Karwar:ಮಂಡ್ಯ ಮೂಲದ ಲಾರಿ ಚಾಲಕನಿಗೆ ಅಬಕಾರಿ ಅಧಿಕಾರಿ ಹಲ್ಲೆ ಪ್ರಕರಣ |ಅಧಿಕಾರಿ ಅಮಾನತು
ಕಾರವಾರ :-ಕಾರವಾರ (karwar)-ಗೋವಾ(Goa) ಗಡಿಯ ಮಾಜಾಳಿಯಲ್ಲಿ ಲಾರಿ ಚಾಲಕನ ಮೇಲೆ ಅಬಕಾರಿ ಅಧಿಕಾರಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾವಣೆ ಗೊಂಡಿದ್ದ ಇಬ್ಬರು ಅಧಿಕಾರಿಗಳನ್ನು ಅಬಕಾರಿ ಆಯುಕ್ತರು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಕಾರವಾರ ಗಡಿಯ ಮಾಜಾಳಿ (majali)ಅಬಕಾರಿ ನಿರೀಕ್ಷಕ ಸದಾಶಿವ ಕೋರ್ತಿ ,ಅಬಕಾರಿ ಪೇದೆ ಹೇಮಚಂದ್ರ ಅಮಾನತುಗೊಂಡ ಅಬಕಾರಿ ಅಧಿಕಾರಿಗಳಾಗಿದ್ದು,
ಅಕ್ಟೋಬರ್ 15 ರಂದು ಗೋವಾ ದಿಂದ ಕೇರಳಕ್ಕೆ ವಾಟರ್ ಪಿಲ್ಟರ್ ತೆಗೆದುಕೊಂಡು ಹೋಗುತಿದ್ದ ಮಂಡ್ಯ ಮೂಲದ ಕುಮಾರ್ ಲಾರಿಚಾಲಕನಿಗೆ ತನಿಖೆ ನೆಪದಲ್ಲಿ ಹಲ್ಲೆ ನಡೆಸಿದ್ದರು.ಈ ದೃಶ್ಯ ಇಲಾಖೆ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿತ್ತು.ಇದಲ್ಲದೇ ಹಲ್ಲೆ ಮಾಡಿದ ಕುರಿತು ಲಾರಿ ಚಾಲಕ ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದನು.ಘಟನೆ ಸಂಬಂಧ ಜಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತು.ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತಿದ್ದಂತೆ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಅಬಕಾರಿ ಆಯುಕ್ತರು ಇದೀಗ
ವರ್ಗಾವಣೆ ಬೆನ್ನಲ್ಲೇ ಇಂದು ಅಮಾನತು ಆದೇಶವನ್ನು ಅಬಕಾರಿ ಆಯುಕ್ತರು ಮಾಡಿದ್ದಾರೆ.
ಘಟನೆ ಆಗಿದ್ದೇನು? ವಿಡಿಯೋ ನೋಡಿ:-
ಉತ್ತರ ಕನ್ನಡ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಗೋವಾ ಗಡಿಯ ಮಾಜಾಳಿ ಚೆಕಪೊಸ್ಟ ನಲ್ಲಿ ಅಕ್ಟೋಬರ್ 15 ರಂದು ಗೋವಾ ದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ಲೋಡ್ ಲಾರಿಯಲ್ಲಿ ಒಯ್ಯುತ್ತಿದ್ದ
ಮಂಡ್ಯದ ಚಾಲಕ ಕುಮಾರ ಗೆ ಲೋಡ್ ನಲ್ಲಿ ಎನ್ ಒಯ್ಯುತ್ತಿದ್ದಿಯಾ ಓಪನ್ ಮಾಡುವಂತೆ ಅಬಕಾರಿ ಸಿಬ್ಬಂಧಿ ಕೇಳಿದ್ದರು.
ಲೋಡ್ ಬಿಚ್ಚಿ ತೊರಿಸೊಕೆ ಆಗಲ್ಲ, ಬೇಕಾದ್ರೆ ನಿವೇ ನೊಡ್ಕೊಳ್ಳಿ ಎಂದು ಚಾಲಕ ಹೇಳಿದ್ದಕ್ಕೆ ಕೊಪಗೊಂಡು ಅಬಕಾರಿ ಅಧಿಕಾರಿಗಳು ಹಲ್ಲೆ ಮಾಡಿದ್ದರು.
ಇದನ್ನೂ ಓದಿ:-Karwar :ಸಚಿವ ವೈದ್ಯರಿಂದ ಬಾಗಿಲು ಮುಚ್ಚಿದ ಸರಣಿ ಅಧಿಕಾರಿಗಳ ಸಭೆ ಗುಟ್ಟೇನು
ಈ ಕುರಿತು ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿದ ಸಿಸಿ ಕ್ಯಾಮರಾ ದೃಶ್ಯ ಸಹ
ಸೆರೆಯಾಗಿತ್ತು.
ಇದರ ಬೆನ್ನಲ್ಲೇ ಲಾರಿ ಚಾಲಕ ವಿಡಿಯೋ(video) ಮಾಡಿ ನೋವು ತೋಡಿಕೊಂಡಿದ್ದು ಮಂಡ್ಯ ಜಿಲ್ಲೆಯ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ ಸಹ ಮಾಡಿದ್ದರು.
ಲಾರಿ ಚಾಲಕನ (lorry driver )ಮೇಲೆ ಹಲ್ಲೆ ಮಾಡಿದ ಮಾಜಾಳಿ ತನಿಖಾ ಠಾಣೆ ಅಬಕಾರಿ ನೀರಿಕ್ಷಕರಾಗಿದ್ದ ಸದಾಶಿವ ಕೊರ್ತಿ ಯನ್ನ ವುಡ್ ಪಕ್ಕರ್ ಡಿಸ್ಟಲರೀಸ್ ಪ್ಲಾಂಟ್ ಉಪನೀರಿಕ್ಷಕರಾಗಿ ಅಬಕಾರಿ ಆಯುಕ್ತರು ವರ್ಗಾವಣೆ ಮಾಡಿದರೇ ಕೆ.ಎಸ್.ಬಿ.ಸಿ ಎಲ್ ಸಿಂಧನೂರು ಡಿಪೋ ಅಬಕಾರಿ ಪೇದೆ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.
ಆದರೇ ಇದೀಗ ಅಬಕಾರಿ ಡಿ.ಸಿ ತನಿಖೆ ನಂತರ ಘಟನೆ ನಡೆದ ಬಗ್ಗೆ ವರದಿ ಪಡೆದು ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.