For the best experience, open
https://m.kannadavani.news
on your mobile browser.
Advertisement

ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ- ರಾಘವೇಶ್ವರ ಶ್ರೀ

02:03 AM Jan 12, 2024 IST | ಶುಭಸಾಗರ್
ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ  ರಾಘವೇಶ್ವರ ಶ್ರೀ

ಕಾರವಾರ:- ರಾಮಮಂದಿರದ ಬಗ್ಗೆ ಸನ್ಯಾಸಿಗಳಲ್ಲೇ ಬಿನ್ನ ನಿಲುವುಗಳಿದ್ದು ಸಾಕಷ್ಟು ಗೊಂದಲಗಳು ಮೂಡುತ್ತಿದೆ.ಆದ್ರೆ ಶಂಕರಾಚಾರ್ಯ ಪೀಠದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳು ಅಯೋದ್ಯೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತಾವು ತೆರಳುವುದಾಗಿ ಹೇಳಿದರು. ಗುರುವಾರ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಅವರು , ಅಯೋಧ್ಯೆ ಭಾರತದ ಹೃದಯ ಸ್ಥಾನದಲ್ಲಿದೆ, ರಾಮ ಮಂದಿರ ಭಾರತದ ಹೃದಯ, ರಾಮ ಭಾರತದ ಆತ್ಮ.

Advertisement

ಮನುಷ್ಯನ ಹೃದಯ ಸರಿಯಿಲ್ಲದಿದ್ರೆ, ಆಘಾತವಾಗಿದ್ರೆ ಏನಾಗುತ್ತೋ ಅದೇ ಸ್ಥಿತಿ ಈ ದೇಶಕ್ಕಾಗಿತ್ತು.ಕಳೆದ 500 ವರ್ಷಗಳ ಕಾಲ ಭಾರತಕ್ಕೆ ಹೃದಯಾಘಾತವಾಗಿತ್ತು, ಹೃದಯ ಹೀನತೆ, ಹೃದಯ ಶೂನ್ಯತೆಯಾಗಿತ್ತು.ಆ ಹೃದಯವನ್ನು ಮತ್ತೆ ಪ್ರತಿಷ್ಠಾಪನೆ ಮಾಡುವ ಕಾರ್ಯವಾಗುತ್ತಿದೆ.

ರಾಮ ಮಂದಿರದ ಪುನರ್ ಪ್ರತಿಷ್ಠಾಪನೆಯ ಮಹತ್ವ ಶರೀರದಲ್ಲಿ ಹೃದಯವನ್ನು ಮತ್ತೆ ಅಳವಡಿಸುವಷ್ಟೇ ಮಹತ್ವದ್ದಾಗಿದೆ.

ನಾನು ರಾಮ ಮಂದಿರದ ಉದ್ಘಾಟನೆಗೆ ತೆರಳುತ್ತಿದ್ದೇನೆ, ಜ.22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆಗೆ ರಸ್ತೆಯ ಮೂಲಕ ಪ್ರಯಾಣ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತೇನೆ ಎಂದರು.

ಇದನ್ನೂ ಓದಿ:-Uttrakannada:ಕಟ್ಟಡವೇ ಇಲ್ಲದೇ ಶಡ್ ನಲ್ಲಿ ಪುಟ್ಟ ಮಕ್ಕಳಿಗೆ ಪಾಠ! ಮಕ್ಕಳ ಗೋಳು ಕೇಳುವವರು ಯಾರು?

ಇನ್ನು ಶಂಕರಾಚಾರ್ಯರು ಪೀಠಾಧೀಶರ ಬಗ್ಗೆ ಹಬ್ಬಿದ್ದ ವದಂತಿಯನ್ನು ಅಲ್ಲಗಳೆದ ಅವರು ರಾಮ ಮಂದಿರವನ್ನು ರಾಜಕೀಯ ವಿಚಾರದ ರೂಪದಲ್ಲಿ ನಾನು ಸ್ವೀಕಾರ ಮಾಡುವುದಿಲ್ಲ,ರಾಮ ಮಂದಿರದ ವಿಷಯ ಒಂದು ಚಳುವಳಿಯಾಗಿ ಯಾವಾಗ ರೂಪುಗೊಂಡಿತೋ ಅಲ್ಲಿಂದ ದೇಶದಲ್ಲಿ ಧರ್ಮ ಜಾಗೃತಿಯಾಗಿದೆ.

ಜನರ ಧಾರ್ಮಿಕ ಭಾವನೆಗಳು ಕೂಡಾ ಸಾಕಷ್ಟು ಬದಲಾಗಿವೆ.ರಾಜಕೀಯ ಏನಿದ್ರೂ ಬರೇ ತಾತ್ಕಾಲಿಕವಾಗಿದ್ದು, 5 ವರ್ಷದ, 3 ವರ್ಷದ ಒಂದು ಎಲೆಕ್ಷನ್‌ನ ವಿಷಯವಾಗಿರುತ್ತಷ್ಟೇ.ಆದರೆ, ಸಮಾಜದ ಮೇಲಾಗುವ ಬೇರೆ ಪರಿಣಾಮ ಶಾಶ್ವತವಾಗಿದ್ದು, ಎಲ್ಲೋ ಹೊರಟಿದ್ದ ಸಮಾಜ ರಾಮಮಂದಿರದ ಚಳುವಳಿಯ ಪರಿಣಾಮ ಹಿಂತಿರುಗಿ ಬರುವಂತಾಯ್ತು
ರಾಜಕೀಯ ಸಣ್ಣ ಆ್ಯಂಗಲ್, ಸಮಾಜದ ಮೇಲಾಗುವ ಸಾತ್ವಿಕ ಪರಿಣಾಮ ದೊಡ್ಡ ಆ್ಯಂಗಲ್.

ಶ್ರೀರಾಮ ಚಂದ್ರಾಪುರ ಮಠದ ಸಂಪ್ರದಾಯವನ್ನು ಭಾಗವತ ಸಂಪ್ರದಾಯ ಅಂತಾರೆ.ಇಲ್ಲಿ ವೈಷ್ಣವ ಉಪಾಸನೆಯಿದ್ದು, ಏಕಾದಶಿ ವ್ರತದ ಆಚರಣೆ ಮಾಡಲಾಗುತ್ತದೆ. ರಾಮ ಮಠದ ಪ್ರಧಾನ ಆರಾಧ್ಯ ದೇವತೆ,ಶ್ರೀ ಮಠವನ್ನು ಶಿವನ ಅವತಾರವಾದ ಆದಿ ಶಂಕರಾಚಾರ್ಯರು ಸ್ಥಾಪನೆ ಮಾಡಿದ್ದು, ಆ ದೃಷ್ಠಿಯಿಂದ ಶಿವನ ಸಂಬಂಧ ಬರುತ್ತದೆ.

ಇದನ್ನೂ ಓದಿ:-wild animal attack:ಕುಮಟಾ ಹೊನ್ನಾವರ ಭಾಗದಲ್ಲಿ ಚಿರತೆ ಕಾಟ :ಹಸು ಬಲಿಪಡೆದ ಚಿರತೆ

ಉಪಾಸನೆಯಲ್ಲಿ ಸೀತಾ ರಾಮಚಂದ್ರ, ಚಂದ್ರ ಮೌಳೇಶ್ವರ, ರಾಜರಾಜೇಶ್ವರಿ ಮೂರು ಮುಖ್ಯ ದೇವರಾಗಿದ್ದಾರೆ.

ಶಂಕರಾಚಾರ್ಯರು ನಮಗೆ ಸೂರ್ಯ,ಗಣಪತಿ, ಅಂಬಿಕಾ, ಶಿವ, ವಿಷ್ಣು ಎಂಬ ಪಂಚ ಮೂರ್ತಿಗಳ ಉಪಾಸನೆ ನೀಡಿದರು.ಇದೊಂದು ರೀತಿಯಲ್ಲಿ ಸಮನ್ವಯತೆ ಹೊಂದಿರುವ ಮಠವೇ ಹೊರತು, ಒಂದನ್ನೇ ಮಾಡಿ, ಉಳಿದದ್ದಕ್ಕೆ ಅವಕಾಶವಿಲ್ಲ ಅನ್ನೋವಂತದ್ದಲ್ಲ.

ಮೂಲದಲ್ಲಿ ಕಾಡಿನ ಬೇಡ ಅನಿಸಿಕೊಂಡಾತ ವಾಲ್ಮೀಕಿ, ಆದಿ ಕಾವ್ಯ, ಆದರ್ಶ ಜೀವನದ ಪಾಠವನ್ನು ಜಗತ್ತಿಗೆ ನೀಡಿದ ಸರ್ವಶ್ರೇಷ್ಠ ಮಹರ್ಷಿಯಾಗಿ ಬದಲಾದ,ರಾಮ ನಾಮವೇ ರತ್ನಾಕರನನ್ನು ವಾಲ್ಮೀಕಿಯನ್ನಾಗಿ ಮಾಡಿದ ಒಂದು ಉದಾಹರಣೆಯೇ ಸಾಕು ನಮ್ಮ ಮನಸ್ಸು ಬದಲಾಯಿಸಲು, ಅಶುಭದಿಂದ ಶುಭಕ್ಕೆ ಪರಿವರ್ತಿಸಲು.

ಈ ದೇಶಕ್ಕೆ ಪೊಲೀಸ್ ಠಾಣೆಗಳು, ಕೋರ್ಟ್‌ಗಳು, ಜೈಲುಗಳು ಬೇಡ, ಅವೆಲ್ಲದರ ಅಗತ್ಯ ಕಡಿಮೆ ಮಾಡಿ ಸಮಾಜದ ಮೇಲೆ ಸಾತ್ವಿಕ ಪರಿಣಾಮ ಬೀರಲು ಸಮರ್ಥವಾದ ಮಂತ್ರ ರಾಮನಾಮ.ಹೇಗೆ ಬದುಕಬೇಕು ಅನ್ನೋದನ್ನು ರಾಮ ನಮಗೆ ಬದುಕಿ ತೋರಿಸಿದ್ದಾತ, ಉಳಿದ ಅವತಾರಗಳ ನುಡಿ ತೆಗೆದುಕೊಂಡರೆ, ರಾಮ ಸ್ವತಃ ಉದಾಹರಣೆ.

ಇದನ್ನೂ ಓದಿ:-ಜೋಯಿಡಾ|ಕಾಡಿನಲ್ಲಿ ಸಿಕ್ತು ಪಿಸ್ತೂಲು ಆ ಎರಡು ಚೀಲಗಳು?

ರಾಮ ಉಪದೇಶ ಮಾಡಿದ್ದು ಕಡಿಮೆ, ನಡೆದು ತೋರಿಸಿದ್ದು ಬಹಳಷ್ಟಾಗಿದ್ದರಿಂದ ರಾಮ ಇವತ್ತಿಗೂ ಆದರ್ಶ ನಾಗಿದ್ದಾನೆ.

ರಾಮನಿಗಿಂತ ಆದರ್ಶವಾಗಿ ಯಾರೂ ಇರಲು ಸಾಧ್ಯವಿಲ್ಲ, ರಾಮನ ಬದುಕು ಗಮನಿಸಿದ್ರೆ ಮದ್ಯಪಾನದ ಬಗ್ಗೆ ಒಂದು ಶಬ್ದವನ್ನೂ ನಾವು ಕಾಣುವುದಿಲ್ಲ.

ಸುಗ್ರೀವ ಮದ್ಯ, ಮಾಂಸ,‌ ಮಾನಿನಿ ವಿಚಾರದಲ್ಲಿ ಮುಳುಗಿದ್ದಾಗ ಲಕ್ಷ್ಮಣನ ಮೂಲಕ ರಾಮ ಕಠೋರವಾಗಿ ಎಚ್ಚರಿಸುತ್ತಾನೆ, ಅಲ್ಲದೇ, ರಾಮ ಉಪದೇಶ ಕೂಡಾ ಮಾಡಿದ್ದನು.ರಾಮ ಅನ್ನೋದು ಕಲೆಯಿಲ್ಲದ ಸ್ವಚ್ಛ, ಬಿಳಿಯ, ಆದರ್ಶ ವ್ಯಕ್ತಿತ್ವ.

ರಾಮ ರಾಜ್ಯದಲ್ಲಿ ಎಲ್ಲರಲ್ಲೂ ರಾಮನನ್ನು ಕಾಣುತ್ತಿದ್ದದ್ದರಿಂದ ಒಬ್ಬರನ್ನೊಬ್ಬರು ಹಿಂಸಿಸುತ್ತಿರಲಿಲ್ಲ ಎಂದು‌ ರಾಮಾಯಣದಲ್ಲಿ ಕಾಣಬಹುದು.

ಒಬ್ಬರನ್ನೊಬ್ಬರು ಹಿಂಸೆ ಮಾಡದಿದ್ರೆ ಪ್ರಸ್ತುತ ಕಾಲದಲ್ಲಿ ಕಾನೂನು, ಕೋರ್ಟ್ ಬೇಕಾಗಿಲ್ಲ, ಜನರಿಗೆ ತೊಂದರೆಯಾಗದ ವಿಚಾರವೇ ರಾಮ ರಾಜ್ಯದ ವಿಶೇಷತೆ ಎಂದರು.

ಇನ್ನು ಕವಿ ಗಜಾನನ ಶರ್ಮ ರಚಿತ "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು" ನನಗೆ ತುಂಬಾ ಸಂತೋಷ ನೀಡಿದೆ.ಅಪರೂಪದ ಬೃಹತ್‌ ಹಿಮಾಲಯನ್ ಗ್ರಿಫನ್‌ ಓಲ್ಚರ್‌ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ|ವಿಶೇಷ ಏನು ಗೊತ್ತಾ?

ನಮ್ಮ ರಾಮಕಥೆ ಕವಿ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ, ಅವರಿಂದ ಈ ಅದ್ಭುತ ಪದ್ಯ ಸೃಷ್ಠಿಯಾಗಿದೆ.

ಇದು ಮಂತ್ರದ ರೀತಿಯಲ್ಲಿದ್ದು, ಎಂತಹ ಕಲ್ಲು ಹೃದಯದವನಲ್ಲೂ ಭಾವನೆಗಳನ್ನು ಜಾಗೃತ ಮಾಡುವಂತಿದೆ.

ಇದು ರಾಮ ರಾಜ್ಯದ ರಾಷ್ಟ್ರಗಾನವಾಗಬೇಕು, ರಾಷ್ಟ್ರಗಾನವಾಗುವ ಎಲ್ಲಾ ಅರ್ಹತೆ ಈ ಪದ್ಯಕ್ಕಿದೆ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು
ಕೋಟಿ ಕೋಟಿ ಹೃದಯಗಳನ್ನು ಪರಿವರ್ತನೆ ಮಾಡಿದೆ.

ಅವರು ರಚಿಸಿದ ಪದ್ಯ ಕೇಳಿ ಮಾತು ಮೂಕವಾಗುತ್ತದೆ, ಅವರೊಳಗಿನ ದಿವ್ಯಸ್ಪೂರ್ತಿ ಇದನ್ನು ಆಡಿರುವಂತದ್ದು.

ರಾಮ ಎಲ್ಲರಿಗೂ ಬೇಕು, ಎಲ್ಲರಿಗೂ ರಾಮ ಸಲ್ಲುತ್ತಾನೆ, ರಾಮನ ಹೆಸರಿಟ್ಟುಕೊಂಡವರು ಎಲ್ಲಾ ಜಾತಿ ಜನಾಂಗದಲ್ಲಿದ್ದಾರೆ, ಎಲ್ಲಾ ರಾಜಕೀಯ ಪಕ್ಷದಲ್ಲೂ ಇದ್ದಾರೆ

ಇಡೀ ಜಗತ್ತಿನ ಜನರಿಗೆ ರಾಮ ಬೇಕು. ರಾಕ್ಷಸ ಜಾತಿಯ ವಿಭೀಷಣನನ್ನು‌ ಪರಕೀಯ ಮಾಡಿಲ್ಲ, ಕಪಿಗಳಾದ ಸುಗ್ರೀವ, ಹನುಮಂತನನ್ನು ಹೊರಗಿಟ್ಟಿಲ್ಲ,ಜಟಾಯು ಒಬ್ಬ ಪಕ್ಷಿ, ಗುಹ ಒಬ್ಬ ಬೇಡ, ವಸಿಷ್ಠರು ವಿಪ್ರೋತ್ತಮರು, ಇವರೆಲ್ಲರಿಗೂ ರಾಮ ಬೇಕಾಗಿದ್ದ.

ಇದನ್ನೂ ಓದಿ:-ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ರಾಮಾಯಣ ಎಲ್ಲರನ್ನೂ ಒಳಗೊಂಡಿದೆ, ಎಲ್ಲವನ್ನೂ ಒಳಗೊಂಡಿದೆ, ರಾವಣನೇ ರಾಮನನ್ನು ಒಪ್ಪುವಂತಹ ಹಂತ ಕೂಡಾ ರಾಮಾಯಣದಲ್ಲಿದೆ. ಈಗಲೂ ನಮ್ಮ ದೇಶಕ್ಕೆ ಇದು ಬೇಕಾಗಿದ್ದು, ಆದರೆ, ನಾವು ಬದಲಾವಣೆ ಕಾಣುತ್ತೇವೆ,ಕೆಲವು ವರ್ಷಗಳ ಹಿಂದೆ ರಾಮನನ್ನು ಒಪ್ಪುವವರು ಹಾಗೂ ಒಪ್ಪದಿರುವವರು ಎಂಬ ವಿಭಾಗಗಳು ಕಾಣುತ್ತಿತ್ತಾದ್ರೂ ಇಂದು ಅಂತಹ ಸ್ಥಿತಿಯಿಲ್ಲ.

ಕಾರ್ಯಕ್ರಮದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ರೂ, ರಾಮ ಮಂದಿರ ಅಂತಾ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಅಭಿಪ್ರಾಯಕ್ಕೆ ಬಂದ ಸಂದರ್ಭ ಕಾಣಬಹುದು.
ಸಿಎಂ ಸಿದ್ಧರಾಮಯ್ಯನವರು ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನ ಎಲ್ಲಾ ದೇವಸ್ಥಾನಗಳಲ್ಲೂ ಪೂಜೆಯಾಗಬೇಕೆಂದು ಆದೇಶ ಮಾಡಿದ್ದು ಕಾಣಬಹುದು.ರಾಮನ ಪ್ರಾಣಪ್ರತಿಷ್ಠೆಯಾದ ಮೇಲೆ ಎಲ್ಲರೂ ರಾಮನ ದರ್ಶನಕ್ಕೆ ಬಂದೇ ಬರ್ತಾರೆ
ರಾಮ ಮಂದಿರ ನಿರ್ಮಾಣ ದೇಶಕ್ಕೆ ಮಹಾ ಶುಭಲಕ್ಷಣವಾಗಿದ್ದು, ದೇಶದ ಹೃದಯ ಸ್ಥಾನದಲ್ಲಿ ರಾಮಮಂದಿರವಿರದ 500 ವರ್ಷಗಳ ಕೊರತೆ ನೀಗುತ್ತಿದೆ.ಈ ಕೊರತೆ ನೀಗಿದ ಮೇಲೆ ಇತರೆಲ್ಲವೂ ಎಲ್ಲವೂ ಅದರ ಸ್ಥಾನಕ್ಕೆ ಮರುಕಳಿಸುತ್ತದೆ.

ರಾಮ ತನ್ನ ಜಾಗಕ್ಕೆ ಬರುತ್ತಿದ್ದಂತೇ ಎಲ್ಲವೂ ಅದರ ಸ್ಥಾನಕ್ಕೆ ಬಂದು ಎಲ್ಲವೂ ಸರಿಹೋಗುವ ಸಂದರ್ಭ ಬರುತ್ತದೆ ಎಂದರು.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ