local-story
KAIGA|ಕೈಗಾ ದಲ್ಲಿ ಉದ್ಯೋಗ ಮಾಹಿತಿ ನೀಡದೇ ಕನ್ನಡಿಗರಿಗೆ ವಂಚನೆ !
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಕರೆದಿದೆ. ಆದರೇ ಈ ವಿಷಯ ಕನ್ನಡಿಗರಿಗೆ ತಿಳಿಯದಂತೆ ಮುಚ್ಚಿಟ್ಟು ಕೇರಳ,ತಮಿಳುನಾಡು ,ಮಹರಾಷ್ಟ್ರ ,ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯದ ಪತ್ರಿಕೆಯಲ್ಲಿ ಮಾತ್ರ ಇದರ ಬಗ್ಗೆ ಪ್ರಕಟಣೆ ಹೊರಡಿಸಿದ್ದು , ಕನ್ನಡದ ಯಾವ ಮಾಧ್ಯಮದಲ್ಲೂ ಈ ವಿಷಯ ತಿಳಿಯದಂತೆ ನೋಡಿಕೊಂಡಿದ್ದು ಈ ಮೂಲಕ ಕನ್ನಡ ನೆಲದಲ್ಲಿ ಇದ್ದರೂ ಕನ್ನಡಿಗರಿಗೆ ಅದರಲ್ಲೂ ಅಣು ಸ್ಥಾವರಕ್ಕಾಗಿ ನೆಲ ಕೊಟ್ಟ ಜಿಲ್ಲೆಯ ಜನರಿಗೂ ತಿಳಿಯದಂತೆ ನೋಡಿಕೊಳ್ಳುವ ಮೂಲಕ ದ್ರೋಹ ಎಸಗಿದೆ.10:40 AM Mar 15, 2025 IST