For the best experience, open
https://m.kannadavani.news
on your mobile browser.
Advertisement

India: ತೆಂಗಿನ ನಾರಿನಲ್ಲಿ ಸಿದ್ದಪಡಿಸಿದ INS ಕೌಂಡಿನ್ಯ ಹಡಗು ಇಂದು ಲೋಕಾರ್ಪಣೆ -ವಿಶೇಷ ಏನು ಗೊತ್ತಾ 

ಕಾರವಾರ :- ಐದನೇ ಶತಮಾನದ ತಂತ್ರಜ್ಞಾನದಿಂದ ಪ್ರೇರಿತಗೊಂಡು ತೆಂಗಿನ ನಾರು ಬಳಸಿ ಸಿದ್ಧ ಮಾಡಿದ ಹಡಗು ಇಂದು ಲೋಕಾರ್ಪಣೆಗೊಳ್ಳಲಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಇಂದು ಆಯೋಜನೆಯಾಗಿರುವ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಾರ್ಪಣೆ ಮಾಡುವರು.
09:23 AM May 21, 2025 IST | ಶುಭಸಾಗರ್
ಕಾರವಾರ :- ಐದನೇ ಶತಮಾನದ ತಂತ್ರಜ್ಞಾನದಿಂದ ಪ್ರೇರಿತಗೊಂಡು ತೆಂಗಿನ ನಾರು ಬಳಸಿ ಸಿದ್ಧ ಮಾಡಿದ ಹಡಗು ಇಂದು ಲೋಕಾರ್ಪಣೆಗೊಳ್ಳಲಿದೆ. ಕಾರವಾರದ ಕದಂಬ ನೌಕಾನೆಲೆಯಲ್ಲಿ ಇಂದು ಆಯೋಜನೆಯಾಗಿರುವ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಾರ್ಪಣೆ ಮಾಡುವರು.
india  ತೆಂಗಿನ ನಾರಿನಲ್ಲಿ ಸಿದ್ದಪಡಿಸಿದ ins ಕೌಂಡಿನ್ಯ ಹಡಗು ಇಂದು ಲೋಕಾರ್ಪಣೆ  ವಿಶೇಷ ಏನು ಗೊತ್ತಾ 

India: ತೆಂಗಿನ ನಾರಿನಲ್ಲಿ ಸಿದ್ದಪಡಿಸಿದ INS ಕೌಂಡಿನ್ಯ ಹಡಗು ಇಂದು ಲೋಕಾರ್ಪಣೆ -ವಿಶೇಷ ಏನು ಗೊತ್ತಾ

Advertisement

ಕಾರವಾರ :- ಐದನೇ ಶತಮಾನದ ತಂತ್ರಜ್ಞಾನದಿಂದ ಪ್ರೇರಿತಗೊಂಡು ತೆಂಗಿನ ನಾರು ಬಳಸಿ ಸಿದ್ಧ ಮಾಡಿದ ಹಡಗು ಇಂದು ಲೋಕಾರ್ಪಣೆಗೊಳ್ಳಲಿದೆ.

ಕಾರವಾರದ (karwar) ಕದಂಬ ನೌಕಾನೆಲೆಯಲ್ಲಿ ಇಂದು ಆಯೋಜನೆಯಾಗಿರುವ ಸಮಾರಂಭದಲ್ಲಿ ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೋಕಾರ್ಪಣೆ ಮಾಡುವರು.

ನೌಕಾನೆಲೆ ಹಾಗೂ ಸಂಸ್ಕೃತಿ ಇಲಾಖೆಯ 'ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು. ಕೇಂದ್ರ ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಗೋವಾದ ಹೋಡಿ ಇನ್ನೋವೇಶನ್ಸ್ ಕಂಪನಿಯು ಈ ಹಡಗನ್ನು ಕಟ್ಟಿದ್ದು, ಫೆ.25 ರಂದು ಸಮುದ್ರಕ್ಕೆ ಇಳಿಸಲಾಗಿತ್ತು. ಭಾರತೀಯ ನೌಕಾಪಡೆ ಹಾಗೂ ಮದ್ರಾಸ್ ಐಐಟಿನ ಸಾಗರ ಇಂಜಿನಿಯರಿಂಗ್ ವಿಭಾಗದ ತಜ್ಞರು ಇದರ ಸಾಗರಯಾನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಡಗಿಗೆ ಐಎನ್‌ಎಸ್‌ ಕೌಂಡಿನ್ಯ(INS Kaundinya)ಎಂದು ಹೆಸರಿಟ್ಟು ಲೋಕಾರ್ಪಣೆ ಮಾಡಲಾಗುವುದು.

ವರ್ಣಚಿತ್ರದ ಪ್ರೇರಣೆ:

ಸಿದ್ದವಾಗುತ್ತಿರುವ INS ಕೌಂಡಿನ್ಯ ಶಿಪ್

ಅಜಂತಾ ಗುಹೆಗಳಲ್ಲಿರುವ ವರ್ಣಚಿತ್ರ ವನ್ನು ಆಧಾರವಾಗಿಟ್ಟುಕೊಂಡು ಹಡಗು ನಿರ್ಮಿಸಲಾಗಿದೆ. ಮರದ ಹಲಗೆಗಳನ್ನು ತೆಂಗಿನ ನಾರು ಅಥವಾ ಕತ್ತದ ಹಗ್ಗದಿಂದ ಹೊಲಿಯಲಾಗಿದೆ. 2023ರ ಜುಲೈನಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯ, ನೌಕಾಸೇನೆ ಹಾಗೂ ಹೋಡಿ ಇನ್ನೋವೇಶನ್ಸ್ ಮಧ್ಯೆ ತ್ರಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್ 12ರಂದು ಹಡಗಿನ ತಳಪಾಯ ಹಾಕುವ ಮೂಲಕ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿತ್ತು.

ಇದನ್ನೂ ಓದಿ:-Navy :ಹಿಂದು ಮಹಾಸಾಗರ ದಲ್ಲಿ 9 ಮಿತ್ರ ರಾಷ್ಟ್ರದೊಂದಿಗೆ IOS ಸಾಗರ ಹೆಸರಿನ ಕಾರ್ಯಾಚರಣೆಗೆ ಕಾರವಾರ ದಲ್ಲಿ ಚಾಲನೆ

ಕೇರಳದಿಂದ ತರಿಸಿದ ಕಚ್ಚಾ ವಸ್ತುಗಳನ್ನು ಬಳಸಿ ಕಟ್ಟಲಾಗಿದೆ. ಬಾಬು ಶಂಕರನ್ ನೇತೃತ್ವದಲ್ಲಿ ಕುಶಲಕರ್ಮಿಗಳು ಸಾವಿರಾರು ಕೈಹೊಲಿಗೆ ಹಾಕಿ ಹಡಗಿನ ಸಂದುಗಳನ್ನು ಜೋಡಿಸಿದ್ದಾರೆ. ಲೋಕಾರ್ಪಣೆ ಬಳಿಕ ಭಾರತೀಯ ನೌಕಾಪಡೆಯು ಹಡಗನ್ನು ಸಾಂಪ್ರದಾಯಿಕ ಕಡಲ ವ್ಯಾಪಾರ ಮಾರ್ಗಗಳಲ್ಲಿ ಕೊಂಡೊಯ್ಯುವ ಯೋಜನೆ ಹೊಂದಿದೆ. ಗುಜರಾತ್‌ನಿಂದ ಓಮನ್‌ಗೆ ಮೊದಲ ಕಡಲಯಾನ ನಡೆಯಲಿದೆ. ಪ್ರಾಚೀನ ಭಾರತವು ಶ್ರೀಮಂತ ನೌಕಾ ವ್ಯವಸ್ಥೆ ಹೊಂದಿತ್ತು ಎಂಬುದನ್ನು ಬಿಂಬಿಸಲು ಈ ಹಡಗನ್ನು ಸಿದ್ಧ ಮಾಡಲಾಗಿದೆ.

Advertisement
Tags :
Advertisement
Advertisement

.

tlbr_img1 ಹೋಮ್ tlbr_img2 ಟ್ರೆಂಡಿಂಗ್ tlbr_img3 ವಿಡಿಯೋ