SSLC ಪರೀಕ್ಷೆಯಲ್ಲಿ ಫೇಲ್ -ಹೃದಯಾಘಾತದಲ್ಲಿ ವಿದ್ಯಾರ್ಥಿನಿ ಸಾ**
ಕಾರವಾರ:- SSLC ಪರೀಕ್ಷಾ ಫಲಿತಾಂಶ ನೋಡಿ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪೋಟೋಲಿಯ ದಲ್ಲಿ ನಿನ್ನೆ ನಡೆದಿದೆ. ತನುಜಾ ಮಿರಾಶಿ (16) ಹೃದಯಾಘಾತದಿಂದ ಸಾವು ಕಂಡ ವಿದ್ಯಾರ್ಥಿನಿಯಾಗಿದ್ದಾರೆ
10:08 PM May 03, 2025 IST | ಶುಭಸಾಗರ್
SSLC ಪರೀಕ್ಷೆಯಲ್ಲಿ ಫೇಲ್ -ಹೃದಯಾಘಾತದಲ್ಲಿ ವಿದ್ಯಾರ್ಥಿನಿ ಸಾ**
Advertisement
ಕಾರವಾರ:- SSLC ಪರೀಕ್ಷಾ ಫಲಿತಾಂಶ ನೋಡಿ ಆಘಾತಕ್ಕೊಳಗಾದ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪೋಟೋಲಿಯ ದಲ್ಲಿ ನಿನ್ನೆ ನಡೆದಿದೆ. ತನುಜಾ ಮಿರಾಶಿ (16) ಹೃದಯಾಘಾತದಿಂದ ಸಾವು ಕಂಡ ವಿದ್ಯಾರ್ಥಿನಿಯಾಗಿದ್ದಾರೆ.
ಬಾಪೇಲಿ ಕ್ರಾಸ್‌ನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಪರೀಕ್ಷಾ ಫಲಿತಾಂಶ ಬಂದ ನಂತರ ತಾನು ಅನುತ್ತೀರ್ಣಳಾಗಿದ್ದೇನೆ ಎಂದು ತಿಳಿದು ಆಘಾತಕ್ಕೆ ಒಳಗಾಗಿದ್ದಳು.ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾಳೆ.
ತನುಜಾ ಶಾಂತ ಸ್ವಭಾವದವಳಾಗಿದ್ದು, ಶಾಲೆಯಲ್ಲಿ ವಿದ್ಯಾರ್ಥಿಗಳ ಜತೆ ಚೆನ್ನಾಗಿ ಬೆರೆಯುತ್ತಿದ್ದಳು,SSLCಯ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿರುವ ಬಗ್ಗೆ ತಿಳಿದು ಆಘಾತಕ್ಕೊಳಗಾಗಿ ಹೃದಯಾಘಾತ ವಾಗಿದೆ.
Advertisement