ಪ್ರಮುಖ ಸುದ್ದಿಮುಖಪುಟLocal storyರಾಜ್ಯರಾಷ್ಟ್ರೀಯಅಂತರರಾಷ್ಟ್ರೀಯCrime newsಮನೋರಂಜನೆ
Advertisement

Honnavara :ರಸ್ತೆಯಲ್ಲೇ ಕೈಕೊಟ್ಟ ಹೆಡ್ ಲೈಟ್ ಹತ್ತು ಕಿಲೋಮೀಟರ್ ಕತ್ತಲಲ್ಲೇ ವಾಯುವ್ಯ ಸಾರಿಗೆ ಬಸ್ ಓಡಿಸಿದ ಚಾಲಕ!

Honnavara 08 November 2024 :- ಶಕ್ತಿ ಯೋಜನೆ (shakthi yojane) ಮೂಲಕ ಉಚಿತ ಪ್ರಯಾಣ ನೀಡುವ ಸರ್ಕಾರಿ ಸಾರಿಗೆ ಬಸ್ ಗಳನ್ನು ಇಲಾಖೆ ರಿಪೇರಿ ಮಾಡದೇ ನಿರ್ಲಕ್ಷ ವಹಿಸುತಿದ್ದು ಅವಧಿ ಮೀರಿದ ಹಾಗೂ ಸೂಕ್ತ ರಿಪೇರಿ ಮಾಡದೇ ಪ್ರಯಾಣಿಕರ ಜೀವದ ಜೊತೆ ವಾಯುವ್ಯ ಸಾರಿಗೆ ಇಲಾಖೆ ಚಲ್ಲಾಟ ಆಡುತ್ತಿದೆ.
09:09 PM Nov 08, 2024 IST | ಶುಭಸಾಗರ್

Honnavara 08 November 2024 :- ಶಕ್ತಿ ಯೋಜನೆ (shakthi yojane) ಮೂಲಕ ಉಚಿತ ಪ್ರಯಾಣ ನೀಡುವ ಸರ್ಕಾರಿ ಸಾರಿಗೆ ಬಸ್ ಗಳನ್ನು ಇಲಾಖೆ ರಿಪೇರಿ ಮಾಡದೇ ನಿರ್ಲಕ್ಷ ವಹಿಸುತಿದ್ದು ಅವಧಿ ಮೀರಿದ ಹಾಗೂ ಸೂಕ್ತ ರಿಪೇರಿ ಮಾಡದೇ ಪ್ರಯಾಣಿಕರ ಜೀವದ ಜೊತೆ ವಾಯುವ್ಯ ಸಾರಿಗೆ ಇಲಾಖೆ ಚಲ್ಲಾಟ ಆಡುತ್ತಿದೆ.

Advertisement

ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರ ಕನ್ನಡ (uttra kannda) ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಡಾಣಿಯಲ್ಲಿ ರಾತ್ರಿ ಪ್ರಯಾಣಿಕರನ್ನು ಕರೆದೊಯ್ಯುತಿದ್ದ ಬಸ್ ನಲ್ಲಿ ಏಕಾ ಏಕಿ ಹೆಡ್ ಲೈಟ್ ಬಂದ್ ಆಗಿದೆ.

ವೃದ್ಧರು, ಮಹಿಳೆಯರು ,ವಿದ್ಯಾರ್ಥಿಗಳು ಪ್ರಯಾಣಿಸುತಿದ್ದರಿಂದ ಚಾಲಕ ಕತ್ತಲಲ್ಲೇ ಹತ್ತು ಕಿಲೋಮೀಟರ್ ಬಸ್ ಚಲಾಯಿಸಿದ್ದಾನೆ .

ಈ ವೇಳೆ ಹೆಡ್ ಲೈಟ್ ಇಲ್ಲದೇ ಬಸ್ ಸಂಚರಿಸುತಿದ್ದುದನ್ನು ಕಂಡು ಸ್ಥಳೀಯರು ಚಾಲಕನನ್ನು ತರಾಟೆ ತೆಗೆದುಕೊಂಡಿದ್ದಾರೆ‌ .

Advertisement

ಇದನ್ನೂ ಓದಿ:-Honnavara: ಮಂಕಾಳು ವೈದ್ಯರ ಉಸ್ತುವಾರಿ ಕ್ಷೇತ್ರದ ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ತೆರಳಲು ಅಧಿಕಾರಿಗಳಿಗೆ ಜನರಿಗೆ ಭಯ!

ಈ ವೇಳೆ ತಮ್ಮ ಇಲಾಖೆಯ ಸ್ಥಿತಿಗೆ ಅಸಾಯಕತೆಯನ್ನು ಚಾಲಕ ತೋರಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲೆಯಲ್ಲಿ ಸ್ಥಳೀಯವಾಗಿ ಸಂಚರಿಸುವ 80 ಕ್ಕೂ ಹೆಚ್ಚು ಬಸ್ ಗಳು 10 ವರ್ಷಗಳ ಅವಧಿ ಮುಗಿದಿದೆ. ಬಹುತೇಕ ಜೀರ್ಣಾವಸ್ತೆ ತಲುಪಿರುವ ಬಸ್ ಗಳು ಸಂಚರಿಸುತಿದ್ದು ಇಲಾಖೆ ಮಾತ್ರ ನಿರ್ಲಕ್ಷ ವಹಿಸಿದ್ದು
ಒಂದುಬಾರಿ ಟೈರ್ ಪಂಚರ್ ಆದ್ರೆ ಕೆಲವೊಮ್ಮೆ ಬ್ರೇಕ್ ಫೇಲ್ ಮೊತ್ತೊಮ್ಮೆ ಹೆಡ್ ಲೈಟ್ ಬಂದ್ ಹೀಗೆ ಒಂದಲ್ಲಾ ಒಂದು ಸಮಸ್ಯೆ ಜೊತೆ ಪ್ರಯಾಣಿಕರು ಹಾಗೂ ಚಾಲಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

Feed: invalid feed URL

Advertisement
Tags :
bus plablamHonnavaraKannada newsKsrtc Bus
Advertisement
Next Article
Advertisement