಕೋಲಾ ತಾಲೂಕಿನ ವಂದಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಬಿದ್ದಿದ್ದರೂ, ನಾಲ್ಕು ದಿನಗಳಾದರೂ ಲೋಕೋಪಯೋಗಿ ಮತ್ತು ಶಿಕ್ಷಣ ಇಲಾಖೆಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿಯೇ ಗೋಡೆಯ ಅವಶೇಷಗಳು ಬಿದ್ದಿದ್ದು, ಅಪಾಯವನ್ನುಂಟು ಮಾಡುತ್ತಿವೆ. ಸಂಬಂಧಿತ ಇಲಾಖೆಗಳು ತಕ್ಷಣ ಎಚ್ಚೆತ್ತು, ಗೋಡೆ ತೆರವುಗೊಳಿಸಿ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.