Honnavara: ಪ್ರತ್ತೇಕ ಅಪಘಾತ 12 ಜನರಿಗೆ ಗಾಯ
ಹೊನ್ನಾವರ ಪ್ರತ್ಯೇಕ ಅಪಘಾತ 12 ಜನರಿಗೆ ಗಾಯ ಬೈಕ್ ಜಕಂ

ಕಾರವಾರ :- ಗೋವಾ(goa) ಪ್ರವಾಸಕ್ಕೆ ತೆರಳುತಿದ್ದ ಪ್ರವಾಸಿಗರ ಬಸ್ ಗುಡ್ಡಕ್ಕೆ ಡಿಕ್ಕಿಯಾಗಿ ಅಪಘಾತ ಒಂಬತ್ತು ಜನರಿಗೆ ಗಂಭೀರ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ಇಂದು ಸಂಜೆ ನಡೆದಿದೆ.
ಚಿಕ್ಕಮಗಳೂರಿನಿಂದ (Chikkamagalur) ಗೋವಾಗೆ ಹೊರಟಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಗುಡ್ಡಕ್ಕೆ ಡಿಕ್ಕಿಯಾಗಿದೆ.
ಬಸ್ಸಿನಲ್ಲಿದ್ದ 9 ಜನರಿಗೆ ಗಂಭೀರ ಗಾಯವಾಗಿದ್ದು ಗಾಯಾಳುಗಳನ್ನು ಹೊನ್ನಾವರ(Honnavara) ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಹೊನ್ನಾವರದ ಬಾಳೆಗದ್ದೆಯಲ್ಲಿ ನಿಲ್ಲಿಸಿಟ್ಟಿದ್ದ ಟೆಂಪೋ ಚಲಿಸಿ ಅಪಘಾತವಾಗಿ ಇಬ್ಬರಿಗೆ ಗಾಯವಾಗಿ ಒಂದು ಬೈಕ್ ಜಕಂ ಆದ ಘಟನೆ ನಡೆದಿದೆ.
ಇದನ್ನೂ ಓದಿ:-Honnavara ಗರ್ಭಧರಿಸಿದ್ದ ಗೋಹತ್ಯೆ ಮಾಡಿದ್ದ ಓರ್ವ ಆರೋಪಿ ಬಂಧನ ! ಕೆಂಡ ಹಿಡಿದು ನಿಂತವರ ಸುತ್ತಾ ಹಲವು ಪ್ರಶ್ನೆ? ಏನದು
ಮದುವೆ ಮನೆಗೆ ಜನರನ್ನು ತುಂಬಿಕೊಂಡು ಬಂದಿದ್ದ ಟೆಂಪೋವನ್ನು ಕಲ್ಯಾಣ ಮಂಡಪದ ಮುಂಭಾಗ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದು ಟೆಂಪೋ ಇಳಿಜಾರಿನಲ್ಲಿ ಚಲಿಸಿ ಅಪಘಾತ ಸಂಭವಿಸಿದೆ.ಟೆಂಪೋ ದಲ್ಲಿ ಇದ್ದ ಇಬ್ಬರಿಗೆ ಗಾಯ ವಾಗಿದ್ದು ನಿಲ್ಲಿಸಿಟ್ಟ ಬೈಕ್ ಜಕಂ ಆಗಿದೆ.