DYSP ಕಚೇರಿಯಲ್ಲೇ ಮಹಿಳೆ ಜತೆ ರಾಸಲೀಲೆ ಡಿವೈಎಸ್‌ಪಿ ಅಮಾನತು ,ಬಂಧನ
ತುಮಕೂರು 03 ಜನವರಿ:- ಜಮೀನು ವ್ಯಾಜ್ಯದ ಸಂಬಂಧ ದೂರು ನೀಡಲು ಬಂದ ಮಹಿಳೆ ಜೊತೆ ರಾಸಲೀಲೆ ನಡೆಸಿದ ತುಮಕೂರು(Tumkur) ಜಿಲ್ಲೆಯ ಮಧುಗಿರಿ ಉಪವಿಭಾಗದ ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಜಮೀನು ವಿಚಾರಕ್ಕೆ ದೂರು ಕೊಡಲು ಬಂದ ಮಹಿಳೆಯೊಂದಿಗೆ ತಮ್ಮ ಕಚೇರಿಯ ಶೌಚಾಲಯಕ್ಕೆ ಕರೆದೊಯ್ದು ರಾಸಲೀಲೆ ನಡೆಸಿದ್ದರು.
ಈ ರಾಸಲೀಲೆ ವಿಡಿಯೋ ವನ್ನು ವ್ಯಕ್ತಿಯೊಬ್ಬರು ಶೌಚಾಲಯದ ಕಿಟಕಿಯಿಂದ ರೆಕಾರ್ಡ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನು ಗಮನಿಸಿದ ಡಿಜೆ ರವರು ಡಿವೈಎಸ್ ಪಿ ರಾಮಚಂದ್ರಪ್ಪ ಅವರನ್ನು ಅಮಾನತು ಮಾಡಿ ಇಂದು (ಜನವರಿ 03) ಆದೇಶ ಹೊರಡಿಸಿದ್ದಾರೆ.
ರಾಸಲೀನೆ ನಡಸಿದ ವೈರಲ್ ವಿಡಿಯೋ ಇಲ್ಲಿದೆ:-
ಘಟನೆ ಹಿನ್ನೆಲೆ ಏನು ?
ತುಮಕೂರು ಜಿಲ್ಲೆಯ ಪಾವಗಡ ಮೂಲದ ಮಹಿಳೆ ತಮ್ಮ ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಿದ್ದರು. ಈ ಕುರಿತು ಮಹಿಳೆಯೊಂದಿಗೆ ಮಾತುಕತೆ ನಡೆಸಬೇಕು ಕೆಲವು ವಿಚಾರಣೆ ಮಾತನಾಡಬೇಕು ಎಂದು ತಮ್ಮ ಕಚೇರಿಗೆ ಡಿವೈಎಸ್ ಪಿ ರಾಮಚಂದ್ರಪ್ಪ ಕರೆಸಿದ್ದರು.
Dysp ಕಚೇರಿಗೆ ಬಂದ ಆ ಮಹಿಳೆಯನ್ನ ಡಿವೈಎಸ್‌ಪಿ ರಾಮಚಂದ್ರಪ್ಪ ಪುಸುಲಾಯಿಸಿ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ.
ಮಹಿಳೆ ಕೂಡ ತನ್ನ ಪರ ನ್ಯಾಯ ಸಿಗಬೇಕೆಂದರೆ ಈರೀತಿಯನ್ನು ಮಾಡಬೇಕು ಎಂದು ಡಿವೈಎಸ್‌ಪಿಯ ಕಾಮತೃಷೆ ತೀರಿಸಲು ಮುಂದಾಗಿದ್ದಾಳೆ.
ನಂತರ ಡಿವೈಎಸ್‌ಪಿ ಕಚೇರಿಯ ಶೌಚಾಲಯದ ಬಳಿ ಕರೆದುಕೊಂಡು ಹೋದ ರಾಮಚಂದ್ರಪ್ಪ ಮಹಿಳೆಯನ್ನು ಹಿಡಿದುಕೊಂಡು ಕೆಟ್ಟ ಕೆಲಸ ಮಾಡಿಸಿ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದಾರೆ.
ಇನ್ನು ಡಿವೈಎಸ್‌ಪಿ ರಾಮಚಂದ್ರಪ್ಪನ ರಾಸಲೀಲೆಯ ದೃಶ್ಯವನ್ನು ಶೌಚಾಲಯದ ಹೊರಗಿನ ಕಿಟಕಿಯಿಂದ ವ್ಯಕ್ತಿಯೊಬ್ಬರಿ ತಮ್ಮ ಮೊಬೈಲ್‌ನಲ್ಲಿ (mobile)ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲಿ ಮಹಿಳೆ ಜೊತೆ ಬಲವಂತವಾಗಿ
ನಡೆದುಕೊಳ್ಳುತ್ತಿದ್ದ ದೃಶ್ಯಗಳು ಸೆರೆ ಸಿಕ್ಕಿವೆ. ಅಷ್ಟರಲ್ಲಾಗಲೇ ಮಹಿಳೆ ಮೊಬೈಲ್ ನಲ್ಲಿ ರೆಕಾರ್ಡ ಮಾಡುತ್ತಿರುವುದನ್ನು ಗಮನಿಸಿ ಹೆದರಿದ್ದಾಳೆ.
ನಂತರ ವೀಡಿಯೋ ಮಾಡುತಿದ್ದ ವ್ಯಕ್ತಿ ಅಲ್ಲಿಂದ ಪರಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.
ಇದನ್ನೂ ಓದಿ:-Murdeshwar:ಕಡಲ ತೀರ ನಿರ್ಬಂಧ ತೆರವು ಒಂದೇ ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಪ್ರವಾಸಿಗರ ಆಗಮನ
ಇದೀಗ ಈ ವಿಡಿಯೋ(video) ವೈರಲ್ ಆಗುತ್ತಿದ್ದಂತೆಯೇ ಡಿವೈಎಸ್ಪಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಕುದ್ದು ಗೃಹ ಸಚಿವರ ಕ್ಷೇತ್ರ ದಲ್ಲೇ ಈ ಪೊಲೀಸಪ್ಪನ ರಾಸಲೀಲೆ ಇದೀಗ ಜಗಜ್ಜಾಹಿರವಾಗಿದ್ದು ಮಹಿಳೆಯರ ರಕ್ಷಣೆ ಮಾಡಬೇಕಾದವರು ಈ ರೀತಿ ನಡೆದುಕೊಳ್ಳುತ್ತಿರುವುದು ಇಡೀ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ.
ಇನ್ನು ರಾಸಲೀಲೆ ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆಯಿಂದ ದೂರು ಪಡೆದು ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿದ್ದು DYSP ರಾಮಚಂದ್ರಪ್ಪನನ್ನು ಬಂಧನ ಮಾಡಲಾಗಿದೆ.