BBK 11 ಹಾವೇರಿ ಹೈದ ಹನುಮಂತುಗೆ ಒಲಿದ ಬಿಗ್ ಬಾಸ್
ಬೆಂಗಳೂರು:- ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರಿಯಾಲಿಟಿ ಷೋಗೆ ತೆರೆಬಿದ್ದಿದೆ. ಈಭಾರಿ ಹಾವೇರಿ ಹಳ್ಳಿ ಹೈದ ಹನುಮಂತನಿಗೆ ಬಿಗ್ ಬಾಸ್ 11ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
12:18 AM Jan 27, 2025 IST | ಶುಭಸಾಗರ್

ಬೆಂಗಳೂರು:- ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ರಿಯಾಲಿಟಿ ಷೋಗೆ ತೆರೆಬಿದ್ದಿದೆ. ಈಭಾರಿ ಹಾವೇರಿ ಹಳ್ಳಿ ಹೈದ ಹನುಮಂತನಿಗೆ ಬಿಗ್ ಬಾಸ್ 11ರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
Advertisement

ಬಿಗ್ ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಿ 4 ವಾರ ಕಳೆದ ನಂತರ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟದ್ದರು.
ಹಳ್ಳಿ ಹೈದ ಹನುಮಂತು ಬಿಗ್ ಬಾಸ್ ಮನೆಯ ಜಗಳ ನೋಡಿ ತಲೆಕೆಡಿಸಿಕೊಂಡಿದ್ದರು. ಮುಗ್ದ ಮನಸಿನಿಂದ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು.

ನಂತರ ತನ್ನ ಮುಗ್ಧತೆಯ ಮಾತುಗಳಿಂದ ಜನರ ಮನಸ್ಸು ಕದ್ದ ಹನುಮುಂತು ಐದು ಕೋಟಿಗೂ ಹೆಚ್ಚು ಮತಗಳಿಸಿ ವಿನ್ನರ್ (Winner) ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಬಿಗ್ ಬಾಸ್ ನಲ್ಲಿ ಗೆಲುವು ಕಂಡ ಇವರು 50 ಲಕ್ಷ ಬಹುಮಾನ ಗೆದ್ದಿದ್ದಾರೆ.
Advertisement