Good News: ಕಾರವಾರದಲ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ MedSquare Hospital | ಏನಿದರ ವಿಶೇಷ ಇಲ್ಲಿದೆ ವಿವರ
Good News: ಕಾರವಾರದಲ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ MedSquare Hospital | ಏನಿದರ ವಿಶೇಷ ಇಲ್ಲಿದೆ ವಿವರ

ಅನಾದಿಕಾಲದಿಂದ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಆದರೇ ವೇಗ ಪಡೆದುಕೊಂಡ ಬದುಕಿನಲ್ಲಿ ಎಲ್ಲವೂ ಮೊದಲು ಎಂಬ ಹಪಹಪಿ ತನಕ್ಕೆ ಬಿದ್ದ ನಾವುಗಳು ಭಾರತದ ಪ್ರಾಚೀನ ಚಿಕಿತ್ಸಾ ಪದ್ದತಿಗಳನ್ನು ಮೂಲೆಗುಂಪು ಮಾಡಿದ್ದೇವೆ. ಆದರೇ ಎಲ್ಲಿ ಕೋವಿಡ್ ನಂತಹ ಮಾರಕ ಕಾಯಿಲೆ ಆವರಿಸಿತೋ ನಮ್ಮ ಪಾರಂಪರಿಕ ಪದ್ದತಿ ಚಿಕಿತ್ಸೆಯ ಮಹತ್ವ ಅರಿವಾಗುವಂತಾಯಿತು.
ಹೀಗಾಗಿ ದೇಹಕ್ಕೆ ಮಾರಕವಲ್ಲದ ಅಲೋಪತಿ ಚಿಕಿತ್ಸೆಯಲ್ಲಿ ಗುಣವಾಗದ ರೋಗಗಳು ಆಯುರ್ವೇದದಲ್ಲಿ ಗುಣವಾದ ಎಷ್ಟೋ ಉದಾಹರಣೆಗಳಿವೆ . ಇತ್ತೀಚಿನ ದಿನದಲ್ಲಿ ಆಯುರ್ವೇದ ಚಿಕಿತ್ಸೆಯ ಸಂಶೋಧನೆಗಳು ವೇಗ ಪಡೆದುಕೊಂಡಿದೆ.
ಇಂತಹ ಸಂಶೋಧನೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಕಾರವಾರದಲ್ಲಿ (karwar) ಹುಟ್ಟಿದ ರೆವಿಂಟೊ ಲೈಫ್ ಸೈನ್ಸ್ ಸಂಸ್ಥೆ ಆಯುರ್ವೇದ ದಲ್ಲಿ ಸಂಶೋಧನೆಗಿಳಿದು 750 ಕ್ಕೂ ಹೆಚ್ಚು ಔಷಧಗಳನ್ನು ಹೊರತಂದಿದೆ. ದೇಶ ,ವಿದೇಶದಲ್ಲಿ ಭಾರತದ ಆಯುರ್ವೇದ ಔಷಧವನ್ನು ಮುಟ್ಟಿಸುವ ಕಾರ್ಯ ಮಾಡುತ್ತಿರುವ ಈ ಕಂಪನಿ ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದು ಮೆಡ್ ಸ್ಕ್ವೇರ್ ಹಾಸ್ಪೆಟಲ್ ನನ್ನು ರಾಜ್ಯಾಧ್ಯಾಂತ ಎಲ್ಲಾ ಜಿಲ್ಲೆಗಳಲ್ಲಿ ತೆರೆಯಲು ಸಿದ್ದವಾಗಿದೆ.

ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಇದೇ ಪ್ರಥಮ ಬಾರಿಗೆ ರೆವಿಂಟೊ ಲೈಫ್ ಸೈನ್ಸ್ ಕಂಪನಿಯಡಿ ಮೆಡ್ ಸ್ಕ್ವೇರ್ ಆಸ್ಪತ್ರೆ (MedSquare Hospital)ಹಾಗೂ ಪಂಚಕರ್ಮ ಸೆಂಟರ್ನನ್ನು ಶುಕ್ರವಾರ ಉದ್ಘಾಟನೆಗೊಳ್ಳಲಿದೆ.
ಕಾರವಾರದ ಶಾಸಕ ಸತೀಶ್ ಸೈಲ್ ಈ ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಿದ್ದು,ಮುಖ್ಯ ಅಥಿತಿಗಳಾಗಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ , ಪ್ರಕೃತಿಗ್ರೂಪ್ ಬೇರ್ಮನ್ ಉದ್ಯಮಿ ಎಮ್.ಆರ್ .ಶಟ್ಟಿ ಸಾಕ್ಷಿಯಾಗಲಿದ್ದಾರೆ.
ಆಸ್ಪತ್ರೆ ಇರುವುದು ಎಲ್ಲಿ- ಮುರುಳಿದರ ಮಠ ರಸ್ತೆ ಕಾರವಾರ ನಗರ
ವಿಡಿಯೋ ನೋಡಿ:-
ಕಂಪನಿ ನಡೆದುಬಂದ ದಾರಿ ಹೀಗಿದೆ.
ರೆವಿಂಟೊ ಲೈಫ್ ಸೈನ್ಸ್ 2004ರಲ್ಲಿ 8 ಉದ್ಯೋಗಿಗಳ ತಂಡದೊಂದಿಗೆ ಸ್ಥಾಪಿತಗೊಂಡಿತು ಮತ್ತು ಇಂದಿನ ಮಟ್ಟಿಗೆ 350ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಇಂದು, ಈ ಕಂಪನಿಯು 15,000ಕ್ಕೂ ಹೆಚ್ಚು ವೈದ್ಯರುಗಳೊಂದಿಗೆ ಔಷಧ ಮಾರಾಟ ಸಂಪರ್ಕ ಹೊಂದಿದೆ. 6 ಅಂತಾರಾಷ್ಟ್ರೀಯ ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

ರೆವಿಂಟೊ ಲೈಫ್ ಸೈನ್ಸ್ ಸೆನಾಕ್ಸ್ (Senax) ಮತ್ತು ರೇವೇದ (Reveda) ಎಂಬ ಎರಡು ಪ್ರಮುಖ ವಿಭಾಗಗಳ ಪೋಷಕ ಸಂಸ್ಥೆಯಾಗಿದ್ದು, ಪ್ರಾಚೀನ ಆಯುರ್ವೇದ ಜ್ಞಾನವನ್ನು ಆಧುನಿಕ ರೋಗಗಳ ಚಿಕಿತ್ಸೆಗೆ ಬಳಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಆಯುರ್ವೇದ ವನಸ್ಪತಿಗಳನ್ನು ಆಧರಿಸಿದ ಪರಿಣಾಮಕಾರಿಯಾದ ಚಿಕಿತ್ಸೆಗಳನ್ನು ಪೂರೈಸುವುದರೊಂದಿಗೆ, ಯಾವುದೇ ಹಾನಿಕಾರಕ ಪ್ರತಿಕ್ರಿಯೆಗಳನ್ನು ತಪ್ಪಿಸಲು ಈ ಸಂಸ್ಥೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ.
ರೆವಿಂಟೊ ಸೌಲಭ್ಯಯುತ ಆರೋಗ್ಯ ಪರಿಹಾರಗಳನ್ನು ಒದಗಿಸುವ ಗುರಿಯೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿತು ಮತ್ತು ಈಗ ಮೆಡ್ ಸ್ಕ್ವೇರ್ (MedSquare) ಎಂಬ ಮಹತ್ವಾಕಾಂಕ್ಷಿಯ ಸಾಮಾಜಿಕ ಕಾರ್ಯಕ್ಕೆ ಕೈ ಹಾಕಿದೆ.
ಮೆಡ್ ಸ್ಕ್ವೇರ್ ನ ಎರಡು ಪ್ರಮುಖ ಅಂಗಗಳು:

ಫಾರ್ಮಸಿ ಮತ್ತು ಕ್ಲಿನಿಕ್: 24/7 ಉಚಿತ ವೈದ್ಯರ ಸಲಹೆ ಹಾಗೂ ಆಯುರ್ವೇದ ಔಷಧಿಗಳ ಲಭ್ಯತೆ.
ಮೆಡ್ ಸ್ಕ್ವೇರ್ ಆಸ್ಪತ್ರೆ: ಸಂಪ್ರದಾಯಿಕ ಪಂಚಕರ್ಮ ಚಿಕಿತ್ಸೆಯನ್ನು ಒದಗಿಸುವ ಮೂಲಕ ಸಮಗ್ರ ಆರೋಗ್ಯ ಜೀವನ ಶೈಲಿಗೆ ಬೇಕಾದ ಚಿಕಿತ್ಸೆ ನೀಡುತ್ತದೆ.ಮೆಡ್ಸ್ಕ್ವೇರ್ ಮುಂದಿನ ಮೂರು ವರ್ಷಗಳಲ್ಲಿ 100ಕ್ಕೂ ಹೆಚ್ಚು ನಗರಗಳಲ್ಲಿ ಆಸ್ಪತ್ರೆ ಮತ್ತು ಫಾರ್ಮಸಿಗಳೊಂದಿಗೆ ಕ್ಲಿನಿಕ್ ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಮೊದಲ ಮೆಡ್ಸ್ಕ್ವೇರ್ ಫಾರ್ಮಸಿ ಮತ್ತು ಕ್ಲಿನಿಕ್ ಈಗ ಉಡುಪಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 24/7 ವೈದ್ಯರುಗಳ ಲಭ್ಯತೆ ಹಾಗೂ ಉಚಿತ ಸಲಹೆಯನ್ನು ಒದಗಿಸುತ್ತಿದೆ.ಈ ಯೋಜನೆಯ ಭಾಗವಾಗಿ, ಮೆಡ್ಸ್ಕ್ವೇರ್ ಆಸ್ಪತ್ರೆಯ ಪ್ರಥಮ ಶಾಖೆಯನ್ನು ಮಾ 21ರಂದು ಕಾರವಾರದಲ್ಲಿ ಪ್ರಾರಂಭಿಸಲಾಗುತ್ತಿದೆ, ಹಿರಿಯ ವೈದ್ಯರು,ನುರಿತ ತಜ್ಞರೊಂದಿಗೆ ಕೂಡಿದ ಆಯುರ್ವೇದ ಪಂಚಕರ್ಮ ಚಿಕಿತ್ಸೆಯಲ್ಲಿ ಪರಿಣಿತವಾಗಿದೆ.
ಕರ್ನಾಟಕದಲ್ಲಿ ಆಯುರ್ವೇದ ಆರೋಗ್ಯ ಸೇವೆಗಳನ್ನು ಸಾಮಾನ್ಯ ಜನತೆಗೆ ಸುಲಭವಾಗಿ ಲಭ್ಯವಾಗುವಂತೆ ಮಾಡುವ ದೃಷ್ಟಿಕೋನದೊಂದಿಗೆ, ರೆವಿಂಟೊ ಲೈಫ್ ಸೈನ್ಸ್ ತನ್ನ ಸೇವೆಗಳನ್ನು ವಿಸ್ತರಿಸುತಿದ್ದು ಭಾರತೀಯ ಆಯುರ್ವೇದ ಶಾಸ್ತ್ರವನ್ನು ಎಲ್ಲೆಡೆ ಮುಟ್ಟಿಸುವ ಗುರಿಯಲ್ಲಿ ಶ್ರಮಿಸುತ್ತಿದೆ.