For the best experience, open
https://m.kannadavani.news
on your mobile browser.
Advertisement

ಅಕ್ರಮ ಕೂಟಕ್ಕೆ ಜನಪ್ರತಿನಿಧಿಗಳೇ ಬಾಸ್ ?ಸಸ್ಪೆಂಡ್ ಆದ PSI ಹೊನ್ನಾವರ ಠಾಣೆಗೆ ಶಿಫ್ಟ್ !

ಕಾರವಾರ ':- ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಸ್.ಪಿ ಎಂ ನಾರಾಯಣ್ ರವರ ತಂಡ
04:53 PM Sep 13, 2024 IST | ಶುಭಸಾಗರ್
ಅಕ್ರಮ ಕೂಟಕ್ಕೆ ಜನಪ್ರತಿನಿಧಿಗಳೇ ಬಾಸ್  ಸಸ್ಪೆಂಡ್ ಆದ psi ಹೊನ್ನಾವರ ಠಾಣೆಗೆ ಶಿಫ್ಟ್

ಕಾರವಾರ ':- ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಸ್.ಪಿ ಎಂ ನಾರಾಯಣ್ ರವರ ತಂಡ ಅವಿರತ ಶ್ರಮ ಹಾಕುತಿದ್ದು ಒಂದಿಷ್ಟು ಸಫಲತೆ ಪಡೆಯುತ್ತಿರುವಾಗಲೇ ಅಕ್ರಮ ಕೂಟಗಳು ಪೊಲೀಸ್ ಇಲಾಖೆ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ಶಕ್ತಿ ಕಳೆದುಕೊಳ್ಳುವಂತೆ ಮಾಡಿದೆ.

Advertisement

ಇತ್ತೀಚೆಗಷ್ಟೇ ಎಸ್ .ಪಿ ರವರ ಸೂಚನೆಯಂತೆ ವಿಶೇಷ ತಂಡ ರಚಿಸಿ ಅಕ್ರಮ ವ್ಯವಹಾರಕ್ಕೆ ಕಡಿವಾಣ ಹಾಕಿತ್ತು.

ಇದಲ್ಲದೇ ಮುರುಡೇಶ್ವರ ದಲ್ಲಿ ಅಕ್ರಮ ಚಟುವಟಿಗೆ ಕಡಿವಾಣ ಹಾಕಲು ವಿಫಲವಾಗಿದ್ದ PSI ಮಂಜುನಾಥ್ ರವರನ್ನು ಅಮಾನತ್ತು ಮಾಡಲಾಗಿತ್ತು.

ಇದನ್ನೂ ಓದಿ:-Ankola police ಕಾರ್ಯಾಚರಣೆ:ಬೇಲಿಕೇರಿಯಲ್ಲಿ ಮಹಿಳೆಗೆ ಬಲವಂತವಾಗಿ ವೇಷ್ಯಾವಾಟಿಕೆ ದಂಧೆಗೆ ತೊಡಗಿಸಿದವರ ಬಂಧನ

ಮಂಜುನಾಥ್ ಬಗ್ಗೆ ಈ ಹಿಂದೆ ಹಲವು ಆರೋಪಗಳಿದ್ದು , ಅಕ್ರಮ ಕೂಟಗಳಿಗೆ ಸಹಕರಿಸುತ್ತಾರೆ ಎಂಬ ಆರೋಪ ದೊಡ್ಡ ಮಟ್ಟಿನದ್ದಾಗಿತ್ತು. ಇದಲ್ಲದೇ ಜಿಲ್ಲೆಯ ದೊಡ್ಡ ಜನ ಪ್ರತಿ ನಿಧಿಯೊಬ್ಬರ ಖಾಸ ಚಡ್ಡಿಯಾಗಿದ್ದು , ಅವರು ಕಾಲಿನಲ್ಲಿ ತೋರಿಸಿದ್ದನ್ನ ತಲೆ ಮೇಲೆ ಹೊತ್ತು ಮಾಡುವ ಜೊತೆಗೆ ಅವರ,ಹಿಂಬಾಲಕರ ಅಕ್ರಮ ಚಟುವಟಿಕೆಗೆ ಬೆಂಗಾವಲಾಗಿದ್ದರು ಎಂಬ ದೂರು ಸಹ ಕೇಳಿಬಂದಿತ್ತು.

ಕೆಲವು ಮಾಹಿತಿ ಆಧಾರದ ಮೇಲೆ ಎಸ್.ಪಿ ನಾರಾಯಣ್ ರವರು ಮಂಜುನಾಥ್ ರವರನ್ನ ಅಮಾನತ್ತು ಮಾಡಲು ಐಜಿ ರವರೆಗೆ ಪತ್ರ ಬರೆದು ನಂತರ ಮಂಜುನಾಥ್ ಅಮಾನತ್ತಾಗಿದ್ದರು.

ಇದಕ್ಕೆ ಕೋಪ ಗೊಂಡಿದ್ದ ಜನಪ್ರತಿನಿಧಿಯೊಬ್ಬರು ಎಸ್‌.ಪಿ ವಿರುದ್ಧ ಗರಂ ಆಗಿದ್ದರು. ತಮ್ಮ ಪ್ರಭಾವ ಬಳಸಿ ಇದೀಗ ಅಮಾನತ್ತಾದ PSI ಮಂಜುನಾಥ್ ಗೆ ಹೊನ್ನಾವರ ಠಾಣೆಗೆ ನಿಯುಕ್ತಿ ಮಾಡಿಸಲು ಸಫಲರಾಗಿದ್ದಾರೆ‌.

ಪ್ರಸ್ತುತ ಹೊನ್ನಾವರ ಠಾಣೆ PSI ಆಗಿರುವ ಮಹಾಂತೇಶ್ ರವರನ್ನ ಮಂಗಳೂರು IG ಕಚೇರಿಗೆ ವರ್ಗಾವಣೆ ಮಾಡಿಸಲಾಗಿದೆ‌.

ಇದನ್ನೂ ಓದಿ:-ಖಡಕ್ ಖಡಕ್ ಎಸ್. ಪಿ ನಾರಾಯಣ್ | ಅಕ್ರಮದ ಹಿಂದೆ ಬಿದ್ದವರಿಗೆ ನಾರಾಯಣನ ಭಯ!

ಕಾಸು ಕೊಟ್ರೆ ಠಾಣೆ ಹುದ್ದೆ!

ಸದ್ಯ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳನ್ನ ಬದಿಗೊತ್ತಲಾಗಿದೆ. ತಮಗೆ ಬೇಕಾದ ಹಾಗೂ ತಮ್ಮ ಕೆಲಸ ಮಾಡುವ ಅಧಿಕಾರಿಗಳಿಗೆ ಮಾತ್ರ ಮಣೆ ಹಾಕಲಾಗುತಿದ್ದು ಹಣ ನೀಡಿ ಹುದ್ದೆ ಪಡೆಯುವ ಸ್ಥಿತಿ ಇದೆ ಎಂಬುದು ಇಲಾಖೆ ಒಳಗಿನ ಮಾತು.

ಜನರಿಗೆ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆಗೇ ಈ ಗತಿ ಬಂದಮೇಲೆ ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಏಳುವಂತಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ