GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂನೊಂದಿ ಹೊಸ ಹೆಜ್ಜೆ ಇಟ್ಟ ನಿಮ್ಮ ಕನ್ನಡವಾಣಿ ಏನಿದು ವಿಶೇಷ ಇಲ್ಲಿದೆ ನೋಡಿ.
ಕನ್ನಡವಾಣಿ ಡಿಜಿಟಲ್ ಮಾಧ್ಯಮವು ಗೋಗಲ್ ಸಹಯೋಗದೊಂದಿಗೆ ಕಳೆದ ಮೂರು ವರ್ಷಗಳಿಂದ ಹೊಸತನದ ಹೆಜ್ಜೆ ಇಟ್ಟಿದೆ.GNI (Google News Initiative) ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ ಮೂಲಕ ಸುದ್ದಿಯ ಗುಣಮಟ್ಟ, ತಂತ್ರಜ್ಞಾನ ,ವಸ್ತು ನಿಷ್ಟ ವರದಿಗೆ ಸೂಕ್ತ ತರಬೇತಿ ಪಡೆದು ಇದೀಗ ನಿಮ್ಮ ಮುಂದೆ ಹೊಸ ರೂಪ ಪಡೆದಿದೆ.
GNI ಮೂಲಕ ಬದಲಾದ ಕನ್ನಡವಾಣಿ.
ಕಳೆದ ಆರು ವರ್ಷದಿಂದ ಸಾಗರ್ ಮೀಡಿಯಾ ನೆಟ್ವರ್ಕ ನಡಿ ಕನ್ನಡವಾಣಿ ಡಿಜಿಟಲ್ ಪತ್ರಿಕೆಯು ಕಾರ್ಯನಿರ್ವಹಿಸುತ್ತಾ ಬಂದಿದೆ. GNI ನಲ್ಲಿ ತರಬೇತಿಗೆ ಆಯ್ಕೆ ಆದ ನಂತರ ಕನ್ನಡವಾಣಿ ಸ್ವರೂಪ ಬದಲಾಗಿದೆ. ವಸ್ತು ನಿಷ್ಟ ವರದಿಗೆ ಹೆಚ್ಚು ಒತ್ತು ನೀಡಿದೆ.ಪ್ರತಿ ತಿಂಗಳು ಆರು ಲಕ್ಷ ಓದುಗರನ್ನು ತಲುಪುತ್ತಿದೆ.ಹಿಂದಿಗಿಂತ 32 % ಪೇಜ್ ವೀವ್ ,15% ಕ್ರಿಯಾಶೀಲ ಬಳಕೆದಾರರು, ರಾಜ್ಯವ್ಯಾಪಿ ಹೆಚ್ಚಿನ ಓದುಗರ ಸಂಖ್ಯೆ ವೃದ್ಧಿಯಾಗಿದೆ.
Google News Initiative ಪ್ರೋಗ್ರಾಮ್ ಮೂಲಕ kannadavani.news ಡಿಜಿಟಲ್ ಮಾಧ್ಯಮ ಬದಲಾಗಿದ್ದು ಇದೀಗ ಪ್ಲೇ ಸ್ಟೋರ್ ನಲ್ಲಿ iOS , Android ಯಾಪ್ ಗಳು ಲಭ್ಯವಿದ್ದು ,ರಾಜ್ಯದ ಪ್ರಮುಖ ಸುದ್ದಿಗಳ ಜೊತೆ ಉತ್ತಮ ಲೇಖನ ,ಮಾಹಿತಿಯನ್ನು ಹೊತ್ತು ತರಲಿದೆ.
ಪ್ಲೇ ಸ್ಟೋರ್ , Apple Store ನಲ್ಲಿ ಕನ್ನಡವಾಣಿ.ನ್ಯೂಸ್ ಆ್ಯಪ್ (App) ಡೌನ್ ಲೋಡ್ ಮಾಡಲು ಈ ಕೆಳಗಿನ ಲಿಂಕ್ ಬಳಸಿ:-
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಡೌನ್ ಲೋಡ್ ಮಾಡಲು ಫೋಟೋದ ಮೇಲೆ ಕ್ಲಿಕ್ ಮಾಡಿ.
Download apps with this link:-
ಪ್ರತಿ ದಿನದ ಜಿಲ್ಲಾ ಸುದ್ದಿಗಳನ್ನು ತಿಳಿಯಲು ನಮ್ಮ WhatsApp ಗ್ರೂಪ್ ಗೆ ಸೇರಲು ಅಕ್ಷರದ ಮೇಲೆ ಕ್ಲಿಕ್ ಮಾಡಿ
ಮಾಧ್ಯಮದ ಮಗ್ಗಲುಗಳು ಹೊರಳಿದ ಮೇಲೆ ತಂತ್ರಜ್ಞಾನದ ಮೂಲಕ ಮಾಧ್ಯಮ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾ ಬಂದಿದೆ. Social media ಗಳ ಹಾವಳಿಯಲ್ಲಿ ಯಾವುದು ಸುದ್ದಿ ,ಯಾವುದು ಫೇಕ್ ಸುದ್ದಿಗಳು ಎಂಬ ಜಿಜ್ಞಾಸೆಗೆ ಓದುಗ ಒಳಗಾಗುತ್ತಾನೆ.
ಹೀಗಾಗಿ ಗೂಗಲ್ ಸಂಸ್ಥೆ ವೃತ್ತಿಪರ ಪತ್ರಿಕೋಧ್ಯಮಿಗಳಿಗೆ ದೇಶದ ಎಲ್ಲಾ ಭಾಷೆಯ ಮೂಲಕ ತರಬೇತಿ ನೀಡುವ ಜೊತೆ ತಂತ್ರಜ್ಞಾನವನ್ನು ಧಾರೆಯೆರೆದು ಬೆಳಸುತ್ತಿದೆ.
ಕಳೆದ ಮೂರು ವರ್ಷದಿಂದ ಕನ್ನಡವಾಣಿ ಗೂಗಲ್ ಸಂಸ್ಥೆ ನೀಡುವ ತರಬೇತಿಗೆ ಆಯ್ಕೆಯಾಗುತ್ತಾ ಗುಣಮಟ್ಟದ ಸುದ್ದಿ ಪ್ರಸಾರ ಮಾಡುತ್ತಾ ಬಂದಿದ್ದು ಈ ಭಾರಿ ರಾಜ್ಯದ ಕನ್ನಡ ಮಾಧ್ಯಮದಲ್ಲಿ GNI ತರಬೇತಿಗೆ ಆಯ್ಕೆಯಾದ ಕೆಲವೇ ಮಾಧ್ಯಮದಲ್ಲಿ ಕನ್ನಡವಾಣಿಯೂ ಕೂಡ ಒಂದು.
GNI (Google News Initiative) ಭಾಷಾ ಪ್ರೋಗ್ರಾಂ ಎಂದರೆ ಏನು?

GNI ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ Google ನ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ, ಇದು ದೇಶದ ವಿವಿಧ ಭಾಷೆಗಳಲ್ಲಿ ಪತ್ರಿಕೋದ್ಯಮದ ಅಭಿವೃದ್ಧಿ, ಬೆಳವಣಿಗೆ, ಮತ್ತು ಸ್ಥಿರತೆಯನ್ನು ಬೆಂಬಲಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮವು ಮಾಧ್ಯಮ ಸಂಸ್ಥೆಗಳನ್ನು ಮತ್ತು ಪತ್ರಿಕೋದ್ಯಮವನ್ನು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನವೀಕರಿಸಲು ಹಾಗೂ ವಾಸ್ತವವಾದ ಮತ್ತು ಗುಣಮಟ್ಟದ ವಿಷಯವನ್ನು ಪ್ರೋತ್ಸಾಹಿಸಲು ಸಹಕಾರ ನೀಡುತ್ತದೆ.
GNI ನ ಮುಖ್ಯ ಉದ್ದೇಶಗಳು ಏನು?
ಪ್ರಾದೇಶಿಕ ಭಾಷಾ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸಿ ಸ್ಥಳೀಯ ಮತ್ತು ಅಲ್ಪ ಸಂಖ್ಯಾತ ಭಾಷೆಗಳಲ್ಲಿ ಸುದ್ದಿಯ ಗುಣಮಟ್ಟ ಹೆಚ್ಚಿಸುವುದಾಗಿದೆ. ತಪ್ಪು ಮಾಹಿತಿಯನ್ನು ಗುರುತಿಸಲು ಮತ್ತು ನಿರಾಕರಿಸಲು ಪತ್ರಕರ್ತರಿಗೆ ಸೂಕ್ತ ಸಾಧನಗಳು ಮತ್ತು ತರಬೇತಿಗಳನ್ನು ಒದಗಿಸುತ್ತದೆ.
ಮಾಧ್ಯಮ ಸಂಸ್ಥೆಗಳನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನಗಳಿಗೆ ಹೊಂದಿಸಿಕೊಳ್ಳಲು ಮತ್ತು ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಸ್ಥಳೀಯ ಭಾಷೆ -ನಿರ್ದಿಷ್ಟ ಪತ್ರಿಕೋದ್ಯಮ ಯೋಜನೆಗಳಿಗೆ ಓದುಗರನ್ನು ಹೆಚ್ಚು ತಲುಪಲು AI, ಅನುವಾದ ಸಾಧನಗಳು ಮತ್ತು ವಿಶ್ಲೇಷಣಾ ಸಾಧನಗಳನ್ನು ಒದಗಿಸುವ ಮೂಲಕ ದೇಶದ ಸುದ್ದಿ ಮಾಧ್ಯಮಗಳಿಗೆ GNI ಶಕ್ತಿ ತುಂಬುತ್ತಿದೆ.
ಕನ್ನಡವಾಣಿಗೆ ಮೀಡಿಯಾಲಾಜಿ ಕಂಪನಿ ಸಹಕಾರ.
GNI -2024 ಪ್ರೂಗ್ರಾಮ್ ಮೂಲಕ ಮೀಡಿಯಾಲಾಜಿ (Mediology) ಕಂಪನಿಯು ಕನ್ನಡವಾಣಿಯ ತಂತ್ರಜ್ಞಾನ ವೈಷಿಷ್ಟಗಳನ್ನು ಉನ್ನತಿಕರಿಸಿ ನೀಡಿದ್ದು ,ಓದುಗರಿಗೆ ಬೇಕಾದ ಸುದ್ದಿಗಳನ್ನು ನೀಡಲು ತಂತ್ರಜ್ಞಾನವನ್ನು ಅಳವಡಿಸಿ ನಮಗೆ ನೀಡಿದೆ.
ಇದನ್ನೂ ಓದಿ:-Karnataka:ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!ವಿಡಿಯೋ ನೋಡಿ.
ಕನ್ನಡವಾಣಿ ಮಾಧ್ಯಮ ಸಂಸ್ಥೆಗೆ ಹೆಚ್ಚಿನ ಓದುಗರನ್ನು ತಲುಪಲು ಮತ್ತು ಸುಧಾರಿಸಲು, ಗೂಗಲ್ ನ್ಯೂಸ್ ಇನಿಶಿಯೇಟಿವ್ ಇಂಡಿಯನ್ ಲ್ಯಾಂಗ್ವೇಜಸ್ ಪ್ರೋಗ್ರಾಂ ಮೂಲಕ ಮೀಡಿಯಾಲಾಜಿ ಸಾಫ್ಟ್‌ವೇರ್ ಕಸ್ಟಮೈಸ್ ಮಾಡಿದ ಮೊಬೈಲ್ ವೆಬ್‌ಸೈಟ್ ಮತ್ತು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ನೀಡಿದೆ.
ಹೊಸ ತಂತ್ರಜ್ಞಾನ, ವಿಶಿಷ್ಟ ಸುದ್ದಿಗಳ ಮೂಲಕ ಕನ್ನಡವಾಣಿಯು ಆರು ಲಕ್ಷ ವೀಕ್ಷಕರನ್ನು ಪ್ರತಿ ತಿಂಗಳು ತಲುಪುತಿದ್ದು ಓದುಗರ ಹಾರೈಕೆ , ನಂಬಿಕೆ ಹೊಸ ಹುಮ್ಮಸ್ಸನ್ನು ನೀಡಿದ್ದು ಉತ್ತಮ ಸುದ್ದಿಗಳನ್ನು ನೀಡುವ ಮೂಲಕ ನಿಮ್ಮ ನಂಬಿಕೆ ವಿಶ್ವಾಸ ಉಳಿಸಿಕೊಳ್ಳುವ ಭರವಸೆ ನಮ್ಮದು.
ನಮಗೆ ಬೆಂಗಾವಲಾಗಿ ನಿಂತು ಹೊಸ ವರ್ಷಕ್ಕೆ ಕನ್ನಡವಾಣಿ ಓದುಗರಿಗಾಗಿ Play Store ನಲ್ಲಿ APP ಮಾಡಿಕೊಟ್ಟು ನಿರಂತರ ಬೆಂಗಾವಲಾಗಿರುವ Google ಸಂಸ್ಥೆ, Mediology ಸಂಸ್ಥೆಗೆ ಸಾಗರ್ ಮೀಡಿಯಾ ನೆಟ್ವರ್ಕ ಧನ್ಯವಾದ ತಿಳಿಸುತ್ತದೆ.
ಕನ್ನಡವಾಣಿ.ನ್ಯೂಸ್ ಇದೀಗ ಇನ್‌ಶಾರ್ಟ್ಸ್, ಗೂಗಲ್ ನ್ಯೂಸ್, ಡೈಲಿಹಂಟ್ ನಲ್ಲಿಯೂ ಲಭ್ಯ.