Karwar ದಲ್ಲಿ ನೌಕಾದಳದಿಂದ ಅತ್ಯಾಧುನಿಕ COMBAT ಟ್ರೈನಿಂಗ್ ಸೆಂಟರ್
Karwar news :- ಭಾರತೀಯ ನೌಕಾಪಡೆ ಕರ್ನಾಟಕದ ಕರಾವಳಿ ನಗರ ಕಾರವಾರದಲ್ಲಿ (karwar) ಭಯೋತ್ಪಾದಕರು ಹಾಗೂ ಕಡಲ್ಗಳ್ಳರನ್ನು ಎದುರಿಸಲು ತನ್ನ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲು ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಸಿದ್ದತೆ ಮಾಡಿಕೊಂಡಿದೆ.
ಅತ್ಯಾಧುನಿಕ ತಂತ್ರಜ್ಞಾನದ ಸೌಲಭ್ಯದಲ್ಲಿ 75 ಎಕರೆ ಭೂಮಿಯಲ್ಲಿ ಈ ಕಮ್ಯಾಂಡೋ ತರಬೇತಿ ಕೇಂದ್ರ (CTC )ತಲೆಎತ್ತಲಿದೆ.
75 ಎಕರೆ ಭೂಮಿಯಲ್ಲಿ ಯುದ್ದ ತರಬೇತಿಗೆ ಬೇಕಾದ ವ್ಯವಸ್ಥೆ , ಹಳ್ಳಿ,ನಗರದ ಸೃಷ್ಟಿ, ಸಿಮ್ಯುಲೇಟರ್‌ಗಳು ಮತ್ತು ಮಾಡ್ಯೂಲರ್ ಕಟ್ಟಡಗಳು, ‘ಮಲ್ಟಿಲೆವೆಲ್ ಕಿಲ್-ಹೌಸ್’, ತೈಲ ವೇದಿಕೆಯ ಮಾದರಿ, ಹಡಗಿನ ಮಾದರಿ, ವಿವಿಧ ಸಮುದ್ರಸ್ಥಿತಿಗಳನ್ನು ನಕಲಿಸಲು ಅಲೆಗಳನ್ನು ಸೃಷ್ಟಿಸಬಹುದಾದ ದೋಣಿಯ ತುಳುಕು, ನಗರ ಕೇಂದ್ರದ ಮಾದರಿ, ಗ್ರಾಮೀಣ ಪ್ರದೇಶದ ಮಾದರಿ ಮತ್ತು ಅಡಚಣೆ-ಜಂಗಲ್ ಫೈರಿಂಗ್ ಶ್ರೇಣಿಯಂತಹ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ:- Karwar ಜೈಲಿನಲ್ಲಿ ಸೊಳ್ಳೆ ಕಾಟ, ಸುಣ್ಣ ಬಣ್ಣ ಕಾಣದ ಗೋಡೆಗಳು ಕೈದಿಗಳಿಂದ ಮಾನವ ಹಕ್ಕು ಆಯೋಗಕ್ಕೆ ದೂರು !
ಭಾರತದ ನೌಕಾಪಡೆ ಯೋಜನೆ ವಿವರಿತ ಪ್ರಾಜೆಕ್ಟ್ ಇದೀಗ ಕಾರ್ಯಗತವಾಗುತಿದ್ದು ಭಾರತೀಯ ನೌಕಾಪಡೆಯು ತನ್ನ ಸಿಬ್ಬಂದಿ, ಮಾರ್ಕೋಸ್ ಕಮಾಂಡೋಗಳು ಮತ್ತು ವಿದೇಶಗಳ ವಿಶೇಷ ಪಡೆಗಳಿಗೆ ತರಬೇತಿ ನೀಡಲು ಕಾರವಾರದಲ್ಲಿ ಅತ್ಯಾಧುನಿಕ ಯುದ್ಧ ತರಬೇತಿ ಕೇಂದ್ರವನ್ನು (ಸಿಟಿಸಿ) ಅನುಕೂಲ ಆಗಲಿದೆ.
ಕಾರವಾರ ಕದಂಬ ನೌಕಾ ನೆಲೆಯಲ್ಲಿ ಈಗಾಗಲೇ ಎರಡನೇ ಹಂತದ ಕಾಮಗಾರಿ ಮುಕ್ತಾಯವಾಗುತ್ತಿದೆ. ಇದರ ಜೊತೆಗೆ ದೇಶದ ವಿಶೇಷ ನೌಕಾ ಕಮಾಂಡರ್ ಗಳಿಗೆ ತರಬೇತಿ ಕೇಂದ್ರವೂ ಕಾರವಾರದಲ್ಲಿ ಆಗಲಿದೆ.
ಈ ಮೂಲಕ ಕಾರವಾರದ ಕದಂಬ ನೌಕಾನೆಲೆ ಏಷ್ಯಾದ ಬಲಿಷ್ಟ ನೌಕಾ ನೆಲೆಯಾಗಿ ಮತ್ತೆ ಹೊರಹುಮ್ಮಲಿದೆ.