Saif Ali Khan ಗೆ ಚಾಕು ಇರಿತ ಮೂವರ ಬಂಧನ
ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಮೇಲೆ ದುಷ್ಕರ್ಮಿಗಳು ಬಾದ್ರಾದ ಅವರ ಮನೆಯಲ್ಲಿ ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಸೈಪ್ ರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆ ಆಗಿದ್ದು ಎಂದು?
ಮುಂಬೈನ ಬಾಂದ್ರಾದಲ್ಲಿ ಸೈಫ್ ಅಲಿ ಖಾನ್ ಮೇಲೆ ತಡರಾತ್ರಿ 3 ಗಂಟೆಗೆ ದಾಳಿ ನಡೆದಿದೆ.ಬೈಕ್ ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳಿಂದ ಈ ಕೃತ್ಯ ಜರುಗಿದೆ. ಸೈಫ್ ಅಲಿ ಖಾನ್‌ಗೆ ಚಾಕುವಿನಿಂದ ಇರಿದು, ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ನಟನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಕರೀನಾ ಕಪೂರ್ ಮತ್ತು ಇಬ್ಬರೂ ಮಕ್ಕಳು ಸುರಕ್ಷಿತರಾಗಿದ್ದಾರೆ.
ಇದನ್ನೂ ಓದಿ:-Kumbhamela ಮೇಳದಲ್ಲಿ ಮಿಂಚುತ್ತಿರೋ ಈ ಬ್ಯೂಟಿಫುಲ್ ಸಾಧ್ವಿಯಾರು ಗೊತ್ತಾ?
ಆರು ಬಾರಿ ಚಾಕು ಇರಿತ!
ಇನ್ನು ನಟ ಸೈಪ್ ಗೆ ಆರು ಬಾರಿ ಚಾಕು ಇರಿಯಲಾಗಿದೆ, ಎರಡು ಕಡೇ ಚಾಕು ಇರಿದಿರುವುದು ಹೆಚ್ಚು ಆಳಕ್ಕೆ ಹೋಗಿದ್ದು ಸೈಪ್ ಗೆ ತೀವ್ರ ರಕ್ತಸ್ರಾವವಾಗಿದೆ.
ಇನ್ನು ಘಟನೆ ಸಂಬಂಧ ಮುಂಬೈ ಪೊಲೀಸರು ಮೂರು ಜನರನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ. ಮೂರು ಜನರಲ್ಲಿ ಸೈಫ್ ರವರ ಮನೆಯ ಕೆಲಸದವರು ಸಹ ಇದ್ದು ಇದೀಗ ಏತಕ್ಕಾಗಿ ಕೊಲೆ ಮಾಡಲು ಪ್ರಯತ್ನಿಸಿದ್ದರು ಎಂಬ ಬಗ್ಗೆ ತಿಳಿದುಬರಬೇಕಿದೆ.