Karwar:ದೇಶದಲ್ಲಿ 7,63,433 ದೇವಸ್ಥಾನಗಳನ್ನು ಕಾಂಗ್ರೆಸ್ ಕಾಲದಲ್ಲೇ ಕಟ್ಟಿಸಿರೋದು. ಬಿಜೆಪಿಯವರು ರಾಮ ಮಂದಿರ ಬಿಟ್ಟು ಬೇರೇನೂ ಕಟ್ಟಿಲ್ಲ!
ದೇಶದಲ್ಲಿ 7,63,433 ದೇವಸ್ಥಾನಗಳನ್ನು ಕಾಂಗ್ರೆಸ್ ಕಾಲದಲ್ಲೇ ಕಟ್ಟಿಸಿರೋದು. ಬಿಜೆಪಿಯವರು ರಾಮ ಮಂದಿರ ಬಿಟ್ಟು ಬೇರೇನೂ ಕಟ್ಟಿಲ್ಲ-ಸಂತೋಷ್ ಲಾಡ್
ಕಾರವಾರ : ಬಿಜೆಪಿಯವರಿಗೆ ಹಿಂದುಸ್ತಾನ, ಮುಸಲ್ಮಾನ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅಸ್ಪೃಶ್ಯತೆ ವ್ಯವಸ್ಥೆ ಬಗ್ಗೆ, ಶೋಷಿತ ವರ್ಗಗಳು ತುಳಿತಕ್ಕೊಳಗಾದ ಬಗ್ಗೆ ಯಾರೂ ಮಾತನಾಡಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಟೀಕಿಸಿದರು.
ಕಾರವಾರ (karwar) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್‌ಎಸ್‌ಎಸ್ ಇರದಿದ್ದರೆ ಭಾರತ ಮುಸ್ಲಿಮೀಕರಣವಾಗುತ್ತಿತ್ತು ಎನ್ನುವ ಜಗದೀಶ ಶೆಟ್ಟರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ಬೇರೆ ದೇಶಗಳಲ್ಲಿ ಹೋಗಿ ಕೆಲಸ ಮಾಡುತ್ತಿರುವ ಹಿಂದುಗಳನ್ನು ವಾಪಸ್ ಕರೆಸಿಕೊಳ್ಳುತ್ತೀರಾ? ಬಾಂಗ್ಲಾದೇಶೀಯರನ್ನ ಹೊರಗೆ ಕಳುಹಿಸಬೇಕು ಅಂತಾರೆ. ಯುಪಿಎ ಸರ್ಕಾರದಲ್ಲಿ ನಾವೆಷ್ಟು ಜನರನ್ನ ಹೊರಗೆ ಕಳುಹಿಸಿದೀವಿ, ಇವರ ಸರ್ಕಾರದಲ್ಲಿ ಎಷ್ಟು ಹೊರಗೆ ಕಳುಹಿಸಿದ್ದಾರೆ ಅಂಕಿಅಂಶ ಕೊಡ್ತಾರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:-Karwar: ಕೊಡಸಳ್ಳಿಯಲ್ಲಿ ಭೂ ಕುಸಿತ ಹತ್ತು ದಿನದ ನಂತರ ಸಂಚಾರಕ್ಕೆ ಮುಕ್ತ
ಜಗದೀಶ ಶೆಟ್ಟರ್ ಸಾಹೇಬರೇ ನೀವೂ ಮುಖ್ಯಮಂತ್ರಿ ಆಗಿದ್ದವರು. ಈಗ ಸಂಸದರಾಗಿದ್ದೀರಿ, ದೇಶಕ್ಕೆ ನಿಮ್ಮ ಪಕ್ಷ ಏನು ಮಾಡಿದೆ ಹೇಳಿ. 70 ವರ್ಷಗಳಿಂದ ದೇಶದಲ್ಲಿದ್ರು ಏನಾಗಿತ್ತು? ನೆಹರು, ಮಹಾತ್ಮಾ ಗಾಂಧೀಜಿ ಅವರನ್ನು ಬೈಯ್ಯುತ್ತಾರೆ. ಬಿಜೆಪಿ ಬಂದು 11 ವರ್ಷ ಆಯ್ತು, ಅವರು ಹಿಂದುಗಳಿಗೆ ಏನು ಮಾಡಿದ್ದಾರೆ?ಎಷ್ಟು ಹಿಂದುಗಳು ದೇಶ ಬಿಟ್ಟು ಹೋಗಿದ್ದಾರೆ?, ಎಷ್ಟು ಮಂದಿ ಪಾಸ್‌ಪೋರ್ಟ್ ಸರೆಂಡರ್ ಮಾಡಿದಾರೆ?
45 ಲಕ್ಷ ಮಕ್ಕಳು ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಅವರನ್ನೆಲ್ಲ ವಾಪಸ್ ಕರೆಸಬೇಕಲ್ಲ. ಅವರು ಇಂಥದ್ದನ್ನೆಲ್ಲಾ ಚರ್ಚೆ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಅವರೇ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ದೇಶದಲ್ಲಿ 7,63,433 ದೇವಸ್ಥಾನಗಳನ್ನು (temple)ಕಾಂಗ್ರೆಸ್ ಕಾಲದಲ್ಲೇ ಕಟ್ಟಿಸಿರೋದು. ಬಿಜೆಪಿಯವರು ರಾಮ ಮಂದಿರ ಬಿಟ್ಟು ಬೇರೇನೂ ಕಟ್ಟಿಲ್ಲ, ಅದು ಕೂಡಾ ಕೇಂದ್ರದ ಹಣದಿಂದ ಕಟ್ಟಿದ್ದು ಪುಣ್ಯಾತ್ಮರು ಎಂದು ವ್ಯಂಗ್ಯವಾಡಿದ ಲಾಡ್, 7 ಲಕ್ಷಕ್ಕೂ ಮಿಕ್ಕಿ ದೇವಸ್ಥಾನಗಳು ಸ್ವಾತಂತ್ರ್ಯ ಪೂರ್ವದಿಂದಲೇ ಇವೆ. ನಮ್ಮ ಕಾಲದಲ್ಲಿ ಶಕ್ತಿಪೀಠಗಳಿತ್ತು,
ಈಗಲೂ ಚೆನ್ನಾಗಿ ನಡೆಯುತ್ತಿವೆ. ದೇಶದಲ್ಲಿ ಹೆಚ್ಚು ದೇವಸ್ಥಾನಗಳು ತಮಿಳುನಾಡಿನಲ್ಲಿವೆ, ಇಂಡೋನೇಷ್ಯಾದಲ್ಲಿ 11ಸಾವಿರಕ್ಕೂ ಮಿಕ್ಕಿ ದೇವಸ್ಥಾನಗಳಿವೆ. ಬಿಜೆಪಿಯವರು 11 ವರ್ಷದಿಂದ ಇಲ್ಲಿ ಆಳಿ ಹಿಂದೂಗಳಿಗೆ ಇವರಿಂದಲೇ ತೊಂದರೆಯಾಗಿದೆ.
ಎಲ್ಲಾ ಅಧಿಕಾರದಲ್ಲಿ ಬಿಜೆಪಿಯವರೇ ಇದ್ರೂ ಈಗ 11ವರ್ಷದ ಬಳಿಕ ಹಿಂದೂಗಳಿಗೆ ತೊಂದರೆಯಾಗಿದೆ. ನಿಮ್ಮ ತಾತ, ನಮ್ಮ ತಾತ ಹಿಂದೂಗಳಾಗಿದ್ರು, ಅವರಿಗೆ ಆಗದ ತೊಂದರೆ ಈಗ 11 ವರ್ಷದ ಬಳಿಕ ಆಗುತ್ತಿದೆ. ಈಗ ಹಿಂದೂಗಳು ಖತ್ರೇ ಮೇ ಹೈ, ಚುನಾವಣೆ, ಜನರ ವಿಚಾರ ಏನೇ ಕೇಳಿದ್ರೂ ಹಿಂದೂಗಳು ತೊಂದರೆಯಲ್ಲಿದ್ದಾರೆ. ಹಿಂದೂಗಳು ತೊಂದರೆಯಾಗುತ್ತಿದ್ರೆ ಇವರೇನು ಮಾಡ್ತಿದ್ದಾರೆ..? ಇವರೇ ಅಧಿಕಾರದಲ್ಲಿ ಇರೋದಲ್ವಾ...? ಚುನಾವಣೆ ಬರೋವಾಗ ಹಿಂದೂಗಳು, ಚುನಾವಣೆ ಮುಗಿದ್ಮೇಲೆ ಎಲ್ಲಾ ಡಬ್ಬಾ ಕ್ಲೋಸ್ ಎಂದು ಬಿಜೆಪಿ ಮೇಲೆ ಆಕ್ರೋಶ ಹೊರಹಾಕಿದರು.