Honnavar: ಮಳೆ ಪರಿಹಾರ ನೀಡಲು ನಿರ್ಲಕ್ಷ -ಪಟ್ಟಣ ಪಂಚಾಯ್ತಿ ವಸ್ತುಗಳ ಜಪ್ತಿಗೆ ಕೋರ್ಟ ಆದೇಶ! ಮುಂದೇನಾಯ್ತು?
Honnavar: ಮಳೆ ಪರಿಹಾರ ನೀಡಲು ನಿರ್ಲಕ್ಷ -ಪಟ್ಟಣ ಪಂಚಾಯ್ತಿ ವಸ್ತುಗಳ ಜಪ್ತಿಗೆ ಕೋರ್ಟ ಆದೇಶ! ಮುಂದೇನಾಯ್ತು?
ಕಾರವಾರ :- ಮಳೆ ಹಾನಿ ಪರಿಹಾರ ನೀಡದೇ ನಿರ್ಲಕ್ಷ ಮಾಡಿದ ಹೊನ್ನಾವರ (Honnavar)ಪಟ್ಟಣ ಪಂಚಾಯ್ತಿ ಕಚೇರಿಯನ್ನೇ ಜಪ್ತಿಗೆ ತಾಲೂಕು ಕೋರ್ಟ ಆದೇಶ ನೀಡಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ನಗರದ ಪಣ್ಣಣ ಪಂಚಾಯತ್ ನಿಂದ 2014 ರಲ್ಲಿ ಮಳೆಯಿಂದ ನಗರದ ಗಟಾರದ ನೀರು ಕೇಶವ ನಾಯಕ ಎಂಬುವವರ ಬಟ್ಟೆ ಅಂಗಡಿಗೆ ನುಗ್ಗಿ ಹಾನಿ ಸಂಭವಿಸಿತ್ತು.ಹಾನಿಯ ಪರಿಹಾರ ನೀಡದೇ ಕೇಶವ ನಾಯಕ ಅವರು ಪಟ್ಟಣಪಂಚಾಯತ್ ಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಇದನ್ನು ಪ್ರಶ್ನಿಸಿ ತಾಲೂಕು ಕೋರ್ಟ ಮೆಟ್ಟಿಲೇರಿದ್ದ ಕೇಶವ ನಾಯಕ ಪರ ಕೋರ್ಟ ಆದೇಶ ನೀಡಿ 50 ಸಾವಿರ ಪರಿಹಾರ ನೀಡುವಂತೆ ಸೂಚಿಸಿತ್ತು.
ಪರಿಹಾರ ನೀಡಲು ಆದೇಶ ನೀಡಿ ಹತ್ತು ತಿಂಗಳಾದರೂ ಪರಿಹಾರ ನೀಡದೇ ನಿರ್ಲಕ್ಷ ವಹಿಸಿತ್ತು .ಈ ಹಿನ್ನೆಲೆಯಲ್ಲಿ
ಕೇಶವ ನಾಯಕ ಅವರು ಹೊನ್ನಾವರ ಕೋರ್ಟ ನಲ್ಲಿ ಅಮಲಜಾರಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ತನಿಖೆ ಕೈಗೊಂಡ ಹೊನ್ನಾವರ ತಳಹಂತದ ಕೋರ್ಟ ಹೊನ್ನಾವರದ ಪಟ್ಟಣ ಪಂಚಾಯತ್ ಕಚೇರಿಯನ್ನು ಜಪ್ತಿಪಡಿಸಿಕೊಳ್ಳಲು ಆದೇಶ ಮಾಡಿದೆ. ತಕ್ಷಣ ಎಚ್ಚೆತ್ತ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಹೊನ್ನಾವರದ ನ್ಯಾಯಾಲಯದಲ್ಲಿ ಮೇಲ್ವನವಿ ಸಲ್ಲಿಸಿದ್ದು ಇದೀಗ ಜಪ್ತಿಗೆ ತಾತ್ಕಾಲಿಕ ತಡೆ ದೊರೆತಿದೆ.