Haliyala :ನಕಲಿ ಪತ್ರಕರ್ತೆಯಿಂದ ಆಸ್ಪತ್ರೆಯಲ್ಲಿ ಗಲಾಟೆ -ಮಹಿಳೆ ಸೇರಿ ಇಬ್ಬರು ಜೈಲು ಶಿಕ್ಷೆ!
Haliyala :ನಕಲಿ ಪತ್ರಕರ್ತೆಯಿಂದ ಆಸ್ಪತ್ರೆಯಲ್ಲಿ ಗಲಾಟೆ -ಮಹಿಳೆ ಸೇರಿ ಇಬ್ಬರು ಜೈಲು ಶಿಕ್ಷೆ!

ಕಾರವಾರ :- ಉತ್ತರ ಕನ್ನಡ (uttara kannda) ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ,ಯೂಟ್ಯೂಬರ್ ಗಳು ಪತ್ರಕರ್ತರೆಂದು ಹೇಳಿ ಹೆದರಿಸುವ ವಸೂಲಿ ಮಾಡುವ ದಂಧೆ ಹೆಚ್ಚಾಗಿದೆ.
ಫೆ. 3 ರಂದು ಹಳಿಯಾಳದ ಆಸ್ಪತ್ರೆಗೆ ನುಗ್ಗಿದ ಗಣೇಶ್ ರಾಥೋಡ್ ಹಾಗೂ ದಿವ್ಯ ಎಂಬಾತರು ಅಲ್ಲಿನ ವೈದ್ಯಾಧಿಕಾರಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ಇದನ್ನೂ ಓದಿ:-Haliyala |3 ಲಕ್ಷ ಮೌಲ್ಯದ ನಾಟ ವಶ ನಾಲ್ಕುಜನ ಆರೋಪಿಗಳ ಬಂಧನ
ಕಚೇರಿಯಲ್ಲಿದ್ದ ಸಿಬ್ಬಂದಿ ತೇಜಸ್ವಿ ಪಾಲೇಕರ್ ವೈದ್ಯೆ ಡಾ.ಸೋನಾ ರವರ ವಿಡಿಯೋ ಮಾಡಿದ್ದು , ಅನುಮತಿ ಇಲ್ಲದೇ ರೋಗಿಗಳ ವಿಡಿಯೋ ಸಹ ಮಾಡಿದ್ದು ಅನುಚಿತ ವರ್ತನೆ ತೋರಿ ಯ್ಯೂಟ್ಯೂಬ್ ನಲ್ಲಿ ಹಾಕಿ ಮಾನ ಕಳೆಯುವ ಬೆದರಿಕೆ ತೋರಿದ್ದಾರೆ.
ಈ ಕುರಿತು ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಜೊತೆ ಸರ್ಕಾರಿ ನೌಕರರ ಸಂಘವು ಇವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ಇದರ ಬೆನ್ನಲ್ಲೇ ಹಳಿಯಾಳ ಪೊಲೀಸರು ಆರೋಪಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು ಪೆ.15 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕೆಲವು ವ್ಯಕ್ತಿಗಳು ಫೇಸ್ ಬುಕ್ ,YouTube ಮಾಡಿಕೊಂಡು ನ್ಯೂಸ್ ಪೇಜ್ ಎಂದು ಹೇಳಿಕೊಂಡು ವಸೂಲಿ ದಂಧೆಗೆ ಇಳಿಯುತಿದ್ದು ಇದರಿಂದಾಗಿ ಪತ್ರಕರ್ತರಿಗೆ ಕೆಟ್ಟ ಹೆಸರು ಬರುವಂತಾಗಿದೆ. ಇದಲ್ಲದೇ ಅಧಿಕೃತ ಪತ್ರಕರ್ತರಾಗಿರದಿದ್ದರೂ ಪ್ರಸ್ ಎಂದು ನಕಲಿ ಐಡಿ ಕಾರ್ಡ ಮಾಡಿಕೊಂಡು ವಾಹನಗಳಿಗೆ ಪ್ರಸ್ ಬೋರ್ಡ್ ಹಾಕಿಕೊಂಡು ಓಡಾಡುತಿದ್ದು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:-Haliyala : ಬಲೂನ್ ಗಂಟಲಲ್ಲಿ ಸಿಲುಕಿ ಸಾವು ಕಂಡ 13 ವರ್ಷದ ಬಾಲಕ!
ಇನ್ನು ಕೆಲವರು ತಮ್ಮ ವಾಹನಗಳಿಗೆ ಪ್ರಸ್ ಎಂದು ನಾಮಪತ್ರ ಅಳವಡಿಸಿ ಸಂಚಾರ ನಿಯಮ ಪಾಲಿಸದೇ ಹೆಲ್ಮೆಟ್ ಸಹ ಧರಿಸದೇ ಪೊಲೀಸರಿಗೇ ಬೆದರಿಸಿದ ಪ್ರಕರಣಗಳು ಜರುಗಿವೆ.