Kaiga| ಕೈಗಾ ಅಣು ತ್ಯಾಜ್ಯ ಘಟಕದಲ್ಲಿ ತುಂಡಾಗಿ ಬಿದ್ದ ಗೇಟ್ | CISF ಯೋಧ ಸಾವು
Kaiga| ಕೈಗಾ ಅಣು ತ್ಯಾಜ್ಯ ಘಟಕದಲ್ಲಿ ತುಂಡಾಗಿ ಬಿದ್ದ ಗೇಟ್ | CISF ಯೋಧ ಸಾವು
ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕೈಗಾ ಅಣು ವಿದ್ಯುತ್ ಸ್ಥಾವರದ ಒಳ ಆವರಣದಲ್ಲಿ ನ ಅಣು ತ್ಯಾಜ್ಯ ಘಟಕದಲ್ಲಿ ಕಾವಲಿಗೆ ನಿಂತಿದ್ದ ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆಯ ( CISF) ಹೆಡ್ ಕಾನ್‌ಸ್ಟೆಬಲ್ ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
KAIGA|ಕೈಗಾ ದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ !
ಮಹಾರಾಷ್ಟ್ರದ ಮಹಿಮಾನಗಡ್‌ನವರಾಗಿದ್ದ ಶೇಖರ ಭೀಮರಾವ್ ಜಗದಾಲೆ (48)ಅವಘಡದಲ್ಲಿ ಮೃತನಾದ ಯೋಧನಾಗಿದ್ದಾರೆ.ಆತ ಕಾವಲು ಕಾಯುತಿದ್ದ ವೇಳೆ ಭಾರದ ದೊಡ್ಡ ಗೇಟ್ ತುಂಡಾಗಿ ಮೈಮೇಲೆ ಬಿದ್ದಿದ್ದರಿಂದ ಗಂಭೀರ ಗಾಯಗೊಂಡಿದ್ದ ಅವರನ್ನು ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆತರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ.
Kaiga:ಕೈಗಾದಲ್ಲಿ ಎರಡು ಹೊಸ ಅಣು ವಿದ್ಯುತ್ ಘಟಕ: ಈವರೆಗೆ ಕನ್ನಡಿಗರಿಗೆ ಸಿಕ್ಕಿದ್ದೆಷ್ಟು ಉದ್ಯೋಗ ಗೊತ್ತಾ
ಅಣು ತ್ಯಾಜ್ಯ ವಿಲೇವಾರಿ ಘಟಕದ ಗೇಟ್ ಎದುರು ಶನಿವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಶೇಖರ ಅವರ ಮೇಲೆ ಗೇಟ್ ಕುಸಿದು ಬಿದ್ದು ತಲೆಗೆ ಬಲವಾದ ಏಟು ಬಿದ್ದಿತ್ತು.ತಕ್ಷಣ ಎಸ್‌ಟಿಎಫ್ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯುವಷ್ಟರಲ್ಲಿ ಶೇಖರ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.